Tuesday, April 30, 2019

ಕರ್ಣವೇಧ ಸಂಸ್ಕಾರ-ಶಿಶುವನ್ನು ಹಿಂಸಿಸುವುದು ತರವೇ? (Karnavedha samskara- shishuvannu himsisuvudu tarave?)

ಲೇಖಕರು: ತಾರೋಡಿ ಸುರೇಶ



ಕರ್ಣವೇಧ ಎಂದರೆ ಕಿವಿ ಚುಚ್ಚುವುದು ಎಂದರ್ಥ. ಚತುರ್ಭದ್ರಮಯವಾದ ಬಾಳ್ವೆಗೆ ಬೇಕಾದ ಮುಖ್ಯ ಸಂಸ್ಕಾರಗಳಲ್ಲಿ ಕರ್ಣವೇಧವೂ ಒಂದು. ಇದು ಸ್ತ್ರೀಪುರುಷ ಶಿಶು- ಇಬ್ಬರಿಗೂ ಮಾಡಬೇಕಾದ್ದು. ಅನ್ಯಾನ್ಯ ದೇಶ-ಜನಾಂಗಗಳಲ್ಲಿ ಇದು ಕಂಡುಬಂದರೂ ಪುರುಷಾರ್ಥಮಯ ಜೀವನದ ಪರಿಕಲ್ಪನೆ ಅಲ್ಲಿ ಇಲ್ಲವಾದುದರಿಂದ ಅವುಗಳನ್ನು ಮಹರ್ಷಿಗಳು ಕೊಟ್ಟ ಸಂಸ್ಕಾರಗಳಿಗೆ ಹೋಲಿಸುವಂತಿಲ್ಲ. ಚುಚ್ಚುವುದರಿಂದ ಎಳೇ ಶಿಶುವಿಗೆ ಹಿಂಸೆಯಾದರೂ, ಔಷಧವು ಕಹಿಯಾದರೂ ಆರೋಗ್ಯಕ್ಕಾಗಿ ಸೇವಿಸುವಂತೆ, ಆಚರಿಸಲೇಬೇಕಾದ ಸಂಸ್ಕಾರವಿದು.

ಕಲಾಪ: 

ಮಗುವಿಗೆ ಹಲ್ಲು ಹುಟ್ಟುವ ಮೊದಲೇ ಮಾಡಬೇಕು. ಕಾಲ ಮತ್ತು ಕಲಾಪಗಳಲ್ಲಿ ವಿಭಿನ್ನ ಸಂಪ್ರದಾಯಗಳಲ್ಲಿ ಚಿಕ್ಕಪುಟ್ಟ  ಭೇದಗಳಿರುತ್ತವೆ. ತಮ್ಮ ತಮ್ಮ ಸಂಪ್ರದಾಯಗಳಿಗನುಗುಣವಾಗಿ ಆಚರಿಸಬಹುದು. ಅನ್ಯ ಸಂಪ್ರದಾಯಗಳಲ್ಲಿರುವ  ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮ ಕಲ್ಪ. ಪೂರ್ವಾಹ್ನದಲ್ಲಿ, ತಂದೆಯು ಮಗುವನ್ನು ತೊಡೆಯಮೇಲೆ ಕೂರಿಸಿಕೊಂಡು “ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ,,,,,,,”ಮಂತ್ರಗಳನ್ನು ಪಠಿಸಬೇಕು. ಪುರುಷಶಿಶುವಾದರೆ ಮೊದಲು ಬಲಗಿವಿಯನ್ನೂ ನಂತರ ಎಡಗಿವಿಯನ್ನೂ ಚುಚ್ಚಬೇಕು. ಹೆಣ್ಣುಮಗುವಾದರೆ ಮೊದಲು ಎಡಗಿವಿ ನಂತರ ಬಲಕಿವಿ. ವೇಧನಕ್ರಿಯೆಯನ್ನು ಶರೀರ-ಶಾರೀರ ಮರ್ಮಜ್ಞನೇ ಮಾಡಬೇಕು. ಈಗ ಅಕ್ಕಸಾಲಿಗನಿಂದ ಸ್ವರ್ಣತಂತಿಯಿಂದ ಚುಚ್ಚಿಸಿ ಆ ತಂತಿಯನ್ನು ಹಾಗೆಯೇ ಸುತ್ತಿ ಇಡುವುದು ರೂಢಿ. ಸುಮಂಗಲಿಯರಿಂದಲೂ ಮಾಡಿಸುವುದುಂಟು. ನಂತರ ಕೊಬ್ಬರಿಯನ್ನು ಒಡೆದು ಮಗುವಿನ ಕಿವಿಯಮೇಲೆ ಊದುತ್ತಾರೆ.ಇದರಿಂದ ನೋವು ಕಡಿಮೆಯಾಗುತ್ತದೆ. ಕೊಬ್ಬರಿಯನ್ನು ಸೇವಿಸಿ ಸಂತೋಷವಾದ ಮನಸ್ಸಿನಿಂದ ಊದುವುದೂ ಉಂಟು. ಇದು ಆಶೀರ್ವಾದವೂ ಆಗುವುದು. ನಂತರ ಸತ್ಪಾತ್ರರಿಗೆ ದಾನ,ಭೋಜನ ಇತ್ಯಾದಿ ಯೋಗ-ಭೋಗಮಯವಾದ ಜೀವನಕ್ಕಾಗಿ ಎರಡು ಕಿವಿಗೂ ಎರೆಡೆರಡು ಸೂತ್ರವನ್ನು ಹಾಕುತ್ತಾರೆ. ಚುಚ್ಚುವ ಮುನ್ನ ಅರಗನ್ನು ಹಚ್ಚುತ್ತಾರೆ, ಕಾರಣ ಅರಗಿನಲ್ಲಿ ಗಾಯವನ್ನು ಬೇಗ ಒಣಗಿಸುವ ಗುಣವಿದೆ.ಜೊತೆಗೆ ವಾತ-ಪಿತ್ತ-ಕಫ ಸಂಬಂಧವಾದ ಇನ್ನೂ ಕೆಲವು ದೋಷಗಳನ್ನು ಅದು ನಿವಾರಿಸುವುದು. ಮಗುವು ಎಳೆಯದಾದಷ್ಟೂ ಚುಚ್ಚುವುದು ಸುಲಭ. ಹಿಂಸೆ ಕಡಿಮೆ. ಬಹುಮುಖ್ಯವಾದದ್ದು ಆ ರಂಧ್ರದ ಮೂಲಕ ಸೂರ್ಯರಶ್ಮಿ ಪ್ರವೇಶಿಸುವಂತಿರಬೇಕು. ಇಲ್ಲದಿದ್ದರೆ ಕೇವಲ ಹಿಂಸೆಯಲ್ಲಿ ಪರ್ಯವಸಾನವಾಗುತ್ತದೆ.  

ಕರ್ಮದ ಉದ್ಧೇಶ: 

ಈ ಸಂಸ್ಕಾರದಿಂದ ಆಧಿ-ವ್ಯಾಧಿಗಳ ನಿವಾರಣೆಯಾಗುತ್ತದೆ. “ರಕ್ಷಾಭೂಷಣ ನಿಮಿತ್ತಂ ಬಾಲಸ್ಯ ಕರ್ಣೌ ವಿಧ್ಯೇತ್”ಎಂದು ಸುಶ್ರುತನು ಹೇಳು ತ್ತಾನೆ.  ಆಯುರ್ವೇದ, ಜ್ಯೋತಿಷ ಹಾಗೆಯೇ ಧರ್ಮಶಾಸ್ತ್ರಗಳೆಲ್ಲದರಲ್ಲಿಯೂ ಕೊಂಡಾಡಲ್ಪಟ್ಟಿದೆ. ಭೂಷಣವೂ ಜೊತೆಗೆ ರಕ್ಷಕವೂ ಆಗಿದೆ. ಅನೇಕ ರೋಗಗಳನ್ನು, ವಿಶೇಷವಾಗಿ ಸ್ತ್ರೀಸಂಬಂಧವಾದ  ರೋಗಗಳನ್ನು ಇದು ತಡೆಗಟ್ಟುತ್ತದೆ.

ಶರೀರದಲ್ಲಿ ಯೋಗವಿಘ್ನಕಾರಕಗಳಾದ ಕೆಲವು ಕೇಂದ್ರಗಳಿರುತ್ತವೆ. ಅವು ಕಾಲವಿಶೇಷದಲ್ಲಿ ಪ್ರಬಲಗೊಂಡು ಆಕ್ರಮಿಸುತ್ತವೆ. ಮರ್ಮಜ್ಞನು ನಡೆಸುವ ಕರ್ಣವೇಧನ ಸಂಸ್ಕಾರದಿಂದ ಅಂತಹ ಕೇಂದ್ರಗಳು ನಿರ್ವೀರ್ಯಗೊಂಡು ಸಾಧನೆಗೆ  ಪೋಷಕವಾಗಿ ಪರಿಣಮಿಸುತ್ತದೆ.

ಆಭರಣಗಳನ್ನು ಧರಿಸುವುದೂ ಆವಶ್ಯಕವೇ? ಇಲ್ಲದಿದ್ದರೆ ರಂಧ್ರಗಳು ಮುಚ್ಚಿಹೋಗುತ್ತವೆ ಎನ್ನುವುದು ಒಂದು ಕಾರಣ. ಸ್ತ್ರೀಪುರುಷರಿಬ್ಬರೂ ಧರಿಸಬೇಕು. ಶಾಸ್ತ್ರೀಯವಾದ ಆಭರಣಗಳಿಂದ ವಿಶೇಷ ಲಾಭ. ಮರ್ಮವರಿತು ಆಯಾ ಸ್ಥಾನದಲ್ಲಿ ಯುಕ್ತವಾದದ್ದನ್ನೇ ಧರಿಸಬೇಕು.ಆಭರಣಗಳು ಬಾಹ್ಯಾಭ್ಯಂತರ ದೋಷಗಳಿಂದ ರಕ್ಷಿಸುತ್ತವೆ.

ಹೀಗೆ ಕರ್ಣವೇಧ ಸಂಸ್ಕಾರವು ಭೂಷಣವೂ ಆಗಿದ್ದು, ಆಧಿವ್ಯಾಧಿಗಳಿಂದ ರಕ್ಷಿಸುವ ಎಲ್ಲರೂ ಆಚರಿಸಬಹುದಾದ ಮುಖ್ಯತಮ ಸಂಸ್ಕಾರಗಳಲ್ಲಿ ಒಂದಾಗಿದೆ. ಇಂದು ಲುಪ್ತವಾಗುತ್ತಿರುವುದು ಖೇದದ ಸಂಗತಿ.


ಸೂಚನೆ: 30/04/2019 ರಂದುಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 29, 2019

A Benevolent Theft

Article in Kannada and English Rendering by: Mythily Raghavan



Srimad Bhaagavata Puraana is held in great esteem by all the devotees. Its dashama skanda which depicts Krishnaavataara is the star of attraction among the different skandas of the puraana. The childish pranks of Baalakrishna described therein find a special place in the hearts of everyone. Young kids have a great fascination for this part of the puraana and feel so highly thrilled by the mischiefs of Lord Krishna that they wish to listen to those stories time and again. One among such pranks is the stealing of butter by the Lord from his own house as well as from others’ houses.

Sri Krishna, as everybody knows, was brought up as the son of Nanda, the chieftain of Nandagokula. Obviously, there was no dearth of milk or butter in his palace. Krishna was also the darling of entire Gokula, not to mention about the gopis. So, he could have had his wishful of butter any day, anytime and from anyone. In spite of it, it is said that he sometimes took to stealing butter! The act of stealing is generally considered deplorable by one and all and invariably every parent takes care to instil its ill-effects into the young minds of their children. But the irony here is that the theft by Sri Krishna is adored and admired by all the devotees. Not to stop at that, its glory is sung by none other than the great sage Shuka Maharshi who is well-known for his steadfastness in righteousness! He even proclaims that the recitation or listening of this story of the Lord stealing the butter redeems one from all the sins and enhances the devotion to Him. 

How is it justified? What if someone tries to justify on the same lines the stealing of petty things by their children? Deciding the correctness or otherwise of an act: It is common knowledge that an act is considered right if it bestows some benefit. The attitude of stealing, in all probabilities, may lead to dangerous decay of moral values in a child. But the great seers have found that the ‘Butter-theft’ by Lord Krishna had no damaging effects at all! On the contrary it induced serenity in the minds of the people around. A turbid lake cannot reflect things lying at its bottom but when it turns limpid the base is clearly visible. Likewise, a clean and clear mind, free from the pulls and pressures of the senses, shows the Radiance beaming within, like the limpid water. The tranquil mind of the jnaanis is like limpid water and always enjoys the ecstasy of the inner Self.

Prasannata-Prasaada

If such great personages grace a thing merely by their thought then their tranquillity gets transmitted to that object and this is termed as the jnaani’s ‘Manah prasaada.’ If a jnaani casts his glimpse on a certain material it induces equanimity (prasannata) and then that thing acquires the title ‘Prasaada’. If it is graced by his touch its serenity is increased many-folds and if ever the seer partakes of an item and leaves the rest as ‘prasaada’ then such an item has its ‘prasaadatva’ (the potential to induce equanimity in others) enhanced infinitely! This potential and its gradations do not fall within the scope of cognition of a common man. It can only be perceived by the jnaanis. If such is the ability exhibited by those who have visualised the Supreme Light within, how are we to assess and admire the acts of The Supreme Lord Himself?!

Elucidation by Sriranga Mahaguru:

Sriranga Mahaguru who had a thorough perception of the secrets behind the incarnations of the Supreme has thus explained the plays of Baalakrishna including his stealing act. No doubt Krishna blessed those who willingly and endearingly offered him butter or milk. But He had a strong intent of blessing even those who, through ignorance, sometimes refused to offer Him. So He took to stealing at their homes, partook a portion of their butter stock and graciously left the remains in their pots as ‘Prasaada’. As already graded, it was a prasaada of the superlative degree! For those who knew this secret it was a benevolent act of blessing; for those who knew not, it was a mere theft. Sri Rangapriya Swamiji, who used to experience the spiritual ecstasy, got deeply immersed in Him on recollecting this ‘benevolent theft’ and has endorsed the proclamation of Shuka Maharshi in Srimad Bhaagavata. The recitation and listening of these tricks of the Lord transmit in us His grace and poise, redeems us from all our sins, enhancing our devotion to Him.


Note: The Kannada version of this article can be viewed at AYVM blogs

      Saturday, April 27, 2019

      ಪುರುಷಾರ್ಥಗಳು (Prurushaarthagalu)

      ಲೇಖಕರು: ತಾರೋಡಿ ಸುರೇಶ




      ಭಾರತೀಯರ ಎಲ್ಲ ಕರ್ಮಗಳಲ್ಲೂ “ಪುರುಷಾರ್ಥಪ್ರಾಪ್ತಿಗಾಗಿ ಮಾಡುತ್ತೇನೆ” ಎಂಬ ಸಂಕಲ್ಪವಿರುತ್ತದೆ. ಹಾಗಿದ್ದರೆ ಪುರುಷಾರ್ಥವೆಂದರೇನು? ಇದಕ್ಕೇಕೆ ಇಷ್ಟು ಮಹತ್ವ? ಪುರುಷ ಎಂದರೆ ಗಂಡಸು ಎಂದು ರೂಢಿ. ಅಂದರೆ ಪುರುಷಾರ್ಥವು ಕೇವಲ ಗಂಡಸರಿಗೆ ಮಾತ್ರವೇ? ಇತ್ಯಾದಿ ಪ್ರಶ್ನೆಗಳು ಸಹಜ.


      ಪುರುಷಾರ್ಥವೆಂದರೆ ಪುರುಷನ ಅಪೇಕ್ಷೆ ಎಂದರ್ಥ. ಪುರುಷನು ಬಯಸುವ ಪ್ರಯೋಜನಗಳೇ ಪುರುಷಾರ್ಥಗಳು.  ಪುರುಷಾರ್ಥದಲ್ಲಿನ ಪುರುಷ ಎಂಬ ಪದಕ್ಕೆ ಗಂಡಸು ಎಂದರ್ಥವಲ್ಲ. ಇದು ‘ಪುರಿಶೇತೇ ಇತಿ ಪುರುಷಃ’ ಎಂಬ ವಿವರಣೆಯುಳ್ಳದ್ದಾಗಿದೆ. ದೇಹವೆಂಬ ಪುರದಲ್ಲಿ ವಾಸಿಸುತ್ತಿರುವ ಜೀವನೇ ಪುರುಷ.  ಹಾಗಾಗಿ, ಪುರುಷಾರ್ಥವೆಂದರೆ ಜೀವದ ಅಪೇಕ್ಷೆಗಳು. ಇದು ಪುರುಷರಷ್ಟೇ ಸಮಾನವಾಗಿ ಸ್ತ್ರೀಯರಿಗೂ ಅನ್ವಯಿಸುತ್ತದೆಯಾದ್ದರಿಂದ ತಥಾಕಥಿತ ಸ್ತ್ರೀಸಮಾನತಾವಾದಿಗಳು ಆಕ್ರೋಶಗೊಳ್ಳುವ ಅಗತ್ಯವಿಲ್ಲ.

      ಹಾಗಾದರೆ, ಜೀವದ ಅಪೇಕ್ಷೆಗಳೇನು? ಇದರ ವಿವರಗಳು ತಿಳಿದದ್ದಾದರೂ ಹೇಗೆ?.ದೇಹವು ಜೀವವೆಂಬ ಚೈತನ್ಯಶಕ್ತಿಯ ಒಡಲು. ಜೀವತತ್ವದವರೆಗೂ ಸಂಚಾರವುಳ್ಳ ಋಷಿಮುನಿಗಳು ಜೀವದಿಂದಲೇ ನೇರವಾಗಿ ಅದರ ಅಪೇಕ್ಷೆಗಳನ್ನು ಅರಿತರು. ಧರ್ಮ-ಅರ್ಥ-ಕಾಮ ಮತ್ತು ಮೋಕ್ಷಗಳೇ ಜೀವವು ಬಯಸುವ ಪ್ರಯೋಜನಗಳು ಎಂದು ತಮ್ಮ ಅಲೌಕಿಕ ಅನುಭವಗಳನ್ನು ಆಧರಿಸಿ ಘೋಷಿಸಿದರು. ಅದು ಸಾಧ್ಯವಾದದ್ದು ತಪಸ್ಸಿನಿಂದ, ಅವರು ಸಂಪಾದಿಸಿದ್ದ ಯೋಗದೃಷ್ಟಿಯಿಂದ.

      ಈಗ ಈ ಧರ್ಮಾರ್ಥಕಾಮಮೋಕ್ಷಗಳ ಸಂಕ್ಷಿಪ್ತತಮವಾದ ಪರಿಚಯವನ್ನು ನೋಡೋಣ.
      ಧರ್ಮವು ಮೊಟ್ಟಮೊದಲ ಪುರುಷಾರ್ಥ. ಧರ್ಮ ಎಂಬ ಪದವು ಸಂಸ್ಕೃತದ ‘ಧೃ’ ಧಾತುವಿನಿಂದ ಬಂದಿದೆ. ಯಾವುದು ಧರಿಸುತ್ತದೆಯೋ ಅದು ಧರ್ಮ. ವಿಶ್ವವನ್ನೆಲ್ಲಾ ಭಗವಂತನೇ ಧರಿಸಿರುವುದರಿಂದ ಮೊಟ್ಟಮೊದಲ ಧರ್ಮ ಭಗವಂತನೇ. “ಕೃಷ್ಣಂ ಧರ್ಮಂ ಸನಾತನಮ್” ಎಂದಿದ್ದಾರೆ. ಮುಂದಕ್ಕೆ ಭಗವತ್ಸಂಕಲ್ಪಕ್ಕೆ ತಕ್ಕಂತೆ ಸೃಷ್ಟಿಕಾರ್ಯದಲ್ಲಿ ಜೀವವೂ ಮತ್ತು ಅದರ ಒಡಲಾದ ದೇಹವೂ ವಿಕಾಸಗೊಳ್ಳುವುದಷ್ಟೆ.  ಉದಾಹರಣೆಗೆ ಆರೋಗ್ಯವು ದೇಹದ ಒಂದು ಸ್ಥಿತಿ. ಅದಿದ್ದಾಗ ಚಟುವಟಿಕೆಯಿಂದಲೂ ಇರಬಲ್ಲ ಹಾಗೆಯೇ ಸುಖನಿದ್ರೆಯನ್ನೂ ಮಾಡಬಲ್ಲ. ಅಂತೆಯೇ ಯೋಗಭೋಗಗಳೆರಡನ್ನೂ ಬಯಸುವ ಜೀವಕ್ಕೆ ಎರಡನ್ನೂ ಕೊಡಬಲ್ಲ ಸ್ಥಿತಿಯು(Condition) ಇರಬೇಕು. ಇಂತಹ ಸ್ಥಿತಿಗೇ ಎರಡನೆಯ ಘಟ್ಟದಲ್ಲಿ ಪ್ರಧಾನವಾಗಿ ಧರ್ಮವೆಂದು ಹೆಸರು. “ಯತಃ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ”. ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಎಲ್ಲವೂ ಆತ್ಮಧರ್ಮದಲ್ಲಿ ನಿಲ್ಲುವಂತಿರಬೇಕು. ಧರ್ಮವು ಹಿಮ್ಮುಖವಾದಾಗ ಭಗವದ್ರೂಪವನ್ನು ತಾಳಿದರೆ ಮುಂದೆ ವಿಕಾಸಗೊಂಡಾಗ ಆಚಾರವೆನ್ನಿಸಿಕೊಳ್ಳುತ್ತದೆ.

      ಜಡ ಪದಾರ್ಥಗಳಲ್ಲಿಯೂ ಆಯಾ ಪದಾರ್ಥದ ಅನನ್ಯತೆಯೇ ಅದರ ಧರ್ಮ. ಆಯಾ ಪದಾರ್ಥಗಳ ಇರುವಿಕೆಗೆ ಅವುಗಳ ಧರ್ಮವೇ ಕಾರಣ. ಧರ್ಮವಿದ್ದರೆ ಮಾತ್ರ ನಂಬಿಕೆಗೂ ಅರ್ಹವಾಗುತ್ತದೆ. ಏಕೆಂದರೆ ಇಟ್ಟಿಗೆಯೊಂದು ಒಮ್ಮೆ ಗಟ್ಟಿಯೂ ಇನ್ನೊಮ್ಮೆ ಮೃದುವೂ ಆಗಿಬಿಟ್ಟರೆ ಅದನ್ನು ನಂಬಿ ಮನೆ ಕಟ್ಟುವುದು ಹೇಗೆ?

      ಎರಡನೆಯ ಪುರುಷಾರ್ಥವು ಅರ್ಥ. ಪ್ರಕೃತಿಯಲ್ಲಿರುವ ಸಮಸ್ತ ಪದಾರ್ಥಗಳೂ ಅರ್ಥವೇ. ಈಶ್ವರಸೃಷ್ಟಿಯೆಲ್ಲವೂ ಐಶ್ವರ್ಯವೇ. ಆಯಾ ಪದಾರ್ಥಗಳ ಧರ್ಮವರಿತು ಮೂಲಭೂತವಾದ ಧರ್ಮಕ್ಕೆ ಹಾನಿಯಾಗದಂತೆ ಬಳಸಿದಾಗ ಪರಮಾರ್ಥ. ಹಾಗಿಲ್ಲದಿದ್ದರೆ ಅನರ್ಥ. ತೃತೀಯ ಪುರುಷಾರ್ಥವಾದ ‘ಕಾಮ’ವೆಂದರೆ ಬಯಕೆಗಳು. ಒಂದು ವಾಹನದಲ್ಲಿ ಸಾಗುತ್ತಿರುವಾಗ ಎನ್ಜಿನ್, ಚಾಲಕ ಮತ್ತು ಸಹಪ್ರಯಾಣಿಕರು ಎಲ್ಲರಿಗೂ ಅವರವರಿಗೆ ಬೇಕಾದ ಆಹಾರ ಕೊಡಬೇಕು. ಜೊತೆಗೆ ಯಜಮಾನನಿಗೂ ಕೊಡಬೇಕಾದದ್ದನ್ನು ಸಲ್ಲಿಸಬೇಕು. ಯಜಮಾನನನ್ನೇ ಮರೆತುಬಿಡಬಾರದು.ಹಾಗೆಯೇ ನಮ್ಮ ಜೀವನಯಾತ್ರೆಯಲ್ಲೂ ಮನೋಬುದ್ಧೀಂದ್ರಿಯಗಳಿಗೆ, ಯೋಗ-ಭೋಗಗಳಿಗೆ ಹೊಂದುವಂತೆ, ಆಹಾರವನ್ನು ಕೊಟ್ಟು, ಧರ್ಮದ ಲಕ್ಷ್ಮಣರೇಖೆಯನ್ನು ದಾಟದೆ ಕಾಮವನ್ನು ಅನುಭವಿಸಬೇಕು.

      ನಾಲ್ಕನೆಯದು ಮೋಕ್ಷ. ಪ್ರಕೃತಿಯ ಬಂಧನದಿಂದ ಬಿಡುಗಡೆ. ಪರಮಾತ್ಮ ಸಾಕ್ಷಾತ್ಕಾರದ ಪರಮಸೌಖ್ಯದ ಪ್ರಾಪ್ತಿ. ಮಾನವದೇಹದ ಸಾರ್ಥಕ್ಯದ ಅತ್ಯಮೂಲ್ಯವಾದ  ಸ್ಥಿತಿ. ಅರ್ಥ-ಕಾಮಗಳು, ಧರ್ಮ-ಮೋಕ್ಷದ ಸೀಮೆಯೊಳಗೆ ಇರಬೇಕು. ಆದ್ದರಿಂದಲೇ ಜ್ಞಾನಿಗಳು “ಧರ್ಮಾರ್ಥಕಾಮಮೋಕ್ಷ” ಎಂಬುದಾಗಿ ಅರ್ಥಕಾಮಗಳನ್ನು ಧರ್ಮ-ಮೋಕ್ಷಗಳ ನಡುವೆ ಇಟ್ಟಿದ್ದಾರೆ.ಜೀವನದಲ್ಲಿ ಸಮಸ್ತವೂ ಈ ನಾಲ್ಕರ ಚೌಕಟ್ಟಿನಲ್ಲಿರುವಂತೆ ಜೀವನವನ್ನು ರೂಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ಅಳವಡಿಸಿಕೊಂಡು ಬಾಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ.

      ಸೂಚನೆ: 27/04/2019 ರಂದು ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

      ಅಂಧಕಾಸುರ (Andhakasura)

      ಲೇಖಕರು : ವಿದ್ವಾನ್ ಅನಂತ. ಬಿ. ಜಿ


      ಒಂದಾನೊಂದು ಕಾಲದಲ್ಲಿ ಅಂಧಕಾಸುರ ಎಂಬ ಹೆಸರಿನ ಒಬ್ಬ ರಾಕ್ಷಸನಿದ್ದನು. ಅವನು ಬಹಳ ಶಕ್ತಿವಂತನಾಗಿದ್ದನು.  ಆದರೆ ಚಿಕ್ಕಂದಿನಲ್ಲಿ ಅವನಿಗೆ ಬಹಳ ದುಷ್ಟಬುದ್ಧಿಯೂ, ದುಷ್ಟ ಸ್ವಭಾವವೂ ಇದ್ದಿತು.  ಯಾವಾಗಲೂ ಬೇರೆಯವರಿಗೆ ಹಿಂಸೆ ಕೊಡುವುದು, ದೊಡ್ಡವರು ಮಾಡಬಾರದು ಎಂಬ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಮಾಡುವುದು, ಯಾವುದೇ ಒಳ್ಳೆಯ ಕೆಲಸಕ್ಕೆ ಅಡ್ಡಿ ಆತಂಕಗಳನ್ನು ಉಂಟುಮಾಡುವುದು ಅವನಿಗೆ ಬಹಳ ಸಂತೋಷ ಕೊಡುತ್ತಿದ್ದ ಕೆಲಸಗಳಾಗಿದ್ದವು.

      ಅವನ ತಂದೆ ಒಬ್ಬ ರಾಜನಾಗಿದ್ದನು.  ಹಾಗಾಗಿ ಅಂಧಕನಿಗೆ ಅಧಿಕಾರದ ಮದವೂ ತುಂಬಿಕೊಂಡಿತ್ತು.ಇಷ್ಟು ಸಾಲದೆಂಬಂತೆ ಅವನು ಹುಟ್ಟುವಾಗಲೇ ಈಶ್ವರನಿಂದ ಒಂದು ವಿಶಿಷ್ಠವಾದ  ವರವನ್ನು ಪಡೆದುಕೊಂಡು ಬಂದಿದ್ದನು. ಈಶ್ವರನಿಂದ ಅಲ್ಲದೆ ಮತ್ತೆ ಯಾರಿಂದಲೂ ತನಗೆ ಸಾವಿಲ್ಲ ಎಂಬುದೇ  ಆ ವರ.  ಅಂಧಕನಿಗೆ ಇದು ಮತ್ತಷ್ಟು ದುಷ್ಟತನವನ್ನು ಹೆಚ್ಚಿಸಿಕೊಳ್ಳಲು ಕಾರಣವಾಯಿತು. ಇದರ ಪರಿಣಾಮವಾಗಿ ಸಜ್ಜನರು ಯಾರಿಗೂ ಅವನ ರಾಜ್ಯದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದೇ ಹೋಯಿತು.   ಶಿವನೊಬ್ಬನು ಮಾತ್ರವೇ ತನ್ನನ್ನು ಸಂಹರಿಸಬಲ್ಲನು ಎಂಬುದನ್ನು ಅರಿತಿದ್ದ ಅಂಧಕನು ದೇವ ಲೋಕದ ಮೇಲೆ ದಾಳಿ ನಡೆಸಿ ಅಲ್ಲಿದ್ದ ದೇವತೆಗಳನ್ನೆಲ್ಲ ಹಿಂಸಿಸಲು ಪ್ರಾರಂಭಿಸಿದನು.   ದೇವೇಂದ್ರನ ಸಿಂಹಾಸನದಲ್ಲಿ ತಾನೇ ಕುಳಿತು ತನ್ನ ಅಧರ್ಮದ ರಾಜ್ಯಭಾರವನ್ನು ನಡೆಸಲು ಮೊದಲು ಮಾಡಿದನು.  ಬಲ ಮತ್ತು ಅಧಿಕಾರಗಳು ಎಂಥವರನ್ನೂ ತಪ್ಪು ದಾರಿಗೆ ಎಳೆಯುತ್ತವೆ ಎಂಬ ಮಾತಿಗೆ ಅಂಧಕನು ಮತ್ತೊಂದು ಉದಾಹರಣೆಯಾಗಿ ನಿಂತನು.

      ದೇವತೆಗಳೆಲ್ಲರೂ ಗುಪ್ತವಾಗಿ ಸಭೆ ಸೇರಿದರು.  ಹೇಗಾದರೂ ಮಾಡಿ ಅಂಧಕನ ಕಾಟವನ್ನು ನಿವಾರಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದರು.  ಆದರೆ ಹೇಗೆ? ಅವನನ್ನು ಯುದ್ಧದಲ್ಲಿ ಸೋಲಿಸುವ ಮಾತೇ ಇಲ್ಲ.  ಕೊಲ್ಲುವುದಂತೂ  ಕೇವಲ ಪರಮೇಶ್ವರನಿಂದ ಆಗುವ ಕೆಲಸ.

      ಪರಮೇಶ್ವರನಾದರೋ ಮಂದರ ಎಂಬ ಗಿರಿಯ ಶಿಖರದ ಮೇಲೆ ಆಳವಾದ ತಪಸ್ಸಿನಲ್ಲಿ ಮುಳುಗಿ ಹೋಗಿದ್ದಾನೆ. ಅವನನ್ನು ಎಚ್ಚರಿಸುವ ಧೈರ್ಯವು ಯಾರಿಗೂ ಇಲ್ಲ.  ಹಾಗಾದರೆ ಈ ಸಮಸ್ಯೆಗೆ ಪರಿಹಾರವೆಂತು?  ಎಂದು ಎಲ್ಲರೂ ಚಿಂತಾಮಗ್ನರಾದರು. ಆಗ ನಾರದ ಮಹರ್ಷಿಗಳು,  ‘ತಾವೆಲ್ಲರೂ ಇನ್ನು ಅಂಧಕಾಸುರನ ವಿಷಯದಲ್ಲಿ ನಿಶ್ಚಿಂತರಾಗಿರಿ, ನಾನು ಅವನ ಕಾಟವನ್ನು ನಿವಾರಿಸುತ್ತೇನೆ’ ಎಂದು ಆಶ್ವಾಸನೆಯನ್ನು ಕೊಟ್ಟರು.

      ಪರಮೇಶ್ವರನು ಮಂದರ ಪರ್ವತ ಎಂಬ ಎತ್ತರವೂ, ಪವಿತ್ರವೂ ಆದ ಸ್ಥಳದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅಲ್ಲಿಗೆ ಸಾಧುಗಳನ್ನು ಬಿಟ್ಟು ಉಳಿದವರಿಗೆ ಪ್ರವೇಶಕ್ಕೆ ಅನುಮತಿಯಿರಲಿಲ್ಲ.  ಅಲ್ಲಿನ ಮತ್ತೊಂದು ವಿಶೇಷ ಎಂದರೆ ಮಂದಾರ ಪುಷ್ಪ.  ಅದು ಅಲ್ಲಿ ಮಾತ್ರ ದೊರೆಯುತ್ತಿದ್ದಂತಹ ಸುಗಂಧ ಪುಷ್ಪ.  ನೇರವಾಗಿ ಮಂದರ ಪರ್ವತಕ್ಕೆ ತೆರಳಿದ ನಾರದರು ಮಂದಾರ ಪುಷ್ಪದ ಘಮಘಮಿಸುವ ಮಾಲೆಯನ್ನು ಧರಿಸಿದವರಾಗಿ ಅಂಧಕಾಸುರನ ಮನೆಗೆ ತೆರಳಿದರು.

      ನಾರದರು ಬಂದಕೂಡಲೇ ಮಂದಾರ ಪುಷ್ಪದ ಪರಿಮಳವು ಅರಮನೆಯನ್ನೆಲ್ಲ ತುಂಬಿಬಿಟ್ಟಿತು. ಅದರ ಸೌಂದರ್ಯಕ್ಕೂ ಸುಗಂಧಕ್ಕೂ ಮನಸೋತ ಅಂಧಕನು,  ಆ ಪುಷ್ಪವು ಎಲ್ಲಿ ಸಿಗುತ್ತದೆ ಎಂದು ಕಾತರನಾಗಿ ಕೇಳಿದನು.  ಆದರೆ ನಾರದರು ಬುದ್ಧಿವಂತಿಕೆಯಿಂದ, ‘ಆ ಒಂದು ವಿಷಯವನ್ನು ಮಾತ್ರ ಕೇಳಬೇಡ ಅಂಧಕ! ಏಕೆಂದರೆ ಅದು ನಿನಗೆ ಯಾವ ಕಾರಣಕ್ಕೂ ಸಿಗುವ ವಸ್ತುವಲ್ಲ’ ಎಂದು ಕೆಣಕುತ್ತಾರೆ.  ಅತ್ಯಂತ ಕೋಪಗೊಂಡ ಅಂಧಕನು, ‘ತಾವು ಆ ಪುಷ್ಪವು ಸಿಗುವ ಸ್ಥಳವನ್ನು ಹೇಳಲೇಬೇಕು ‘ ಎಂದು ಬಲವಂತ ಪಡಿಸುತ್ತಾನೆ. ಆಗ ನಾರದರು ಹೆದರಿದವರಂತೆ ನಟಿಸಿ ಮಂದರ ಪರ್ವತವು ಇರುವ ಸ್ಥಳವನ್ನು ತಿಳಿಸುತ್ತಾರೆ.

      ತನ್ನನ್ನು ಗೆಲ್ಲುವವರು ಯಾರು? ಎಂಬ ಅಹಂಕಾರದೊಂದಿಗೆ ಮಂದರ ಪರ್ವತಕ್ಕೆ ತೆರಳಿದ ಅಂಧಕನನ್ನು ಅಲ್ಲಿರುವ ಕಾವಲು ಭಟರು ತಡೆಯುತ್ತಾರೆ. ಇದರಿಂದ ಕೋಪಗೊಂಡ ಅಂಧಕನು ತನ್ನ ಗದೆಯಿಂದ ಮಂದರ ಪರ್ವತವನ್ನೇ  ಹೊಡೆಯಲು ಯತ್ನಿಸುತ್ತಾನೆ. ಮಹಾ ಬಲಶಾಲಿಯಾದ ಅವನ ಗದೆಯ ಪ್ರಹಾರದಿಂದ ಮಂದರ ಪರ್ವತವು ಕಂಪಿಸತೊಡಗುತ್ತದೆ. ಇದರಿಂದ ಪರಮೇಶ್ವರನ ತಪಸ್ಸಿಗೆ ಭಂಗವುಂಟಾಗುತ್ತದೆ.  ಇದೆಲ್ಲದಕ್ಕೂ  ಅಂಧಕನೇ ಕಾರಣ ಎಂದು ತಿಳಿದುಕೊಂಡ ಪರಮೇಶ್ವರನು, ಮಹಾ ಕೋಪದಿಂದ ತನ್ನ ಶೂಲವನ್ನು ಎತ್ತಿ ಅಂಧಕಾಸುರನ ಕಡೆಗೆ ಎಸೆಯುತ್ತಾನೆ.  ಆ ಶೂಲವು ಅಂಧಕನ ಎದೆಯನ್ನು ಸೀಳಿ ಅವನನ್ನು  ಕೊಲ್ಲುತ್ತದೆ.

      ಅಂಧ ಎಂದರೆ ಕಣ್ಣು ಕಾಣಿಸದವನು ಎಂದರ್ಥ. ಇಲ್ಲಿ ಅಂಧಕನಿಗೆ ಹೊರಗಿನ ಕಣ್ಣುಗಳು ಚೆನ್ನಾಗಿಯೇ ಕಾಣಿಸುತ್ತಿದ್ದವು.  ಆದರೆ ಬುದ್ಧಿಯಲ್ಲಿ ವಿವೇಕವಿಲ್ಲದೆ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದುದರಿಂದ ಎಲ್ಲರೂ ಅವನನ್ನು ಅಂಧಕ ಎಂದು ಕರೆದರು.  ದೊಡ್ಡವರು, ‘ಮಾಡಬೇಡ’ ಎಂಬ ಕೆಲಸವನ್ನು ಮಾಡಿದರೆ, ಅದರಿಂದ ಅನಾಹುತ ನಿಶ್ಚಿತ.  ಅಂತೆಯೇ ದೇವರು ಕೊಟ್ಟ ದೇಹಬಲ ಬುದ್ಧಿಬಲ ಇತ್ಯಾದಿಗಳನ್ನು ಸಮಾಜದ ಒಳಿತಿಗಾಗಿ ಬಳಸಿದರೆ ಅದರಿಂದ ಎಲ್ಲರಿಗೂ ಕ್ಷೇಮ. ಹಾಗಲ್ಲದೆ ಬೇರೆಯವರಿಗೆ ತೊಂದರೆ ಉಂಟು ಮಾಡಿದರೆ, ಮುಂದೆ ಅದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

      ಸೂಚನೆ:  26/04/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

      दाम्पत्य तत्त्व (Dampatya tatva)

      लेखक – डामोहन राघवन;
      हिन्दी अनुवाद – पूजा धवन



      आधुनिक विचार धारा में अक्सर विवाह एक सामाजिक समझौता माना जाता है । इस समझौते के उल्लंघन को लेकर हाल ही मेंसांविधानिक  तौर पर चर्चा और विवाद भी  हुआ । क्या यह एक अपराध  है? इसका कैसे न्याय किया जाए ? यह कुछ मुद्दे उठ खडे होते हैं ।  पर यहां हम उपर्युक्त विषयों को लेकर चर्चा नहीं करने जा रहे हैं, परन्तु इसके पीछे ऋषि-मुनियों का दाम्पत्य-तत्त्वचिन्तन को  प्रस्तुतकरने जा रहे हैं ।  और हमें सम्पूर्ण विश्वास है कि इस आर्ष तत्त्व को यदि हम अपनाएंगे तब समाज में सुख शान्ति सुव्यवस्थित हो जायेगी ।

      हमारी संस्कृति में विवाह एक सौदा नहीं है परन्तु एक प्राकृतिक बन्धन है । विवाह के समय में जिस मन्त्र का उच्चारण होता है वह मन्त्रइस दाम्पत्य बन्धन को दिवि और भुवि तथा शब्द और अर्थ के बीच के सम्बन्ध की उपमा कराता है । दिवि की काली घटाए धरती परनिरन्तर बरस्ते हुए, वहां के बीजों को अंकुरित कर देती हैं और दिवि का सूर्य अपनी रौशनी तथा गर्मी से पृथ्वी पर रहे जीवों को सुजीवितकर देता है । पर किसके लाभ के लिये यह सब हो रहा है - दिवि या भुवि ? देखा जाये तो दोनों के लाभ के लिये नहीं क्योंकि यह दोनोंकेवल प्रकृति की परम नियम के पालन पोषन में नियुक्त हैं । इन दोनों का यह उद्देश्य है कि इस पृथ्वी पर वर्षा और रौशनी अबाधित होऔर प्रकृतिक नियम के अनुसार समस्त जीवों को अपना जीवन चलाने में सहायक हो । 

      वाक और अर्थ भी दिवि - भुवि जैसे ही मनुष्य के व्यवहार को उपस्थित रूप में रख लेते हैं । वाक उसके अर्थ द्वारा (वागर्थ) मन में जोविचार है उसको व्यक्त कर व्यवहार को सुव्यवस्थित रूप में रख लेती है । इसी प्रकार से, विवाह केवल हमारे इन्द्रियों को तृप्त करने केलिये दिये जाने वाली अनुमति नहीं है । यह दम्पतियों पर सौंपा गया एक दायित्व है | उन्से यह अपेक्षा  है कि वे लक्ष्मी और नारायण अथवापार्वति परमेश्वर नामक दिव्य दम्पतियों के संकल्प को आगे बढा एंगे । और गौर से देखा जाये तो यह दिव्य दम्पतिया, सृष्टि की मूल द्वन्द्वशक्तियाँ हैं, जो  प्रकृति और पुरुष के नाम से जाने जाते हैं ।  पति पत्नी का सम्बन्ध अथवा दाम्पत्य एक यज्ञ है;  इसके अन्तर्गत  'धर्मेच अर्थेच कामेच नातिचरामि' अर्थात ’धर्म’ में ’अर्थ’ अर्थात धन इत्यादि ’कामना’ पूर्ण करने में साथ साथ चलेंगे एक दूसरे को छोडकर नहीं चलेंगे ऐसी शपथ अग्नि के सम्मुख लेते हैं |  इस यज्ञ का फल समस्त आत्मगुणयुक्त अविछिन्न सन्तति ही है ।बहुत लोग कहते हैं यह रसमय विवाह सम्बन्ध भारतीय दृष्टी में यज्ञादि भरपूर तत्त्वों से नीरस हो गया है । परन्तु यह भी प्रस्तुत है कि विवाहसे जुडे वेद मन्त्र कहते हैं कि ‘जो तेरा हृदय है वह मेरा हृदय हो जाये और जो मेरा हृदय है वह तेरा हृदय हो जाये’ । पुराण इत्यादि साहित्यमें हमें कई उदाहरण मिलते हैं | अपनी प्रियतमा तथा होने वाली पत्नी प्रमद्वरा जब एक सर्प के विष से प्राण त्याग देती है तब अपनी आयु मेंअर्ध भाग उसको दान देकर जीवित करने वाला रुरु भी एक ऋषिकुमार ही था । महातपस्वी तथा माहाज्ञानी कर्दमप्रजापति अपनी पत्नीदेवहूति के साथ योगिश्रेष्ठ कपिलमुनि के जन्म के पूर्व एक सौ से अधिक साल तक रमी अरण्यों  में रम रहे थे । तथा पुराण-काव्यों  में वर्णितवशिष्ठ-अरुन्धति, दुष्यन्त-शकुन्तला   का प्रेम प्रसंग अत्यन्त रमणीय है| शिव पार्वती का रसमय गृहस्थ जीवन सबके लिये अत्यन्त आदर्शमयहै । विवाह संस्कार में अपने पातिव्रत्य से सितारा बनी अरुन्धति को आदर्श मानकर  नव दम्पतियों को अरुन्धति नक्षत्र का दर्शन कराते हैं ।

      दाम्पत्य-जीवन सृष्टि-सृष्टीश्वर के संकल्पानुरूप् यज्ञ होता  है |  इसलिये इस यज्ञ रूप जीवन में पति अथवा पत्नी से होने वाली गलतियों का  न्याय भी प्रकृति माता के न्यायालय मे ही होता है | दण्ड का वास्तविक अर्थ होता है संयम | दण्ड शब्द का संकेत हमारे शरीर के पृष्ठवंश याने रीड की हड्डि से है | यही स्थान योग मे प्रचलित सुषुम्ना नाडी की स्थान है | ऋषि-मुनियों के हाथ मे ब्रह्मदण्ड भी इसी का संकेत होता है | कुछ भारतीय भाषाओं मे दण्ड के लिया शिक्षा शब्द का प्रयोग प्रचलित भी  है - जैसे  की कन्नड मे | शिक्षा क मूल अर्थ 'विद्या प्रदान' है | इसलिये दण्ड का मतलब सुशिक्षित करने से है ना कि मारने पीटने से | अहल्या को दण्ड स्वरूप क्या मिला ? एकान्त और दीर्घ काल की  कठोर तपस्या; और तत् फलस्वरूप प्रभु श्रीराम के पावन दर्शन !! उनका खोया हुआ संयम फिर प्राप्त होने पर वे अपने पूर्व रूप , तेज और वर्चस से पूर्ण होकर अपने पति गौतम् मुनि से एक हो गयीं | यहां और एक गौर करने लायक विषय है कि अहल्या के साथ इन्द्र को भी किये का फल भुगत्ना पडा | दण्ड स्वरूप षण्डत्व इन्द्र को प्राप्त हुआ | पात्रानुसार दोनों के दण्ड अलग अलग थे , किन्तु ध्येय तो एक ही - संयम की पुनः प्राप्ति |  यहां पर ना कोर्ट - काराग्रह का उल्लॆख है | ना हि विवाह पन्जीकरण या रद्दीकरण का |    

      भारतीय संस्कृति में दाम्पत्य के बंधन मजबूत और सदृढ हैं। वे उतने ही गहरे और सूक्ष्म भी हैं।  पद्मावती देवी कवि जयदेव की पत्नी थीं | ऐसा कहा जाता है कि जब उन्होंने अपने पति की मृत्यु की झूठी खबर सुनी तो उनका दिल टूट गया और उनका निधन तत्क्षण् ही होगया। बाद में उसे प्रभु की प्रशंसा में जयदेव के गीतों के मधुर स्वरों के साथ जीवन में वापस लाया गया। ऐसी अतिरंजित आत्माओं को हमक्या कहें ? रोमांटिक युगल या उच्चतम आदर्श के भक्त-दम्पती ?  भारतवर्ष की संतानों ने  इंद्रिय संतुष्टि (इंद्रियों की भोग)और कठोर तपस्या (इंद्रियों की संयम) - इन द्वन्द्वो को एक साथ सिद्ध किया यह  भरतियों की सबसे आश्चर्यजनक और अद्वितीयउपलब्धियों में से एक के रूप में गिना जाएगा।

      सर्वे जना: सुखिनो भवन्तु ।

      Note: The Kannada version of this article can be viewed at AYVM blogs

      Wednesday, April 24, 2019

      ಶ್ರೇಯಸ್ಸು-ಪ್ರೇಯಸ್ಸು (Shreyassu -Preyassu)




      ಯಾರಾದರೂ ನಮಗೆ ಉಪಕಾರ ಮಾಡಿದಲ್ಲಿ ಅಥವಾ ಯಾವುದೇ ನಿಃಸ್ವಾರ್ಥವಾದ ಕರ್ಮವನ್ನು ಮಾಡಿದಲ್ಲಿ “ನಿನಗೆ ಒಳ್ಳೆಯದಾಗಲಿ, ಶ್ರೇಯಸ್ಸಾಗಲಿ” ಎಂದು ಹೇಳುವೆವು, ಅಥವಾ ಬಯಸುವೆವು, ಅಲ್ಲವೆ?  “ನಿನ್ನ ಶ್ರೇಯಸ್ಸಿಗಾಗಿ ಹೇಳುತ್ತಿದ್ದೇನೆ” ಎಂದೂ ಹೇಳುವುದುಂಟು. ಆದರೆ ಶ್ರೇಯಸ್ ಎಂದರೇನು? – ಎಂದು ಯಾರಾದರೂ ಏನಾದರೂ ಕೇಳಿದರೆ, ಅದಕ್ಕೆ ಏನು ಉತ್ತರ ಹೇಳಬಲ್ಲೆವು?

      ಈ ಪ್ರಶ್ನೆಗೆ ಉತ್ತರ ಕಠೋಪನಿಷತ್ತಿನಲ್ಲಿದೆ. ಕಿರಿಯನಾದರೂ ಜಾಣನಾದ ನಚಿಕೇತನಿಗೆ ಈ ಬಗ್ಗೆ ತಿಳಿವಳಿಕೆಯನ್ನು ಯಮನು ಅಲ್ಲಿ ಕೊಡುತ್ತಾನೆ. ಶ್ರೇಯಸ್ಸಿನ ಬಗ್ಗೆ ಮಾತ್ರವೇ ಅಲ್ಲಿ ಹೇಳಿಲ್ಲ. ಜೊತೆಗೇ ಪ್ರೇಯಸ್ಸಿನ ಬಗ್ಗೆಯೂ ಹೇಳಿದೆ. ಶ್ರೇಯಸ್ ಮತ್ತು ಪ್ರೇಯಸ್ – ಇವೆರಡರ ವ್ಯತ್ಯಾಸವನ್ನೂ ಹೇಳಿದೆ.

      ಹಾಗಾದರೆ ಪ್ರೇಯಸ್ ಎಂದರೇನು? – ಎಂದೂ ತಿಳಿದುಕೊಳ್ಳಬೇಕಲ್ಲವೆ?  ಅದಕ್ಕಿರುವ ಒಂದು ಸುಲಭಮಾರ್ಗವೆಂದರೆ, ಮೊದಲು ಆ ಪದಗಳೇ ಹೇಗೆ ಬಂದಿವೆಯೆಂಬುದನ್ನು ತಿಳಿದುಕೊಳ್ಳುವುದು.
      ನಮಗೆ ಯಾವುದಾದರೂ ಇಷ್ಟವಾದಲ್ಲಿ ’ಅದು ನನಗೆ ಪ್ರಿಯ’ ಎನ್ನುತ್ತೇವೆ. ಹೆಚ್ಚು ಪ್ರಿಯವಾದುದನ್ನು ಪ್ರಿಯತರ ಎಂದೂ, ತುಂಬಾ ಪ್ರಿಯವಾದದ್ದನ್ನು ಪ್ರಿಯತಮವೆಂದೂ ಹೇಳುತ್ತೇವೆ. ಇವನ್ನೇ ಕ್ರಮವಾಗಿ ಪ್ರಿಯ-ಪ್ರೇಯಸ್-ಪ್ರೇಷ್ಠ ಎನ್ನುವುದು. ಹಾಗೆಯೇ, ಯಾವುದು ಪ್ರಶಂಸೆಗೆ ಯೋಗ್ಯವೋ ಅದನ್ನು ಪ್ರಶಸ್ಯ ಎಂದೂ, ಹೆಚ್ಚು ಪ್ರಶಸ್ಯವಾದುದನ್ನು ಶ್ರೇಯಸ್ ಎಂದೂ, ಅತ್ಯಂತ ಪ್ರಶಸ್ಯವಾದುದನ್ನು ಶ್ರೇಷ್ಠ ಎಂದೂ ಹೇಳಲಾಗುತ್ತದೆ.

      ಯಮನು ಹೇಳುವ ಮಾತಿನ ಸಾರವಿದು: “ಅಯ್ಯಾ ನಚಿಕೇತನೇ, ಶ್ರೇಯಸ್ಸೇ ಬೇರೆ, ಪ್ರೇಯಸ್ಸೇ ಬೇರೆ. ಎರಡರ ಪ್ರಯೋಜನಗಳೂ ಬೇರೆ ಬೇರೆ. ಎರಡೂ ಮನುಷ್ಯನ ಬಳಿ ಬರುತ್ತವೆ. ಯಾರು ಶ್ರೇಯಸ್ಸನ್ನು ಆರಿಸಿಕೊಳ್ಳುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ, ಆದರೆ ಯಾರು ಪ್ರೇಯಸ್ಸನ್ನು ಆಯ್ದುಕೊಳ್ಳುತ್ತಾರೋ ಅಂತಹವರಿಗೆ ಪುರುಷಾರ್ಥವು ಸಿದ್ಧಿಸುವುದಿಲ್ಲ. ಅಷ್ಟೇ ಅಲ್ಲ, ಇದು ಶ್ರೇಯಸ್ಸು, ಇದು ಪ್ರೇಯಸ್ಸು – ಎಂದು ವಿಭಾಗಮಾಡಿಕೊಂಡು, ಪ್ರೇಯಸ್ಸನ್ನು ಬಿಟ್ಟು ಶ್ರೇಯಸ್ಸನ್ನೇ ಆಯ್ದುಕೊಳ್ಳುವವನು ಧೀರ. ಆದರೆ, ಇದಕ್ಕೆ ಪ್ರತಿಯಾಗಿ, ಪ್ರೇಯಸ್ಸನ್ನೇ ಹಿಡಿಯುವವ ಮಂದ.”
      ಅಲ್ಲಿಗೆ ಧೀರನ ಬಗೆಯೇ ಬೇರೆ, ಮಂದನ ಬಗೆಯೇ ಬೇರೆ ಎಂದಾಯಿತು. ಮಂದ ಅಥವಾ ಮಂದಮತಿ ಎಂದರೆ, ಚುರುಕಿಲ್ಲದವನು, ಜಾಣ್ಮೆಯಿಲ್ಲದವನು. ಸರಿಯಾದ ವಿವೇಕವಿರುವುದು ಜಾಣ್ಮೆ.

      ವಿವೇಕವೆಂದರೆ ವಿಂಗಡಿಸಿಕೊಳ್ಳುವುದು. ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು? ಎಂದು ವಿಭಾಗಮಾಡಿಕೊಳ್ಳುವುದು ವಿವೇಕ. ಯಾವುದು ಸುಖವನ್ನು ಕೊಡುತ್ತದೆ, ಯಾವುದು ದುಃಖವನ್ನು?  ಎಂದು ಬೇರ್ಪಡಿಸಿಕೊಳ್ಳುವುದು ವಿವೇಕ. ಯಾವುದು ಕಡಿಮೆ ಸುಖವನ್ನು ಕೊಡುತ್ತದೆ, ಯಾವುದು ಹೆಚ್ಚು ಸುಖವನ್ನು? – ಎಂದು ಬೇರೆ ಬೇರೆ ಮಾಡಿಕೊಳ್ಳುವುದು ವಿವೇಕ. ಯಾವುದು ತಾತ್ಕಾಲಿಕ ಸುಖವನ್ನು ಕೊಡುತ್ತದೆ, ಯಾವುದು ದೀರ್ಘಸುಖವನ್ನು? – ಎಂದು ವಿಭಜಿಸಿಕೊಳ್ಳುವುದೂ ವಿವೇಕವೇ. ಮಂದಮತಿಯು ಇವಕ್ಕೆಲ್ಲಾ ಗಮನವನ್ನೇ ಕೊಡುವುದಿಲ್ಲ. ಅವನಿಗೆ ಗೊತ್ತಾಗುವುದು. ಇದು ನನಗೆ ಈಗ ಇಷ್ಟ’ ಎಂಬುದಷ್ಟೇ.

      ನಾಲಿಗೆಗೆ ರುಚಿಯೆನಿಸಿವುದು ಪ್ರೇಯಸ್ಸು. ಆರೋಗ್ಯಕ್ಕೆ ಒಳ್ಳೆಯದಾದದ್ದು ಶ್ರೇಯಸ್ಸು. ಭೋಗಗಳು ಪ್ರೇಯಸ್ಸು. ಯೋಗವು ಶ್ರೇಯಸ್ಸು. ಅನೇಕ ಪ್ರೇಯಸ್ಸುಗಳನ್ನು - ಹೆಣ್ಣು-ಹೊನ್ನು-ಮಣ್ಣು ಮುಂತಾದವುಗಳನ್ನು - ಯಮನು ತನ್ನ ಮುಂದಿಟ್ಟರೂ, ನಚಿಕೇತನು ಕೇಳಿಕೊಂಡದ್ದು ಶ್ರೇಯಸ್ಸನ್ನೇ. ನಚಿಕೇತ ಕಿರಿಯ; ಆತನ ಆದರ್ಶ ಹಿರಿದು!

      ಸೂಚನೆ:  24/04/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

      Tuesday, April 23, 2019

      ನಿರಾವರಣಗೊಳಿಸುವ ನಿಷ್ಕ್ರಮಣ ಸಂಸ್ಕಾರ. (Niravaranagolisuva nishkramana samskara).

      ಲೇಖಕರು: ತಾರೋಡಿ ಸುರೇಶ



      ನಿಷ್ಕ್ರಮಣವೆಂದರೆ ಆವರಣದಿಂದ ಕೂಡಿದ ಮನೆಯಿಂದ ಮಗುವನ್ನು ಹೊರಗಡೆ ಕರೆದುಕೊಂಡು ಬರುವುದು. ಇದು ಸ್ತ್ರೀ-ಪುರುಷ ಶಿಶುಗಳಿಬ್ಬರಿಗೂ ಉಂಟು. ಮನೆಯಿಂದ ಹೊರಗೆ ಕರೆದೊಯ್ಯುವುದೂ ಸಂಸ್ಕಾರವೇ? ಎಂಬ ಪ್ರಶ್ನೆ ಸಹಜವೇ. ಆದರೆ“ನಿಷ್ಕ್ರಮಣಮ್ ಚಂದ್ರ,ಸೂರ್ಯ ದೇವತಾ ದರ್ಶನಂ”. ಆವರಣವನ್ನು ದಾಟಿ ಚಂದ್ರ,ಸೂರ್ಯ,ದೇವತೆಗಳ ದರ್ಶನ ಮಾಡಿಸುವುದಕ್ಕೆ ಇಲ್ಲಿ ನಿಷ್ಕ್ರಮಣವೆಂದು ಕರೆದಿದ್ದಾರೆ. ಕೆಲವರು ಧೇನುದರ್ಶನವನ್ನೂ ಹೇಳಿದ್ದಾರೆ.

      ಆಚರಣೆ:  

      ಮಗುವಿನ ‘ಆಯುರ್ವೃದ್ಧಿ,ಬೀಜ ಮತ್ತು ಗರ್ಭದ ದೋಷಗಳ ನಿವಾರಣೆ ಮತ್ತು ಪರಮೇಶ್ವರ ಪ್ರೀತ್ಯರ್ಥವಾಗಿ’ ಎಂದು ಸಂಕಲ್ಪವನ್ನು ಮಾಡಬೇಕು.ಸಾಮಾನ್ಯವಾಗಿ ನಾಲ್ಕನೇ ಮಾಸದ ಹನ್ನೆರಡನೇ ದಿವಸ ಮಾಡಬೇಕೆಂಬ ಸಂಪ್ರದಾಯ,ಶಾಸ್ತ್ರವಾಕ್ಯಗಳಿವೆ. ಆ ದಿನದಲ್ಲಿ ತಂದೆ ತಾಯಿ ಮತ್ತು ಮಗು ಮೂವರಿಗೂ ಅಭ್ಯಂಗಸ್ನಾನವನ್ನು ವಿಧಿಸಿದೆ. ಮಗುವಿಗೆ ಸ್ನಾನ ಮಾಡಿಸಿ,ಹೊಸ ಬಟ್ಟೆಯನ್ನು ಉಡಿಸಿ, ಉತ್ತರಾಭಿಮುಖವಾಗಿ ಅಂದರೆ ದಕ್ಷಿಣದಿಂದ ಉತ್ತರಕ್ಕೆ ಹೋಗುವಂತೆ,ಪತಿಗೆ ಸಮರ್ಪಣೆ ಮಾಡಿ, ಅವನ ಹಿಂದುಗಡೆ ನಿಂತುಕೊಳ್ಳಬೇಕು. ನಂತರ ಆಯಾ ಮಂತ್ರಗಳನ್ನು ಪಠಿಸುತ್ತಾ ಸೂರ್ಯನ ದರ್ಶನ ಮಾಡಿಸಬೇಕು. ಇದನ್ನು ಮೂರನೇ ತಿಂಗಳೇ ಮಾಡುವುದೂ ಇದೆ. ನಾಲ್ಕನೆಯ ತಿಂಗಳಲ್ಲಿ ಅಗ್ನಿಯ ದರ್ಶನ, ಚಂದ್ರದರ್ಶನ ಮಾಡಿಸುತ್ತಾರೆ ನಂತರ ಧೇನುವಿನ ದರ್ಶನವನ್ನೂ ಮಾಡಿಸುವುದುಂಟು.

      ಎಲ್ಲ ದೇವತೆಗಳಲ್ಲಿಯೂ ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾರೆ. ಸಾಮಾನ್ಯವಾಗಿ ದೇವಾಲಯಕ್ಕೆ ಕರೆದೊಯ್ದು ದೇವತಾದರ್ಶನ ಮಾಡಿಸುತ್ತಾರೆ. ಗೋಮಯಾದಿಯುಕ್ತವಾಗಿರುವ ನೆಲದಲ್ಲಿ, ಒಂದು ಚೌಕಾಕಾರದ ಪ್ರದೇಶವನ್ನು ಮಾಡಿ,ಅಲ್ಲಿ ಧಾನ್ಯರಾಶಿಯನ್ನು ಹಾಕಿ ಶಿಶುವನ್ನು ಮಲಗಿಸಿ ಮಂತ್ರದಿಂದ ರಕ್ಷೆಯನ್ನು ಮಾಡುತ್ತಾರೆ. ನಂತರ ಹಿರಿಯರಿಂದ, ಸುಮಂಗಲಿಯರಿಂದ ಆಶೀರ್ವಾದವನ್ನು ಪಡೆದು ಅವರನ್ನೂ ಉಚಿತ ದಾನ ಮತ್ತು ಆತಿಥ್ಯದಿಂದ ಸಂತೋಷಪಡಿಸುತ್ತಾರೆ. ಬೇರೆ ಬೇರೆ ಸಂಪ್ರದಾಯಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವೆ.

      ತಾತ್ವಿಕ ಹಿನ್ನೆಲೆ: 

      ಋಷಿಗಳ ನೋಟದಂತೆ ಜೀವಿಯು ಭಗವಂತನ ಮಡಿಲಲ್ಲಿ ಆಡುತ್ತಿದ್ದವನು ಅವನ ಆಶಯದಂತೆ ಸೃಷ್ಟಿಯತ್ತ ಹೆಜ್ಜೆಯಿಡುತ್ತಾನೆ. ಅಂತಹ ವಿಕಾಸದಲ್ಲಿ 24 ತತ್ವಗಳ ಕವಚಗಳ ಆವರಣದಲ್ಲಿ ಇಳಿದುಬರುತ್ತಾನೆ. ಜೊತೆಗೆ ತತ್ವರೂಪವಾದ ವಿಕಾಸದೊಂದಿಗೆ ಅಧಿಷ್ಠಾತೃದೇವತೆಗಳ ವಿಕಾಸವೂ ಆಗುತ್ತದೆ.  ಅಂತಹ ಶಕ್ತಿಗಳ ಪ್ರಸನ್ನತೆಯನ್ನೂ ಕಾಪಾಡಿಕೊಂಡು ಸಾಧನೆಯ ಮೂಲಕ ಬಂಧದಿಂದ ಮುಕ್ತನಾಗಬೇಕಾಗುತ್ತದೆ. ಹಾಗೆ ಒಳಮಾರ್ಗದಲ್ಲಿ ಸಾಗುತ್ತಿರುವಾಗ ಸೂರ್ಯಚಂದ್ರಾಗ್ನಿಮಂಡಲಗಳ ಮಧ್ಯೆ ಭಗವಂತನ ದರ್ಶನವಾಗುತ್ತದೆ.ಈ ಅಂತರಂಗದ ಅನುಭವವನ್ನು ಯೋಗಶಾಸ್ತ್ರವು ವಿವರಿಸಿದೆ. 

      ಶ್ರೀರಂಗಮಹಾಗುರುಗಳೂ ಈ ಅಂಶವನ್ನು ಎತ್ತಿ ಹೇಳಿದ್ದರು. ಮೂಲಬೆಳಕೇ ಸೂರ್ಯಚಂದ್ರಾಗ್ನಿಮಂಡಲಗಳಾಗಿ ವಿಸ್ತಾರಗೊಂಡಿರುತ್ತವೆ. ನಾವು ಜಾತಕರ್ಮ ಸಂಸ್ಕಾರದಲ್ಲಿ ಗಮನಿಸಿರುವಂತೆ ಅಭಿಜಾತಶಿಶುವಿನ ಮುಂದೆ ತ್ರಿಕೋಣಾಕಾರದ ದೀಪವನ್ನು ಬೆಳಗಿಸುತ್ತೇವಷ್ಟೆ. ಹಾಗೆ ವಿಸ್ಮೃತಿಯನ್ನು ಪರಿಹರಿಸಿ ಈ ಮಂಡಲಗಳು ದೇವತಾತ್ಮಕವಾಗಿ ಶಿಶುವಿಗೆ ಬೇಕಾದ  ಸೌಭಾಗ್ಯಗಳನ್ನೂ ಕರುಣಿಸಿ ಯೋಗಕ್ಕೂ ಕರೆದೊಯ್ಯುತ್ತವೆ. ಈ ಒಳತತ್ವಗಳನ್ನು ಪ್ರತಿನಿಧಿಸುವ ಹೊರಗಡೆಯ ಸೂರ್ಯಚಂದ್ರಾಗ್ನಿಗಳನ್ನು ಸೂಕ್ತಕಾಲದಲ್ಲಿ ದರ್ಶನ ಮಾಡಿಸುವುದು, ಅನ್ಯದುಷ್ಟಸಂಸ್ಕಾರಗಳ ಪ್ರಭಾವಕ್ಕೆ ಒಳಗಾಗದ ಮಗುವಿನ  ಅತ್ಯಂತ ಎಳೆಯ ಮನಸ್ಸನ್ನು  ಅಂತರ್ಮುಖಗೊಳಿಸುತ್ತದೆ. ತತ್ವರೂಪವಾದ ಆವರಣ(ದೇಹ) ವನ್ನು ಭೇದಿಸಿಕೊಂಡು ಪರಮಾತ್ಮನಲ್ಲಿ ಲಯಗೊಳಿಸಲು ಸಹಕಾರಿಯಾಗುತ್ತದೆ. ತತ್ವಗಳ ಬಂಧನರೂಪವಾದ ಆವರಣದಿಂದ ನಿರಾವರಣಗೊಳಿಸುತ್ತದೆ. ಋಷಿಗಳ ಮಹಾಮೇಧೆಗೆ ನಮೋನಮಃ. ನಮಃ ಪರಮಋಷಿಭ್ಯಃ ನಮಃ ಪರಮಋಷಿಭ್ಯಃ. 

      ಸೂಚನೆ: 23/04/2019 ರಂದುಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

      ಒಂದು “ಎಲೆ”ಯ ವಿಷಯ (Ondu eleya vishaya)

      ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ



      ಪುರಾಣದಲ್ಲಿ ಬರುವ ಕಥೆ. ಯಯಾತಿ- ನಹುಷನೆಂಬ ಪ್ರಸಿದ್ಧನಾದ ರಾಜನ ಮಗ. ಇನ್ನೊಬ್ಬ ದೇವಗುರುಗಳಾದ ಬೃಹಸ್ಪತಿ ಆಚಾರ್ಯರ ಮಗ- ಕಚದೇವ. ಒಬ್ಬರಾಜಕುಮಾರ, ಇನ್ನೊಬ್ಬ ಋಷಿಕುಮಾರ. ಯಯಾತಿಯದು ಜೀವನದಲ್ಲಿ ಇಂದ್ರಿಯಸುಖಗಳೆಲ್ಲವನ್ನೂ ಅನುಭವಿಸುವ ಮನಸ್ಸು. ಕಚನಾದರೋ ಇಂದ್ರಿಯಗಳ ಹಿಂಬದಿಯಲ್ಲಿ ಬೆಳಗುತ್ತಿರುವ ಆತ್ಮಸುಖದವರೆಗೂ ಕಣ್ಣಿಟ್ಟ ದೂರದೃಷ್ಟಿಯುಳ್ಳವನು. ಇಬ್ಬರೂ ಸ್ನೇಹಿತರು, ಸಹಪಾಠಿಗಳು.

      ಒಮ್ಮೆ ಇಬ್ಬರೂ ಮಾತನಾಡುತ್ತಾ ಆಂಗೀರಸಮಹರ್ಷಿಗಳ ಆಶ್ರಮ ಪ್ರದೇಶದಲ್ಲಿ ಹೋಗುತ್ತಿರುವಾಗ ಸಣ್ಣನೆ ಗಾಳಿಬೀಸಿತು. ಅಲ್ಲೇ ಇದ್ದ ಒಂದು ಕೇಸರ ವೃಕ್ಷದ ಎಲೆಯೊಂದು ಕಚದೇವನ ಮುಂದೆ ಬಿದ್ದುಬಿಟ್ಟಿತು. ಆ ಎಲೆಯನ್ನು ಅತ್ಯಂತ ಪ್ರೀತಿಯಿಂದ ಕೈಯಲ್ಲಿ ಹಿಡಿದು ಕಚದೇವನು ಹೇಳಿದ್ದೇನು ಗೊತ್ತೇ? “ಎಲೈ ಸುಂದರವಾದ ಎಲೆಯೇ- ನೀನು ನಿನ್ನ  ಮೃತ್ಯುವಿಗಾಗಿ  ಪರಿತಪಿಸಬೇಕಾಗಿಲ್ಲ. ನೀನು ಇದ್ದಷ್ಟೂ ದಿನಗಳೂ ಆ ವೃಕ್ಷಕ್ಕೆ ಒಂದು ಸೌಂದರ್ಯವನ್ನು ಕೊಟ್ಟಿರುವೆ. ನನ್ನಂತಹ ಅನೇಕರಿಗೆ ನೀನಿದ್ದಷ್ಟೂ ದಿನ ನೆರಳನ್ನೂ ನೀಡಿರುವೆ. ನಿನ್ನ ಶಕ್ತಿ ಕ್ಷೀಣವಾದಾಗ ನಿನ್ನ ಸ್ಥಾನಕ್ಕೆ ಅಂಟಿಕೊಂಡು ಕೂತಿರದೇ ಕೆಳಗೆ ಉದುರಿ ಇನ್ನೊಂದು ಚಿಗುರೆಲೆಗೆ ಜಾಗ ಮಾಡಿಕೊಟ್ಟೆ. ಎಷ್ಟು ಲೋಕೋಪಕಾರದ ಮತ್ತು ನಿಸ್ಪೃಹ ಜೀವನ ನಿನ್ನದು! ಸ್ವರ್ಗದಲ್ಲಿ ನಿನ್ನ ಸ್ಥಾನ ಭದ್ರವಾಗಿದೆ” ಎನ್ನುತ್ತಾನೆ.

      ಎಂತಹ ಜೀವನ ದೃಷ್ಟಿ! ದಿನ ಬೆಳಗಾದರೆ ಎಷ್ಟು ಎಲೆಗಳು ಬೀಳುತ್ತವೆ, ಆದರೆ ಅದನ್ನು ಗಮನಿಸಿ ಅದರ ಮಹತ್ತನ್ನು ತಿಳಿಯುವ ಪ್ರಯತ್ನ ಎಷ್ಟು ಜನ ಮಾಡುತ್ತಾರೆ? ಯಯಾತಿಯ ಎದುರಿಗೂ ಆ ಎಲೆ ಇತ್ತಲ್ಲವೇ? ಆದರೆ ಕಚನ ಉದಾತ್ತವಾದ ಚಿಂತನೆ ಅವನಿಗೆ ಆ ಘಟನೆಯಿಂದ ಬರಲಿಲ್ಲ. ನಿಜಕ್ಕೂ ನಮ್ಮ ಜೀವನಗಳೂ ಆ ಎಲೆಯಂತೆ ಲೋಕೊಪಕಾರಕವಾಗಿ ನಿಸ್ಪೃಹವಾಗಿ ಇರುವುದಕ್ಕೆ ಪ್ರೇರಣೆ ನೀಡುವ ಸಂಗತಿಯಿದಲ್ಲವೇ?

      ನಮ್ಮ ಈ ಅಶಾಶ್ವತವಾದ ದೇಹದಲ್ಲಿ ಶೈಶವ, ಯೌವನ ವಾರ್ಧಕ್ಯಗಳು ನಿಸರ್ಗ ನಿಯಮ.ಅಂತಹ ದೇಹದೊಳಗೆ ಅಮರವಾಗಿ ಶಾಶ್ವತವಾಗಿ ಬೆಳಗುವ ಚೈತನ್ಯದ ಸ್ರೋತಸ್ಸು ಒಂದುಂಟು. ದೇಹ ಬೀಳುವ ಮುನ್ನ ಆ ಸತ್ಯವನ್ನು ಹಿಡಿಯಬಲ್ಲೆವಾದರೆ ನೆಮ್ಮದಿ,ಸುಖ ಎಲ್ಲವೂ. ಅದಿಲ್ಲದೇ ಬಿದ್ದುಹೋಗುವ ದೇಹದ ಬಗೆಗೇ ನಮ್ಮೆಲ್ಲ ಅಭಿಮಾನವನ್ನು ಸೀಮಿತಗೊಳಿಸಿದರೆ ನಮಗೆ ದುಃಖ ಅನಿವಾರ್ಯ. ಹಾಗೆಂದು ದೇಹವನ್ನು ಕಡೆಗಣಿಸಬೇಕೆಂದಲ್ಲ. ಆ ಎಲೆಯಂತೆ ಇದ್ದಷ್ಟೂ ದಿನ ಆನಂದವಾಗಿ ನಮ್ಮ ಪಾತ್ರವನ್ನು ನಿರ್ವಹಿಸಬೇಕು. ಹಾಗೆ ಬದುಕುವಾಗ ಇಲ್ಲಿ ನಿತ್ಯವಾದದ್ದೇನು? ಅನಿತ್ಯವಾದದ್ದೇನು ಎಂಬುದರ ಅರಿವಿನಿಂದ ನಿತ್ಯವಾದದ್ದಕ್ಕೆ ಅನಿತ್ಯವಾದದ್ದನ್ನು ಬಳಸಿಕೊಳ್ಳುವ ಮಹರ್ಷಿಗಳ ಕಲೆಯನ್ನು ಕಲಿತೆವಾದರೆ ನಮ್ಮ ಜೀವನಗಳು ಸಾರ್ಥಕ.

      ನಮ್ಮ ಜೀವನವನ್ನು ಅರಳಿಸುವ ಇಂತಹ ಎಷ್ಟೋ ಸಂಗತಿಗಳು, ವಿಷಯಗಳು,ನಿದರ್ಶನಗಳು, ದಿನಂಪ್ರತಿ ನಿಸರ್ಗದಲ್ಲಿ ನಡೆಯುತ್ತಲೇ ಇರುತ್ತದೆ. ಅವೆಲ್ಲದರಿಂದ ಪಾಠ ಕಲಿತು ನಮ್ಮ ಜೀವನವನ್ನು ಬೆಳಗಿಸಿಕೊಳ್ಳುವ ವ್ಯವಧಾನ, ವಿವೇಕಗಳು ನಮಗಿರಬೇಕು. ಹಾಗೆ ನಿಸರ್ಗದ ವಿಷಯಗಳೆಲ್ಲವನ್ನೂ ತಮ್ಮ ಒಳಬೆಳಕಿನಿಂದ ಅಳೆದು ನೆಮ್ಮದಿಯ ಆನಂದದ ಜೀವನವನ್ನು ಕಟ್ಟಿಕೊಟ್ಟ ಮಹರ್ಷಿಗಳ ದೇಶ ನಮ್ಮದು.

      ಭಾರತೀಯರ ಸಂಸ್ಕೃತಿ ಇಂತಹ ಉದಾತ್ತವಾದ ಜೀವನದೃಷ್ಟಿಯಿಂದ ಸಮೃದ್ಧವಾಗಿದೆ. ಶ್ರೀರಂಗ ಮಹಾಗುರುಗಳು ಜೀವನಕ್ಕೆ ಏನಾದರೂ ಅರ್ಥವಿದೆಯೇ ಎಂದು ಯಾರೋ ಕೇಳಿದಾಗ “ ಜೀವನಕ್ಕೆ ಅರ್ಥವಷ್ಟೇ ಅಲ್ಲ ಪರಮಾರ್ಥವಿದೆಯಪ್ಪಾ” ಎಂದಿದ್ದರು. ಜೀವನದ ಹಿಂಬದಿ ಬೆಳಗುತ್ತಿರುವ ಚೈತನ್ಯದ ವರೆವಿಗೂ, ಅಲ್ಲಿಂದ ಇಲ್ಲಿಯವರೆಗೆ ವಿಕಾಸವಾದ ಜೀವನದ ಬಗೆಗಿನ ದೃಷ್ಟಿ ಇದ್ದಾಗ ಇಂತಹ ಮಾತು ಬರುತ್ತದೆ.

      ನಮ್ಮ ಋಷಿ ಸಮಾಜದಲ್ಲಿ ಒಂದು ಮರದಿಂದ ಉದುರಿದ ಎಲೆಯಿಂದ ಇಷ್ಟು ಉದಾತ್ತವಾದ ಜೀವನ ಪಾಠವನ್ನು ಕಂಡರುಹಿದ ಮಹಾತ್ಮರಿದ್ದಾರೆ. ಅಂತಹ ಹೆಮ್ಮೆಯ ಋಷಿಗಳ ವಿಚಾರದ ಬೆಳಕಿನಲ್ಲಿ ನಾವೆಲ್ಲರೂ ನಡೆಯುವಂತಾಗಲಿ ಅಲ್ಲವೇ?

      ಸೂಚನೆ:  23/04/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.

      Sunday, April 21, 2019

      मेरा देश है भुवनत्रय (Mera desh bhuvanatray)

      मूल लेखन: सुब्रह्मण्य सोमयाजी 
      हिन्दी अनुवाद: श्रीमती  इन्दिरा  एम्.हेच 




      कौन सा है आपका देश? भारतियों का  भारत, इंग्लंडवालों का इंग्लैण्ड, अमेरिकावालों का अमेरिका,जापानियों का जपान | इसमें विशेषता क्या है ? सामान्य तौर से जो भूमि हमारे जन्म एवं  विकास के लिए कारण बनी वह भूमि ही हमारा देश है | स्वदेश वह  हैं  जहाँ हमारा जीवन   व्यतीत  हुआ हो  | हम जिसमे बसे हैं वह भूमि | अपने देश के प्रति निष्ठा, प्रीति सभी देशवासियों में रहना स्वाभाविक है | 

      मगर हमारी शीर्षिका  कहती  है ' भुवनत्रय ही मेरा देश है '| 'स्वदेशो भुवनत्रयं'| यह वाक्य इस देश के महर्षियों की बोली है | सिर्फ हमारे रहनेवाले भौगोलिक प्रदेश मात्र ही नहीं, तीनों लोक हमारा देश कहलाता है | यह कैसे संभव हो सकता है ? यह  सिर्फ हृदयविशालता का प्रदर्शन  मात्र है क्या ? अथवा बढ़ा चढ़ाकर किया गया एक दावा  है क्या ? क्या इस बात के पीछे कोई सार है ? इसका विवेचन इधर अवश्यक  है|  

      यहाँ ‘ स्व’ माने हम पर शासन करनेवाले जीवशक्ति है| हमें जीवितरहने के लिए, बातचीन करने के लिए, उतना ही क्या हमें उच्वास-निश्वास के लिए भी हमारे पीछे रहे जीवशक्ति  का अवलम्बन चाहिए | हमारा   अस्तित्व   जीव के रहने पर निर्भर है| महर्षियों  के आनुभविक ज्ञान की तरह इस चेतन की व्याप्ति तीनों लोकों तक व्याप्त है| वे तीन  लोक कौन से है? बाहर दिखनेवाले स्थूल 'भूः' इस स्थूललोक की आसरा  पृष्ठभूमि  में विराजमान  सूक्ष्मलोक "भुवः'’ |  यह  देवों का  साम्राज्य है | उसका  भी आधार है सर्वमूल  परब्रह्मलोक  ‘परा’- 'सुवः'|  जब जीवशक्ति तपस्या से इन तीनो लोकों तक व्याप्त होने की क्षमता पालेति है, तब उस उन्नत स्थीति से ‘’स्वदेशो  भुवनत्रयं" जैसे सत्ययुक्त उद्गार निकलते हैं |    
        
      ऐसे तीनो लोकों में संचार करके अंतरनुभव [पूर्ण ] महर्षियों  ने सिर्फ अपने भौतिक भू भागो  को  स्वदेश नही माना | इन लौकिक भूभागों के जो आधार है, वासस्थान है, उस परब्रह्मवस्तु जिन देशों में व्यक्त है उन सभी देशो को भी स्वदेश ही माना है |  तीनों लोकों तक व्याप्त जीवन है उनका |  इसीलिए ‘स्वदेशो भुवनत्रयं’’ एक अनुभवसिद्ध बात है |   

      सिर्फ इन्द्रियक्षेत्रो में ही रहनेवाले हमें इंद्रियों के भी पीछे रहकर  चैतन्य देनेवाले अतीन्द्रियक्षेत्र का, सूक्ष्म और परा दृष्टियों का ज्ञान नहीं है | इसीलिए हम एक परिमित क्षेत्र को ही हमारा देश समझते है| लेकिन सर्वव्यापी परमात्मा के सुख में रहनेवाले महर्षिलोगो के लिये अपरिमित क्षेत्र को ही अपना देश कहना सहज है| वैसे अंतरनुभव से जुडी हुई बात है ‘ स्वदेशो भुवनत्रयं' | यह सिर्फ भावनात्मक बात नहीं| यह अनुभव से आनंदित होनेवाले की वास्तविक घोषणा है |  इसी को पुष्ट करनेवाले एक सुभाषित है- 
             ‘’ अयं निजः पारो वेति  गणना लघुचेतसां | 
                उदारचरितानां तु वसुधैव कुटुम्बककं ||”

      इसका अर्थ है कि “यह मेरा है,’’ यह औरों का है’’ यह संकुचित मनोभाव रखनेवालों की आलोचना है| मगर सभी जीव-जंतुवो  में सर्वमूल भगवान को ही देखनेवाले उदारचरितों  के  लिए सारा विश्व अपना एक कुटुम्ब जैसे प्रतीत होना  स्वाभाविक ही  है | 

      सारे जगत को इस उदारभावना से देखने के लिए सर्वव्यापी परमसत्य का अनुभव होना अवश्यक है | वैसे अनुभव को ही जीवन का परम लक्ष्य मानकर जीवकोटियों के जेवनो को  आनंदभरित  करने हेतु मन, घर, देश अतः सारे राष्ट्र को एक सूत्र में बाँधकर आगे चलनेवाली भूमि है हमारा भारत | ऐसे अंतरंग  की अनुभूति से व्याप्त जीवनदर्शन है ‘ स्वदेशो भुवनत्रयं’ | 


      Note: The Kannada version of this article can be viewed at AYVM blogs

      ನಾಮಕರಣದ ಹಿಂದಿರುವ ತತ್ವ - ಆಚರಣೆ (Namakaranada hindiruva tatva -acharane)

      ಲೇಖಕರು: ತಾರೋಡಿ ಸುರೇಶ


      ಹಿಂದಿನ ಲೇಖನದಲ್ಲಿ ಪದಕ್ಕೂ ಪದಾರ್ಥಕ್ಕೂ ಇರುವ ಮೌಲಿಕ ಸಂಬಂಧವನ್ನು ಸಂಕ್ಷಿಪ್ತವಾಗಿ ನೋಡಿದೆವು. ಈ ಲೇಖನದಲ್ಲಿ ನಾಮಕರಣವು ಹೇಗೆ ಸಂಸ್ಕಾರವಾಗುತ್ತದೆ ಎಂಬುದನ್ನು ಸ್ವಲ್ಪ ವಿವೇಚಿಸೋಣ.

      ಪದಪದಾರ್ಥಗಳಿಗೆ ಒಂದು ಅವಿನಾಭಾವ ಸಂಬಂಧವಿರುವುದನ್ನು ನಮ್ಮ ರಾಷ್ಟ್ರಕವಿಯಾದ ಕಾಳಿದಾಸನು “ ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ! ಜಗತಃ ಪಿತರೌವಂದೌ ಪಾರ್ವತೀಪರಮೇಶ್ವರೌ!! ಎಂದು ವರ್ಣಿಸಿದ್ದಾನೆ. ಅದು ಪ್ರಕೃತಿ-ಪುರುಷರಂತೆ ಒಂದನ್ನು ಬಿಟ್ಟು ಇನ್ನೊಂದು ಇರದು. ಪುರುಷನ ಅಭಿವ್ಯಕ್ತಿಯಾಗಿ ಪರಕೃತಿಯಿದ್ದರೆ, ಪ್ರಕೃತಿಯ ಮೂಲನೆಲೆಯಾಗಿ ಪುರುಷನಿರುತ್ತಾನೆ. ಅದೇ ರೀತಿ ಪದಾರ್ಥವು ವಿಕಾಸದ ಹಾದಿಯಲ್ಲಿ ಶಬ್ಧರೂಪವನ್ನು ತಾಳಿ ತನ್ನನ್ನು ಯಥಾವತ್ತಾಗಿ ಪತ್ರಿನಿಧಿಸಬಲ್ಲ ಪದವಾಗುತ್ತದೆ. ಒಂದನ್ನು ಅರಿತರೆ ಇನ್ನೊಂದನ್ನು ಪಡೆದಂತೆಯೇ.

      ಇಲ್ಲಿ ನಾಮವು ಜೀವಸಮೇತವಾದ ದೇಹಕ್ಕೆ ಒಂದು ಒಡಲಾಗಿರುವುದು. ಅದು ಚೇತನಕ್ಕೆ ಶಬ್ಧರೂಪವಾದ ಒಂದು ಮೂರ್ತಿ. ಇಂತಹ ಋಷಿಪ್ರೋಕ್ತವಾದ ಹೆಸರುಗಳನ್ನು ಉಚ್ಛರಿಸುವಾಗ ಕೂಡ ತಕ್ಕ ವಿಜ್ಞಾನದೊಡನೆ ಉಚ್ಛರಿಸಬೇಕು. ಆಗ ಅದು ಮಂತ್ರವಾಗುತ್ತದೆ. ನಮ್ಮ ಹೆಸರನ್ನು ಹೇಳುವುದು, ಇನ್ನೊಬ್ಬರು ಉಚ್ಛರಿಸಿದಾಗ ಶ್ರವಣ ಮಾಡುವುದು ಇವು ಅಸಂಖ್ಯವಾಗಿ ಆಗುವುದರಿಂದ ಅದರ ಒಂದು ವಿಶೇಷ ಪರಿಣಾಮವಾಗಿ, ಅದು ಶುದ್ಧಿಗೊಳಿಸುವ ಸಂಸ್ಕಾರವಾಗಿ ನಮ್ಮನ್ನು ಮೂಲಚೈತನ್ಯದತ್ತ ನಯನ ಮಾಡುತ್ತದೆ. ಉದಾಹರಣೆಗೆ ನಾರಾಯಣ ಎಂಬ ನಾಮವು ಪರಂಜ್ಯೋತಿಯ ಪ್ರತಿಮೆ. ಹೀಗೆ ಇಟ್ಟ ಹೆಸರು ತಕ್ಕ ವರ್ಣಶುದ್ಧಿ, ಅರ್ಥಶುದ್ಧಿ ಮತ್ತು ಮಂತ್ರಶುದ್ಧಿಯನ್ನು ಹೊಂದಿ ನಾಮರೂಪ ವಿಭಾಗವಿಲ್ಲದ ಬೀಜಸ್ಥಾನದಲ್ಲಿರುವ ಭಗವಂತನೊಂದಿಗೆ ಸೇರಿಸುತ್ತದೆ.

      ವಾಸ್ತವಿಕವಾಗಿ ಇದೊಂದು ಪೂಜೆಯೂ ಹೌದು. ಈ ಕಾರಣದಿಂದಲೇ, ನಾಮವನ್ನು ತಪ್ಪಾಗಿ ಉಚ್ಛರಿಸಬಾರದು. ಆತ್ಮನಾಮ,ಗುರೋರ್ನಾಮ,ಭಾರ್ಯಾನಾಮ. ಜ್ಯೇಷ್ಠಪುತ್ರ ನಾಮಗಳನ್ನು ಎಲ್ಲರಿಗೂ ಹೇಳಬಾರದು ಎಂದೆಲ್ಲ ನಿಯಮಗಳಿವೆ. ಕೆಲವರು ಹೆಸರು ತುಂಬಾ ಮುಖ್ಯ, ಏಕೆಂದರೆ ಅದು ಜೀವನದುದ್ದಕ್ಕೂ ಬರುತ್ತದೆ ಎನ್ನುತ್ತಾರೆ. ಆದರೆ ಋಷಿಗಳು ಮರಣಾನಂತರವೂ ಬರುತ್ತದೆ ಎನ್ನುತ್ತಾರೆ. ಪಿತೃಕರ್ಮದಲ್ಲಿಯೂ ನಾಮದ ಪಾತ್ರವಿದೆ.

      ಸ್ತ್ರೀಪುರುಷರ ಹೆಸರುಗಳಲ್ಲಿರಬೇಕಾದ ವ್ಯತ್ಯಾಸಗಳ ಬಗ್ಗೆಯೂ ಆಳವಾದ ತಾತ್ವಿಕ ಚಿಂತನೆಯಿರುವುದನ್ನು ನೋಡಬಹುದು. ವರ್ಣಗಳ ಸಂಖ್ಯೆ,ಮೃದುತ್ವ, ವರ್ಣಸಂಯೋಜನೆ.ಅರ್ಥ ಎಲ್ಲವುದನ್ನೂ ವಿಮರ್ಶಿಸಿದ್ದಾರೆ. ಮಾಸನಾಮ, ನಕ್ಷತ್ರನಾಮ, ವ್ಯವಹಾರನಾಮ ಮತ್ತು ಯಾಜ್ಞೀಯವಾದ ನಾಮ ಎಂಬುದಾಗಿ ನಾಲ್ಕು ವಿಧದ ನಾಮಗಳಿವೆ. ಒಂದೊಂದು ಮಾಸ, ನಕ್ಷತ್ರಗಳಿಗೂ ಅಧಿಷ್ಠಾತೃ ದೇವತೆಗಳಿರುತ್ತಾರೆ. ಆಯಾ ದೇವತೆಗಳಿಗೆ ಸಂಬಂಧಿಸಿರುವ ಹೆಸರನ್ನು ಇಡಬೇಕು. 

      ಗುಹ್ಯನಾಮವೆಂಬುದೊಂದಿದೆ. ಇದನ್ನು ತಂದೆತಾಯಿಗಳು ಮಾತ್ರ ತಿಳಿದಿರಬೇಕು. ಶತೃಗಳಿಂದ ಇದನ್ನು ಬಹಳ ರಹಸ್ಯವಾಗಿಟ್ಟುಕೊಂಡಿರಬೇಕು. ಸಾಮಾನ್ಯವಾಗಿ ಹನ್ನೊಂದು ಅಥವಾ ಹನ್ನೆರಡನೆಯ ದಿನ ಈ ಸಂಸ್ಕಾರವನ್ನು ನಡೆಸಬೇಕು.ತಂದೆಯೇ ಮಾಡಬೇಕು. ತಂದೆಯಿಲ್ಲದಿದ್ದರೆ ಕುಲವೃದ್ಧರು,ಆಚಾರ್ಯರು  ಮಾಡಬಹುದು. ಒಟ್ಟು 13 ಮಂತ್ರಗಳಿವೆ.ಮಗುವಿನ ತಾಯಿಯು ಪತಿಯ ಬಲಭಾಗದಲ್ಲಿ ಕುಳಿತು ಶಿಶುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾಳೆ. ನಂತರ ಚಿನ್ನ ಅಥವಾ ಕಂಚಿನಪಾತ್ರೆಯಲ್ಲಿ ಪುಷ್ಕಳವಾಗಿ ಅಕ್ಕಿಯನ್ನು ಹಾಕಿ ಅದರ ಮೇಲೆ ಕುಲದೇವತೆ, ಗಣಪತಿ, ನಾಮದೇವತೆಗಳ ಹೆಸರುಗಳನ್ನು ಬರೆದು ಪೂಜಿಸಬೇಕು. ನಂತರ ಹೆಸರಿಡುವ ಸಂಕಲ್ಪ. ಮಗುವಿನ ಹೆಸರನ್ನು ಬಲಗಿವಿಯಲ್ಲಿ ಹೇಳಬೇಕು. ಎಲ್ಲ ಹೆಸರುಗಳಿಗೂ ಹಿರಿಯರ ಆಶೀರ್ವಚನ, ನೆತ್ತಿಯ (ಬ್ರಹ್ಮರಂದ್ರದ) ಆಘ್ರಾಣ ಇವೆಲ್ಲವುದರೊಂದಿಗೆ ನಾಮಕರಣ ಪ್ರಯೋಗವು ಸಂಪನ್ನವಾಗುವುದು. 

      ಶುಭ, ಭಾಗ್ಯ, ಕೀರ್ತಿ ಎಲ್ಲವನ್ನೂ ನಾಮವು ಕೊಡುತ್ತದೆ. ಸರಿಯಾಗಿ ಉಪಾಸನೆ ಮಾಡಲ್ಪಟ್ಟಾಗ ಅದು ರೂಪದ ಉಪಾಸನೆಯೇ ಆಗಿ, ಮುಂದಕ್ಕೆ ದೇವತಾಪ್ರಸನ್ನತೆಗೂ ಕಾರಣವಾಗಿ ಜೀವನವನ್ನು ಉತ್ಕರ್ಷದಲ್ಲಿ ನಿಲ್ಲಿಸುತ್ತದೆ. 

      ಸೂಚನೆ: 20/04/2019 ರಂದುಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.

      ಮತದಾನ (mathadaana)

      ಲೇಖಕರು:  ಸುಬ್ರಹ್ಮಣ್ಯ ಸೋಮಯಾಜಿ

      ಇವತ್ತಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತವಿರುವ ವಿಷಯ ಮತದಾನ. ನಮ್ಮ ದೇಶ ಈಗ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಯನ್ನು ಹೊಂದಿರುವುದರಿಂದ ಮತದಾನ ಅತ್ಯಂತ ಮಹತ್ವದ ವಿಷಯವಾಗುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಅಂದರೆ ಎಲ್ಲ ಪ್ರಜೆಗಳ ಜವಾಬ್ದಾರಿ ಬಹಳ ಹೆಚ್ಚಾಗಿರುತ್ತದೆ. ಅವರು ಪ್ರಭುತ್ವ ಸಂಪನ್ನರಾಗಬೇಕಾದರೆ ಜೀವನದಲ್ಲಿ ಒಳಿತು ಯಾವುದು, ಕೆಡಕು ಯಾವುದು, ಸಮಾಜದ ಹಿತ-ಅಹಿತಗಳ ವಿವೇಚನೆ ಆಯಾ ದೇಶದ ಪ್ರಜೆಗಳಿಗೆ ಅವಶ್ಯಕವಾಗಿರಬೇಕಾಗುತ್ತದೆ. ಆದರೆ ಇಂದಿನ ನಮ್ಮ ಪ್ರಜಾ ಪ್ರಭುತ್ವದಲ್ಲಿ ನಾವು ಪ್ರಜೆಗಳು ಅಂತಹ ಹೊಣೆಗಾರಿಕೆಯಿಂದ ನಮ್ಮ ಮತಗಳನ್ನು ಚಲಾಯಿಸುತ್ತಿದ್ದೆವೆಯೇ ಎಂದು ಎಲ್ಲರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು.

      ನಮ್ಮ ಪ್ರಾಚೀನ ಭಾರತದಲ್ಲೂ ಜನಾಭಿಪ್ರಾಯಕ್ಕೆ ಅತ್ಯಂತ ಮಹತ್ವವಿತ್ತು. ರಾಮ ಪಟ್ಟಾಭಿಷೇಕವನ್ನು ಪುರಜನರೆಲ್ಲರ ಅನುಮತಿಯೊಂದಿಗೆ ದಶರಥ ಮಹಾರಾಜ ನಿಶ್ಚಯಿಸಿದ್ದ. ರಾಮರಾಜ್ಯದಲ್ಲಿಯೂ ಜನಾಭಿಪ್ರಾಯಕ್ಕೆ ಎಷ್ಟೊಂದು ಮಹತ್ವವಿತ್ತೆಂಬುದು ರಾಮನ ಜೀವನದಿಂದಲೇ ವ್ಯಕ್ತವಾಗುತ್ತದೆ. ರಾಮನ ಪೂರ್ವಜ ದಿಲೀಪನ ವಿಷಯದಲ್ಲಿ ಅವನು ಎಷ್ಟು ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಎಂದರೆ  ಅವನ ರಾಜ್ಯದಲ್ಲಿ ಪ್ರಜೆಗಳನ್ನು ಹೆತ್ತ ತಾಯಿತಂದೆಯರು ಕೇವಲ ಜನ್ಮ ಕೊಟ್ಟ ನಿಮಿತ್ತ ಮಾತ್ರರಾಗಿದ್ದರು. ಅವರ ಎಲ್ಲ ಅವಶ್ಯಕತೆಗಳನ್ನೂ ರಾಜನೇ ಪೂರೈಸುತ್ತಾ ಅವರ ನಿಜವಾದ ತಂದೆ ತಾಯಿಯಂತಿದ್ದನು ಎಂಬ ಉಲ್ಲೇಖ ಬರುತ್ತದೆ. ಅಂದು ಪ್ರಜಾ ಪ್ರಭುತ್ವ ಎನ್ನುವ ಹೆಸರಿನಲ್ಲಿ ವ್ಯವಸ್ಥೆ ಇಲ್ಲದಿದ್ದರೂ ಇಂದಿಗಿಂತ ಪ್ರಜೆಗಳ ಅಭಿಪ್ರಾಯಗಳಿಗೆ ಮಹತ್ವವಿತ್ತೆಂದು ನಮಗೆ ತಿಳಿದುಬರುತ್ತದೆ.

      ಇಂದಂತೂ ರಾಜರಿಲ್ಲ ಪ್ರಜೆಗಳೇ ಪ್ರತಿನಿಧಿಗಳನ್ನು ಆರಿಸಬೇಕು. ಪ್ರಜೆಗಳಾದ ನಾವೆಲ್ಲರೂ ಈ ಸಂಸ್ಕೃತಿಯ ವಾರಸುದಾರರು. ನಮ್ಮ ಮೇಲೆ ಈ ದೇಶವನ್ನು ಕಟ್ಟಿ ಬೆಳೆಸುವ, ಇಲ್ಲಿ ನೆಮ್ಮದಿಯ ವಾತಾವರಣ ಎಂದೆಂದಿಗೂ ಇರುವಂತೆ ಮಾಡುವ ಗುರುತರವಾದ ಹೊಣೆ ಇದೆ. ಹಾಗಿದ್ದಮೇಲೆ ಎಲ್ಲರೂ ಈ ವ್ಯವಸ್ಥೆಯನ್ನು ಕಾಪಾಡುವ ಮತದಾನವನ್ನು ಮಾಡಲೇಬೇಕು. ಅಂತಹ ಜವಾಬ್ದಾರಿಯನ್ನು ನಿರ್ವಹಿಸುವಾಗ ದೇಶ ಹಿತ, ಒಳ ಹೊರಗಿನ ದೇಶದ ರಕ್ಷಣೆ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿನಿಧಿಗಳನ್ನೇ ಆರಿಸಬೇಕಾಗುತ್ತದೆ. ಒಂದೊಮ್ಮೆ ನಿಂತಿರುವ ಎಲ್ಲರೂ ಅಯೋಗ್ಯರಾಗಿದ್ದಾಗ ಕಡಿಮೆ ಅಯೋಗ್ಯರನ್ನಾದರೂ ಆರಿಸಬೇಕಾಗುತ್ತದೆ. ಇವರೆಲ್ಲರ ರುವಾರಿಯಾಗಿ ರಾಷ್ಟ್ರಮಟ್ಟದಲ್ಲಿ ದೇಶಪ್ರೇಮಿಯಾದ ನಾಯಕನಿದ್ದರೆ ಅವನನ್ನು ಗಮನದಲ್ಲಿಟ್ಟು ಮತವನ್ನಂತೂ ಚಲಾಯಿಸಬೇಕು. ಅದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ.



      ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-“ನಮ್ಮ ಜೀವನದಲ್ಲಿ ಗೊತ್ತು,ಗುರಿ,ಶಿಸ್ತು,ಜವಾಬ್ದಾರಿ ಇಷ್ಟೂ ಇದ್ದಾಗ ಒಂದು ಸಮೃದ್ಧ ಜೀವನವಾಗುತ್ತದೆ” ಎಂದು. ಹಾಗಿರಬೇಕಾದರೆ ನಾವೆಲ್ಲಾ ಸುಶಿಕ್ಷಿತರಾಗಬೇಕಾಗುತ್ತದೆ.  ನಮ್ಮೊಳಗೇ ಬೆಳಗುವ ಚೈತನ್ಯ,ಅದರ ಆಶಯವೇನು? ಅದರಂತೆ ಬದುಕಿದಾಗ ಅದೆಷ್ಟು ನೆಮ್ಮದಿಯ ಜೀವನ ನಡೆಸ ಬಹುದು ಅಂತಹ ಅನುಭವದ ವ್ಯಕ್ತಿಗಳ ಸಮಾಜ ಎಷ್ಟು ಸುಂದರವಾಗಿರುತ್ತದೆ, ಅಂತಹವರು ಕಟ್ಟಿದ ರಾಷ್ಟ್ರ ಒಂದು ಸಮೃದ್ಧವಾದ ರಾಷ್ಟ್ರವಾಗುತ್ತದೆ  ಎಂಬ ಬಗ್ಗೆ ಶಿಕ್ಷಣ ಅವಶ್ಯಕ. ನನಗೇನು ಈ ದೇಶದಿಂದ ಲಾಭವಾಗುತ್ತಿದೆ ಎಂದಷ್ಟೇ ಆಲೋಚನೆ ಮಾಡುವವರು ಸುಶಿಕ್ಷಿತರಲ್ಲ. ನಮ್ಮ ದೇಶದ ಜ್ಞಾನಿಗಳು ಬೆಳೆಸಿದ ಇಲ್ಲಿನ ಸಂಸ್ಕೃತಿ, ನಾಗರೀಕತೆಗಳನ್ನು ಉಳಿಸಿ ಬೆಳೆಸುವಲ್ಲಿ ನಾನೇನು ಮಾಡಬಹುದು ಎಂಬ ಸೇವಾ ಮನೋಭಾವದ ಸಮಾಜ ನಮ್ಮದಾಗಬೇಕು. ಹಾಗಾದಾಗ ಅಂತಹ ವ್ಯಕ್ತಿಗಳು ನಮ್ಮ ಪ್ರತಿನಿಧಿಗಲಾಗಲು ನಮ್ಮ ಮತವನ್ನು ಚಲಾಯಿಸಬೇಕು. ನಾವು ಮನೆಯಲ್ಲೇ ಕುಳಿತರೆ ಒಬ್ಬ ಸ್ವಾರ್ಥಿ, ಸಮಾಜ ಕಂಟಕನಾಗಿರುವವನು ಆರಿಸಿ ಬಂದರೆ ಅದಕ್ಕೆ ನಾವೂ ಕಾರಣರಾದಂತಾಗುತ್ತದೆ. ನಮ್ಮ ಕರ್ತವ್ಯವಾದ ಮತದಾನವನ್ನು ಮಾಡದೇ ಸಮಾಜದಲ್ಲಿ ನೆಮ್ಮದಿಯನ್ನು ನಿರೀಕ್ಷಿಸುವಂತಿಲ್ಲ. “ಧರ್ಮಸ್ಯ ಫಲಮಿಚ್ಚಂತಿ ಧರ್ಮಂ ನೇಚ್ಚಂತಿ ಮಾನವಾಃ “ ಎಂಬಂತೆ ಫಲವನ್ನು ಮಾತ್ರ ನಿರೀಕ್ಷೆ ಮಾಡಿ ಆ ಫಲಕ್ಕಾಗಿ ಯಾವ ಪರಿಶ್ರಮವನ್ನೂ ಪಡದಿರುವವರ ಸಾಲಿಗೆ ನಾವು ಸೇರಬಾರದು. ಸಮಾಜದಲ್ಲಿ ಈ ಬಗೆಯ ಸುಶಿಕ್ಷಣ ವ್ಯಾಪಕವಾಗಿ ಬೆಳೆದಾಗ ಪ್ರತಿನಿಧಿಗಳಾಗಿ ನಿಲ್ಲುವ ಅಂತಹ ವ್ಯಕ್ತಿಗಳು ತಯಾರಾಗುತ್ತಾರೆ. ಅಂತಹವರು ಆರಿಸಿಬಂದಾಗ ಒಂದು ಸುಶಿಕ್ಷಿತ,ಸಮೃದ್ಧ ರಾಷ್ಟ್ರ ನಿರ್ಮಾಣವಾಗುತ್ತದೆ. ಇಂತಹ ಗುರುತರವಾದ ಕಾರ್ಯವಾದ ಮತದಾನವನ್ನು  ನಾವೆಲ್ಲರೂ ತಪ್ಪದೇ ಮಾಡೋಣ.

      ಸೂಚನೆ: 20/04/2019 ರಂದುಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.

      Purificatory Rites (Samskaaras)

      Article in Kannada: Tarodi Suresha
      English Rendering: Padmini Srinivasan

      Even though the word Samskaara is in use here and there, aptness of its usage is questionable.  Quite a few are apprehensive, as they believe that funeral rites are the only Samskaara!
      In Bhaarata, this word is in common use from times immemorial. In our tradition, this word is valued as a purification process. Samskaara is regarded as the process of cleansing all defects in an object and filling-in good qualities so as to bring it back to its original form. In other words, removing all the stains and restoring the lustre of an object is Samskaara. Through this refining process an object regains its innateness, immaculateness, sanctity as well as beauty.
      Through their deep penance,Maharshis have handed down comprehensive Samskaaras to us. These are actions bound by Vijnaana (i.e. special and deep knowledge of Jnaana,the root of all creation), and help us reach the primary goal of life viz. JnaanaSamskaaras exist for the human body, for the mind as well as for the seven Dhaatus(vital elements). Samskaaras are religious rites, which eliminate the Rajas and Tamascharacter from the body and restore the soul to its original form, while replenishing its lost lustre. Samskaaras bring back the memory of the True self (Smruti) by eliminating forgetfulness (Vi-Smruti).
      What is purity? Complete purity may be regarded as a state of being engrossed with the Transcendental Truth, existing at the root of all creation (Jnaana) and getting immersed in the principles from tip to toe. The purity attained by the seven Dhaatusof our body as well as the mind, intellect and sense organs, through the usage of materials, purified through Samskaara, is greatly valuable. It is apparent that, these end results are achieved through the appropriate and effective usage of Mantra(chant), Tantra (religious procedure), Kaala (auspicious time) and Dravya (raw material).
      Parabrahman is the only one, who can purify everything, as he is free from all kinds of deformity or distortion. The verse “Avikaaraaya Shuddhaaya Nityaaya Paramaatmane …” substantiates this statement. This aspect is fundamental. It includes meditation on Paramaatman, while performing the religious procedures handed down to us by Rshis as per their visualization of Vijnaana.

      Impurity is not our innate nature. Even by experience we are able to say that purity represents our natural form. Good health is originality, not ill health. Ill health is like a foreign body. This example was cited often by Shriranga Mahaaguru. Hence Samskaaras are essential. Though the Atman (soul) is pure, He appears impure due to bondage accruing from Paapa karmas (sinful acts).Samskaaras restore purity by cleaning and clearing the Paapas, and serve as stepping stones in pursuit towards Self-realisation.
      Right from conception to the final funeral rites, Samskaaras have been classified as sixteen. Keeping in mind the benefits expected in different phases of life, Samskaaras are designed to encompass the entire life of an individual. The most important among them are: Garbhaadhaana (conception),Pumsavana and Seemanthonnayana (pre-natal rituals), Jaatakarma (birth rites), Naamakarana (naming celebration), Nishkramana(Child initially setting out),Anna Praashana (first solid food-feeding), Choodaakarma(first tonsuring), Upananyana(Sacred thread initiation),Four veda vratasSnaana(holy bath on completion of vedic studies), Vivaaha(marriage) and Antyeshti(funeral rites). Some of these are replaced with a few others too by different Gruhya Sutrakaaras (Law-givers). Further a classification as pre-Samskaara and post-Samskaara too exists. It is not that this list is exhaustive and ultimate. Evils abounding, it is necessary to have equally endless Samskaaras which are capable of cleansing these evils.
      These once-in-a-lifetime rituals, while purifying the seven Dhaatus of the human body, have a cumulative effect over a lifetime. They eradicate any demerits associated with the womb (Stree-prakrti or the feminine component which has the ability to assist in evolution) as well as the seed (Purusha or the masculine component which initiates growth of a progeny). This paves way for the growth of a healthy lineage. Purity starting from the outer body up to the inner soul, leads to the realisation of the natural self.  A noble society thus takes shape. Yet another valuable gain through Samskaaras is acquiring the eight Atma-gunas (great basic qualities of the Atman) such as Dayaa (compassion), Kshamaa (pardon), Anasuya(free from envy) etc. Through Samskaara these qualities get a boost and lead to a sense of awakening. For Samskaaras to make a good impact, everyone should necessarily possess these qualities. It is also true that a group of such noble people makes a virtuous society. Those who participate in the Samskaara celebrations also derive Samskaara. Good deeds such as Anna daana(feeding people), Dhana daana(gifting wealth) accrue Punya(merits).
      As these Samskaaras culminate in obtaining the grace of the Almighty, they are regarded as a Yajna. Purity is obtained through Mantra(hymns), Tantra (rituals),Dravya (materials), and Kaala(appropriate time of conducting celebrations). Not just grace of God, these are great boons granted to us by Maharshis in order to attain communion with Paramatman (The Supreme Being).
      Note: The Kannada version of this article can be viewed at AYVM blogs