Sunday, 23 June 2019

ಪರಮಾತ್ಮನೊಡನೆ ಸೇರುವೆಯೇ “ಯೋಗ” (Paramaathmanodane seruveye yoga)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಒಂದು ಸುಭಿಕ್ಷವಾದ ರಾಜ್ಯದಲ್ಲಿ ಜನಾನುರಾಗಿಯಾದ ರಾಜನಿದ್ದ, ಒಮ್ಮೆ ದುರದೃಷ್ಟವಶಾತ್ ಆ ರಾಜ್ಯದ ಮೇಲೆ ಶತ್ರುಗಳ ಆಕ್ರಮಣವಾಯಿತು. ಶತ್ರುಗಳ ಕೈ ಮೇಲಾಯಿತು. ಆಗ ಮಂತ್ರಿಗಳೆಲ್ಲ ಸೇರಿ ಹೇಗಾದರೂ ಮಹಾರಾಜನನ್ನು ಕಾಪಾಡಬೇಕು. ಅವನು ಉಳಿದರೆ ಮುಂದೆ ಎಂದಾದರೂ ನಮ್ಮ ರಾಜ್ಯ ಸ್ವತಂತ್ರವಾದೀತು ಎಂದು ನಿಶ್ಚಯಿಸಿ ರಾಜನನ್ನು ತಲೆಮರೆಸಿಕೊಳ್ಳಲು ಪ್ರಾರ್ಥಿಸಿದರು. ಮೊದಲಿಗೆ ಒಪ್ಪದಿದ್ದರೂ ಮಂತ್ರಿಗಳ ಒತ್ತಾಯಕ್ಕೆ ಮಣಿದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ರಾಜ-ರಾಣಿಯರು ಕಾಡಿನಲ್ಲಿ ತಲೆ ಮರೆಸಿಕೊಂಡರು. ಅನೇಕ ದಿನಗಳು ಕಾಡಲ್ಲಿ ಕಳೆಯಲಾಗದೆ ರಾಣಿ, ನಂತರ  ರಾಜ ಇಬ್ಬರೂ  ಸ್ವರ್ಗಸ್ಥರಾದರು. ಆದರೆ ಅವರ ಪುಟ್ಟ ಮಗುವೊಂದು ಮಾತ್ರವೇ ಉಳಿಯಿತು. ಕಾಡಿನಲ್ಲಿ ಮಗುವಿನ ಅಳುವನ್ನು ಕೇಳಿ ಬೇಡರ ಪರಿವಾರವೊಂದು ಕರುಣೆಯಿಂದ ಅದನ್ನು  ತಮ್ಮ ಮನೆಗೆ ಕರೆದೊಯ್ದರು. ತಮ್ಮ ಮಗುವಿನಂತೆಯೇ ಬೆಳೆಸಿದರು. ದೊಡ್ಡವನಾದ ಮೇಲೆ ಆ ಹುಡುಗ ಆ ಬೇಟೆಗಾರ ಹುಡುಗರ ಮುಖಂಡನಾಗಿ ಬೇಟೆಯಾಡುತ್ತಿರುವಾಗ ಅಲ್ಲೊಬ್ಬ ಸಾಧುಗಳು ಇವನನ್ನು ನೋಡಿದರು. ಇವನ ಲಕ್ಷಣಗಳನ್ನೆಲ್ಲ ನೋಡಿ ಅವನಿಗೆ ಹೇಳಿದರು -ನೀನು ಎಲ್ಲರಂತಲ್ಲ. ಇಂದು ಮನೆಗೆ ಹೋಗಿ ನಿನ್ನ ಶರೀರದ ಭಾಗಗಳನ್ನೆಲ್ಲ ಸೂಕ್ಷ್ಮವಾಗಿ ಕನ್ನಡಿಯಲ್ಲಿ ನೋಡು. ನಿನ್ನ ವಕ್ಷಸ್ಥಳ, ಬಾಹುಗಳು, ಮೈಮಾಟ ಎಲ್ಲವೂ ಇತರರಂತೆಯೇ ಇದೆಯೇ ಎಂದು ಗಮನಿಸು ಎಂದರು. 

ಹುಡುಗನಿಗೆ ಕುತೂಹಲ. ಅವರೆಂದಂತೆಯೇ ತನ್ನನ್ನು ತಾನು ನೋಡಿಕೊಂಡನು. ಹೌದು. ತನ್ನ ಜೊತೆಯ ಇತರ ಹುಡುಗರಿಗೂ ತನಗೂ ಬಹಳ ವ್ಯತ್ಯಾಸವಿದೆ. ತನ್ನ ವ್ಯಕ್ತಿತ್ವ, ತೇಜಸ್ಸು ಎಲ್ಲವೂ ಅವರಿಗಿಂತ ವಿಶೇಷವಾಗಿದ್ದುದು ಗಮನಕ್ಕೆ ಬಂತು. ಮತ್ತೊಮ್ಮೆ ಆ ಸಾಧುಗಳನ್ನು ಭೇಟಿಯಾದ. ತಾವೆಂದಂತೆ ನನ್ನಲ್ಲಿ ವಿಶೇಷವೇನೋ ಇದೆ. ದಯಮಾಡಿ ನಾನು ಯಾರೆಂದು ತಿಳಿಸಿ ಎಂದು ಪ್ರಾರ್ಥಿಸಿದ. ತ್ರಿಕಾಲಜ್ಞರಾದ ಸಾಧುಗಳು ಅವನ ವೃತ್ತಾಂತವೆಲ್ಲವನ್ನೂ ವಿವರವಾಗಿ ತಿಳಿಸಿದರು. ಮತ್ತು ಅವನಿಗೆ ಅವನ ಕರ್ತವ್ಯದ ಅರಿವನ್ನು ಮೂಡಿಸಿದರು. ಅವನನ್ನು ಸೈನ್ಯವನ್ನು ಕಟ್ಟಲು ಪ್ರೇರೇಪಿಸಿದರು. ರಾಜಕುಮಾರನು ಅಂದಿನಿಂದ ತನ್ನ ಜೀವನದ ದಾರಿಯನ್ನು ಬದಲಿಸಿದ. ಅತ್ಯಂತ ಪರಿಶ್ರಮದಿಂದ ಜನಗಳನ್ನು ಸಂಘಟಿಸಿದ. ಎಲ್ಲ ಶಸ್ತ್ರ ವಿದ್ಯೆಗಳನ್ನು ಕರಗತ ಮಾಡಿಕೊಂಡ. ಒಂದು ಬಲಿಷ್ಠ ಸೈನ್ಯವನ್ನು ಕಟ್ಟಿ  ಹೋರಾಡಿ ತನ್ನ ಪೂರ್ವಿಕರು ಕಳೆದುಕೊಂಡಿದ್ದ ರಾಜ್ಯವನ್ನು ಮತ್ತೆ ಪಡೆದುಕೊಂಡು ರಾಜನಾಗಿ ಬೆಳಗಿದ.

ಇದು ನಮ್ಮೆಲ್ಲರ ಕಥೆಯಾಗಿದೆ. ನಮ್ಮೊಳಗೇ ಬೆಳಗುತ್ತಿರುವ ಆತ್ಮರಾಜ್ಯ ಒಂದಿದೆ. ಅದೇ ಭಗವಂತನ ಮಡಿಲು. ಅಲ್ಲಿಂದ ನಮ್ಮ ಮನಸ್ಸುಗಳು ವಿಯೋಗವಾಗಿ ಕಾಡುಪಾಲಾಗಿದ್ದೇವೆ. ನಮ್ಮ ಇಂದ್ರಿಯ ಜೀವನದ ವೇಗದಲ್ಲಿ ನಮ್ಮ ಸ್ವಸ್ವರೂಪವನ್ನೇ ಸಂಪೂರ್ಣವಾಗಿ ಮರೆತಿದ್ದೇವೆ. ಜೀವನದ ಸಣ್ಣ ಸುಖಗಳಿಗೆ ಮಾರುಹೋಗಿ ಆನಂದದ ಒಳಬದುಕನ್ನು ಕಳೆದುಕೊಂಡಿದ್ದೇವೆ. ನಮ್ಮ ಸ್ವರೂಪದಿಂದ  ನಮಗೆ ವಿಯೋಗ ಉಂಟಾಗಿದೆ, ಆ ರಾಜಕುಮಾರನಿಗೆ ಆದಂತೆ. ಮತ್ತೆ ನಮ್ಮ ನೈಜ ಸ್ವರೂಪವನ್ನು ನಾವು ನೆನಪು ಮಾಡಿಕೊಳ್ಳಬೇಕೆಂದೇ ನಮ್ಮ ಮಹರ್ಷಿಗಳು ಯೋಗವನ್ನು ಉಪಾಯವಾಗಿ  ತಂದುಕೊಟ್ಟರು.“ಜೀವ-ದೇವರ ಸಂಯೋಗವೇ ಯೋಗ” ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ಯೋಗವೆಂದರೆ ನಿಜವಾಗಿ ಪರಮಾತ್ಮನಲ್ಲಿ ಒಂದಾಗುವುದೇ ಆಗಿದೆ. ಆ ಸೇರುವೆಯ ಸಾಧನ ಮಾರ್ಗಕ್ಕೂ ಯೋಗವೆಂದೇ ಹೆಸರು. ಅದರಿಂದ  ನಮ್ಮ ಸ್ವರೂಪದಲ್ಲಿ “ಯೋಗ” ಉಂಟಾಗಿ ಆನಂದಿಸುವುದೇ ಯೋಗದ ಪರಮಗುರಿ. ನಮ್ಮೆಲ್ಲರ ಜೀವನದಲ್ಲೂ ಅಂತಹ ಯೋಗವನ್ನು ಹೊಂದುವಂತಾಗಲಿ. 


ಸೂಚನೆ:  21/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.   

To know more about Astanga Yoga Vijnana Mandiram (AYVM) please visit our Official Website and Facebook page:

ಜ್ಞಾನ ಸಂತಾನಕ್ಕಾಗಿ ವಿವಾಹ ಸಂಸ್ಕಾರ.(Jnaana santhaanakkagi vivaha samskara)

ಲೇಖಕರು: ತಾರೋಡಿ ಸುರೇಶವಿವಾಹ ಸಂಸ್ಕಾರದ ವಿವಿಧ ಹೆಸರುಗಳ ವಿವರಗಳನ್ನು ನೋಡುತ್ತಿದ್ದೆವು. ‘ನಿನ್ನ ಹೃದಯ ನನ್ನದಾಗಲಿ, ನನ್ನ ಹೃದಯ ನಿನ್ನದಾಗಲೀ’ ಎನ್ನುವ ಸಂಕಲ್ಪದಿಂದ ವಿಶಿಷ್ಟವಾಗಿ ಕೈಹಿಡಿಯುವ ಕ್ರಮವಿದಾಗಿರುವುದರಿಂದ ಪಾಣಿಗ್ರಹಣವೆಂಬ ಹೆಸರು. ವರನು ವಧುವನ್ನು ತನ್ನ ಬಳಿಗೆ ಕರೆದುಕೊಳ್ಳುವಾಗ ಸಂಯಮದಿಂದ ಕೂಡಿದ್ದು, ಧರ್ಮರೂಪವಾದ ಒಂದು ಕಟ್ಟಿಗೆ ಒಳಪಡುವಂತಹ ದಿವ್ಯಭಾವವನ್ನು ಹೊಂದುವುದಕ್ಕೆ ಉಪಯಮ ಎಂದು ಹೆಸರು ಪಶುಪ್ರಾಣಿಗಳಲ್ಲಿ ವಿಶೇಷ ಸಂಕಲ್ಪವೇನೂ ಇರುವುದಿಲ್ಲ. ಅವು ಇಂದ್ರಿಯ ಪ್ರೇರಣೆಗೆ ಅನುಗುಣವಾಗಿ ಸೇರುತ್ತವೆ. ಮನುಷ್ಯನಲ್ಲಿಯೂ ‘ವಯಸ್ಸಾಯಿತು, ಮದುವೆ ಮಾಡಿಬಿಡಿ’ ಎನ್ನುವ ಧೋರಣೆಯಿದ್ದಲ್ಲಿ ಅದು ಪ್ರಾಣಿಗಳ ಜೀವನವೇ ಆಯಿತು. ಆದರೆ ಜ್ಞಾನಿಗಳು ಇನ್ನೂ ಕೆಲವು ಪಾತ್ರತೆಯನ್ನು ಗಮನಿಸಿದ್ದಾರೆ. ಅಂತಹ ಪಾತ್ರತೆ ಇದ್ದಲ್ಲಿ ವಿವಾಹವು ಸಂಸ್ಕಾರರೂಪದಲ್ಲಿ ನಡೆದು ಶುದ್ಧಿಯನ್ನು ಉಂಟುಮಾಡುತ್ತದೆ. ವರನು ಗುರುಕುಲದಲ್ಲಿ ಬ್ರಹ್ಮಚಾರಿಯಾಗಿ ಅಧ್ಯಯನ ನಡೆಸಿ ಸ್ನಾತಕನಾಗುತ್ತಾನೆ. ಪ್ರಜಾತಂತುವನ್ನು ಕಡಿಯಬೇಡ ಎಂದು ಗುರುವು ಅದೇಶನೀಡಿ ಗೃಹಸ್ಥಾಶ್ರಮ ಸ್ವೀಕರಿಸಲು ಅನುಮತಿಸುತ್ತಾನೆ. ಸೂರ್ಯನಿಂದ ಬೆಳಕನ್ನು ಪಡೆಯುವಂತೆ ಗುರುವಿನಿಂದ ಜ್ಞಾನವನ್ನು ಪಡೆದಿರುವ ಬ್ರಹ್ಮಚಾರಿಯು, ಧರ್ಮಸಂತಾನವನ್ನು ಪಡೆಯಲು ವಿವಾಹ ಮಾಡಿಕೊಳ್ಳುತ್ತಾನೆ. ಗುರು ಕೊಟ್ಟ ಶಿಕ್ಷಣದಂತೆ  ಜ್ಞಾನಿಯಾಗಿ, ಆ ಜ್ಞಾನನೇತ್ರದಿಂದ ಜೀವನವನ್ನು ನಡೆಸಬಲ್ಲ ಯೋಗ್ಯತೆಯನ್ನು ಹೊಂದಿರುವವನು ಯುಕ್ತವಯಸ್ಸಿನಲ್ಲಿ ವಿವಾಹಿತನಾಗಬೇಕು. “ ವಿದ್ಯಾಂಚ ವಿತ್ತಂಚ ವಪುಃ ವಯಶ್ಚ” ಎಂದು ಸೂಚಿಸುವಾಗ ವಯಸ್ಸನ್ನು ಕೊನೆಯಲ್ಲಿ ಹೇಳಿದ್ದಾರೆ. ಅವನು ಪಡೆದಿರುವ ವಿದ್ಯೆಯಾದರೂ ವಿದ್ ಜ್ಞಾನೇ ಎನ್ನುವಂತೆ ಪರಮಾತ್ಮಸಾಕ್ಷಾತ್ಕಾರವನ್ನು ಹೊಂದಿಸುವಂತಹದ್ದು. ಅದು ಕೇವಲ ಎಂಎ ಪಿಹೆಚ್‍ಡಿ ತರಹದ್ದಲ್ಲ.

ವಧೂವರರ ನಡುವೆ ನಡೆಯುವ ಸಂಭಾಷಣೆಯೂ ಇದಕ್ಕೆ ಸಾಕ್ಷಿಯಾಗಿದೆ.ವಧುವು ವರನನ್ನು ಕುರಿತು ”ತಪಸ್ಸಿನಿಂದ ಜ್ಞಾನಿಯಾಗಿರುವ ನಿನ್ನನ್ನು ನಾನು ನೋಡುತ್ತಿದ್ದೇನೆ.ನಿನ್ನಂತಹ ಜ್ಞಾನಿಯಾದ ಸತ್ಪುತ್ರನನ್ನು ನಾನು ಆಶಿಸುತ್ತೇನೆ. ಆ ದೃಷ್ಟಿಯಿಂದ ನೀನು ನನ್ನನ್ನು ಸೇರು” ಎಂದರೆ ವರನೂ ಕೂಡ “ಜ್ಞಾನಿಯಾಗಿರುವ ನಿನ್ನನ್ನು ನಾನೂ ನೋಡುತ್ತಿದ್ದೇನೆ” ಎಂದು ಪರಮಾತ್ಮಸ್ಮರಣೆಯಿಂದ ಹೇಳುತ್ತಾನೆ. ಜ್ಞಾನಿಗಳಾದ ವಧೂವರರು ಧರ್ಮಸಂತಾನವನ್ನು ಬಯಿಸಿ, ಒಂದು ಧರ್ಮದ ಕಟ್ಟುಪಾಡಿಗೆ ಒಳಪಟ್ಟು ಗೃಹಸ್ಥಜೀವನಕ್ಕೆ ಹೆಜ್ಜೆಯಿಡುವ  ಇಂತಹ ದೃಶ್ಯಗಳು ಅದೆಷ್ಟು ಮನೋಹರವಾಗಿವೆ.!  ಅಲ್ಲಿ ವಧೂವರರ, ಸಮಾರಂಭದಲ್ಲಿ ಭಾಗವಹಿಸಿರುವ ಬಂಧುಬಾಂಧವರ, ಇಷ್ಟರ ಎಲ್ಲರ ಮನಸ್ಸನ್ನೂ ಇಂತಹ ಪರಮಾತ್ಮ ಸ್ಮರಣೆಯಲ್ಲಿ ಮುಳುಗಿಸಿ ಶುದ್ಧಗೊಳಿಸುವ ಅದ್ಭುತವಾದ ಯೋಜನೆಯನ್ನು ಋಷಿಗಳು ಹೆಣೆದಿದ್ದಾರೆ. ಹಾಗಿದ್ದಲ್ಲಿ ತಾನೇ ಜೀವನವು ಪಶುಸ್ತರದಲ್ಲಿಯೇ ನಿಲ್ಲದೆ ಮಾನವನ ಸಹಜಯೋಗ್ಯತೆಯಾದ ಯೋಗ-ಭೋಗ ಎರಡನ್ನೂ ಪಡೆದು ಪೂರ್ಣಜೀವನವನ್ನು ನಡೆಸಿದಂತಾಗುತ್ತದೆ.

“ಜಾಮಾತಾ ವಿಷ್ಣುವತ್ಪೂಜ್ಯಃ”  ಎಂದು ಅಳಿಯನನ್ನು ಪೂಜಿಸುವ ಪದ್ಧತಿಯಿದೆ. ಶ್ರೀಧರಸ್ವರೂಪ -ಪರಮೇಶ್ವರ ಸ್ವರೂಪ ಎಂಬುದಾಗಿ ಪೂಜೆಯನ್ನು ಕೈಗೊಳ್ಳಬೇಕಾದಲ್ಲಿ ಎಂತಹ ಯೋಗ್ಯತೆ ಅಳಿಯನಾಗುವವನಲ್ಲಿ ಇರಬೇಕು. ಅದು ಕಾಲಕ್ರಮದಲ್ಲಿ ‘ಜಾಮಾತಾ ದಶಮೋಗ್ರಹಃ’ ಎಂದಾಗಿಬಿಟ್ಟಿದೆ. ಅನ್ಯ ಒಂಬತ್ತು ಗ್ರಹಗಳ ಗತಾಗತಿಯನ್ನು ನಿರ್ಣಯಿಸಿ ಹೇಳಬಹುದು. ಆದರೆ ಈ ಅಳಿಯ ಎನ್ನುವಂತಹ ಹತ್ತನೆಯ ಗ್ರಹವು ಯಾವಾಗ ಹೇಗೆ ವರ್ತಿಸುತ್ತದೆ ಎನ್ನುವುದು ಊಹಾತೀತ. ಇದು ಎಲ್ಲರ ಅನುಭವದಲ್ಲಿರುವಂತಹದ್ದೇ. ಋಷಿಸಂಸ್ಕೃತಿಯ ಅಪಮೌಲ್ಯವನ್ನು ಇದು ಎತ್ತಿ ತೋರಿಸುತ್ತದೆ.

ಶ್ರೀರಂಗಮಹಾಗುರುಗಳು  ‘ಅಳಿಯ ಎಂದರೆ ಅಳಿಯದೇ ಇರುವವನು, ಅವನು ಅಚ್ಯುತ ಎನ್ನುವ ಅರ್ಥದಲ್ಲಿ ಬಂದಿದೆಯಪ್ಪಾ’ ಎಂದು ವಿವರಿಸಿದ್ದರು. (ಮುಂದುವರೆಯುತ್ತದೆ)     


ಸೂಚನೆ: 22/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

To know more about Astanga Yoga Vijnana Mandiram please visit our Official Website and Facebook page:

Thursday, 20 June 2019

ಹೂವಿನ ಮಾಲೆಯಿಂದ ನಿರ್ಣಯ (Hoovina maaleyinda nirnaya)

ಲೇಖಕರು: ತಾರೋಡಿ ಸುರೇಶಸಭೆಯಲ್ಲಿ ಗಂಭೀರವಾದ ಮೌನ ಆವರಿಸಿದೆ. ವಿಶೇಷ ಕುತೂಹಲದಿಂದ ಸಭಾಸದರೆಲ್ಲ ಪ್ರತೀಕ್ಷೆಯಲ್ಲಿದ್ದಾರೆ. ಸಂಸ್ಕೃತಿಯ ಬಹುಮುಖ್ಯ ವಿಷಯವೊಂದನ್ನು ಕುರಿತು ಚರ್ಚೆ ನಡೆಯಲಿದೆ. ಸಂದರ್ಭದ ಗಹನತೆಯನ್ನು ಬಲ್ಲ ಪಂಡಿತರು, ಪಾಮರರು ಹೀಗೆ ಎಲ್ಲ ಬಗೆಯವರೂ ಸಭೆಯಲ್ಲಿ ಉಪಸ್ಥಿತರಿದ್ದರು. ಚರ್ಚೆಯಲ್ಲಿ ಜ್ಞಾನದ ಪಾರಮ್ಯವನ್ನು ಪ್ರತಿಪಾದಿಸುವವರು ಶ್ರೀಶಂಕರರು.  ಶಾಂತಗಂಭೀರವಾದ ಮುಖ. ಸರ್ವರನ್ನು ಆಕರ್ಷಿಸುವ, ಸಹಜವಾಗಿಯೇ  ದಿವ್ಯತೆಯ ಅನುಭೂತಿಯನ್ನುಂಟುಮಾಡುವ ವ್ಯಕ್ತಿತ್ವ. ಹಾಗೆಯೇ ಬೌದ್ಧಿಕ ಪ್ರಾಮಾಣಿಕತೆಯುಳ್ಳ ಸದ್ಗೃಹಸ್ಥರಾದ ಮಂಡನಮಿಶ್ರರು ಕರ್ಮಕಾಂಡದ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಶ್ರೀಶಂಕರರ ವಾದವನ್ನು ಖಂಡಿಸುವವರು. ಅವರು ಪ್ರಕಾಂಡ ಪಂಡಿತರೂ ಕೂಡ.

ಇಂತಹವರ ಚರ್ಚೆಗೆ ತೀರ್ಪುಗಾರರಾಗಲು ಯಾರು ಸಮರ್ಥರು ಎನ್ನುವುದು ಬಹು ದೊಡ್ಡ ವಿಷಯವೇ. ಶ್ರೀಮಂಡನಮಿಶ್ರರ ಧರ್ಮಪತ್ನಿಯಾದ ಉಭಯಭಾರತೀಯೇ ನಿರ್ಣಾಯಕಳಾಗಲಿ ಎನ್ನುವ ಸಲಹೆ ಶ್ರೀ ಶಂಕರರ ಕಡೆಯಿಂದಲೇ ಬಂದಿತು, ಎಲ್ಲರೂ ಅದನ್ನು ಒಪ್ಪಿದರು. ಚರ್ಚೆ ಆರಂಭಗೊಂಡಿತು.ಒಬ್ಬರ ಮಂಡನೆ. ಇನ್ನೊಬ್ಬರ ಖಂಡನೆ, ಪುನಃ ಪ್ರತಿಮಂಡನೆ ಹೀಗೆ ವಾದವು ಸಾಗುತ್ತಿತ್ತು.  ಹೀಗೆ ಮಂಡನೆ-ಪ್ರತಿಮಂಡನೆಗಳು ಕೊನೆಯಿಲ್ಲದೆ ಸಾಗಿತಾದರೂ ಯಾವುದು ಶ್ರೇಷ್ಠ ಎನ್ನುವುದು ತೀರ್ಮಾನವಾಗಲೇ ಇಲ್ಲ.

ಭಾರತೀದೇವಿಯ ನಿರ್ಣಯದ ವಿಧಾನವು ವಿಚಿತ್ರವಾಗಿತ್ತು.ಆಕೆಯು ಇಬ್ಬರ ಕೊರಳಿಗೂ ಒಂದೊಂದು ಹೂವಿನ ಮಾಲೆಯನ್ನು ಹಾಕಿದಳು. ಯಾರ ಹೂಮಾಲೆ ಮೊದಲು ಬಾಡುವುದೋ ಅವರು ಸೋಲೊಪ್ಪಿಕೊಳ್ಳಬೇಕು ಎಂದು ತನ್ನ ತೀರ್ಮಾನವನ್ನು ಘೋಷಿಸಿದಳು. ನಿರ್ಣಯದ ಈ ಕ್ರಮ ಹೇಗೆ ಸರಿಯಾದೀತು?. ಇಂಥಹ ವಿಚಿತ್ರವುಂಟೆ?, ಪುಷ್ಪಮಾಲೆಯು ಬಾಡುವುದಕ್ಕೂ ವಾದಕ್ಕೂ ಏನು ಸಂಬಂಧ?.ಎಂಬ ಪ್ರಶ್ನೆಗಳು ಸಹಜ. ಆದರೂ ಈ ನಿರ್ಣಯವು ಬಹು ಜಾಣ್ಮೆಯಿಂದ ಕೂಡಿದೆ. ಶ್ರೀರಂಗಮಹಾಗುರುಗಳು ಇದರ ಗುಟ್ಟನ್ನು ಹೀಗೆ ಬಿಚ್ಚಿಟ್ಟಿದ್ದರು.  ಕೋಪ-ತಾಪಗಳು ಏರಿದಾಗ ಮೈ ಬಿಸಿಯಾಗುತ್ತದೆ. ಮಾಲೆಯನ್ನು ಧರಿಸಿದವನ ಮೈ ಬಿಸಿಯಾದರೆ ಪುಷ್ಪವು ಬಾಡುತ್ತದೆಯಷ್ಟೆ. ಆದರೆ ಶಾಂತವಾದ ನೆಲೆಯಲ್ಲಿ ನಿಂತು ಶಾಂತವಾಗಿರುವ ಮನಸ್ಸಿನಿಂದ ಕೂಡಿದ್ದರೆ ಮೈಯೂ ತಂಪಾಗಿಯೇ ಇರುತ್ತದೆ. ಕೇವಲ ಶಾಸ್ತ್ರಪಾಂಡಿತ್ಯವನ್ನಿಟ್ಟುಕೊಂಡು ಗ್ರಂಥಗಳ ಬಲದ ಮೇಲೆ ವಾದಿಸುತ್ತಿದ್ದ ಮಂಡನಮಿಶ್ರರಿಗೆ ನೆತ್ತಿಗೆ ಪಿತ್ತ ಏರಿತು. ಮೈ ಬಿಸಿಯಾಯಿತು. ಹೂಮಾಲೆ ಬಾಡಿತು. ಕಾರಣ ಅವರಿಗೆ ಶಾಂತವಾದ ನೆಲೆ ಸಿಕ್ಕಿರಲಿಲ್ಲ. ವಿಷಯದ ನೆಲೆ ಸಿಕ್ಕದೆ ಉದ್ರೇಕ, ಉದ್ವೇಗಗಳಿಂದ ವಾದ ಮಾಡಿದರೆ ಬಾಡದೇ ಏನಾದೀತು?. ಉದಾಹರಣೆಗೆ ಜ್ವರ ಬಂದವನಿಗೆ ಮಾಲೆ ಹಾಕಿದರೆ ಬಾಡದಿರುತ್ತದೆಯೇ?. 

ತತ್ವದ ನೆಲೆ ಸಿಕ್ಕದವನು ಚರ್ಚೆಯಲ್ಲಿ ವಿಷಯಕ್ಕೆ ದೂರನಾಗುತ್ತಾನೆ. ಆದರೆ ತತ್ವಭೂಮಿಕೆಗೆ ಹೋಗಿ ತತ್ವದರ್ಶಿಯಾದಾಗ ಪ್ರಸನ್ನನಾಗಿರುತ್ತಾನೆ. ಹಾಗೆ ತತ್ವದರ್ಶಿಯಾಗಿದ್ದ ಶಂಕರರು ಕೇವಲ ಸತ್ಯಪ್ರತಿಪಾದನೆಯ ಗುರಿಯಿದ್ದು ಶಾಂತಮಾನಸರಾಗಿದ್ದುದರಿಂದ ಧರಿಸಿದ್ದ ಮಾಲೆ ಬಾಡಲಿಲ್ಲ. ಕರ್ಮವು ವಿಜ್ಞಾನವರಿತು ಆಚರಿಸಿದಾಗ ಧರ್ಮದಲ್ಲಿ ನಿಲ್ಲಿಸಿ ತನ್ಮೂಲಕ ಜ್ಞಾನದಲ್ಲಿ ಅಂದರೆ ಪರಮಾತ್ಮನಲ್ಲಿ ನೆಲೆಗೊಳಿಸುತ್ತದೆ. “ಸರ್ವಂ ಕರ್ಮಾಖಿಲಂ ಪಾರ್ಥ ಜ್ಞಾನೇ ಪರಿಸಮಾಪ್ಯತೇ” ಅಂತಹ ವಿಶ್ವಮೂಲದಲ್ಲಿ ಬೆಳಗುತ್ತಿರುವ ಜ್ಞಾನಕ್ಕಾಗಿಯೇ ಕರ್ಮ ಎನ್ನುವುದೂ ಸ್ಥಾಪಿತವಾಯಿತು. ತಮ್ಮ ಮಾತಿನಂತೆ ಮಂಡನಮಿಶ್ರರು ಶಂಕರರ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಆದ್ದರಿಂದ  ವಾದನಿರ್ಣಯದ ವಿಧಾನ ಚಮತ್ಕಾರವಾಗಿ ಕಂಡರೂ ತತ್ವನಿರ್ಣಯದಲ್ಲಿ ನಿಲ್ಲಿಸಿತು ಎಂಬುದು ಗಮನಾರ್ಹ.

ಸೂಚನೆ:  20/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.   

To know more about Astanga Yoga Vijnana Mandiram (AYVM) please visit our Official Website and Facebook page:

Seemanta – an Elevating Rit

Article in Kannada by:  Tharodi Suresh
English Rendering by: Smt Padmini Srinivasan


Seemanta is a ritual performed subsequent to Pumsavanam. It is a Samskara performed exclusively for a woman pregnant for the first time. It is executed once and not repeated over successive pregnancies. ‘Seemantonnayana’ is its full form. In hair dressing, a central line over the head
demarcates and bifurcates the hair. The limit or boundary of this hair-parting is called Seemanta. An important aspect of this procedure is extending and combing the Seemanta (central bifurcating line of hair) upwards which is called Unnayana.

It is desired that the child be intelligent, honourable, wise and possess a radiant personality. Obviously when a child possesses these special qualities, it needs protection from evil forces which try to steal them. Sriranga Mahaguru used to say - “In addition to a beautiful body, the child should also possess complete Jnaana (knowledge of Supreme). Atmachaitanya (power of the Atman), Atmaguna (good qualities as desired by the Atman) and Dehapushti (a healthy body) will all follow”. We should not forget that rituals as per Maharshis Vijnaana (their vision of the expansion of the root Jnaana) encompass the three domains viz. Atmadharma (principles of the Atman), Manodharma (mental makeup) and Dehadharma (nature of the body) and ensures that they all blossom together. Finally as per the saying - “Sarvam Karmaakhilam Paartha Jnaane Parisamaapyate” all actions should integrate with the Supreme Eshwara. All ordained Mantras (hymns), Tantras (rituals) and Dravyas (materials) make the ritual complete in all aspects. On identification and confirmation of pregnancy, Seemanta is conducted in the third or fourth month, during Shuklapaksha (bright fortnight of the
moon), on a Purusha nakshatra day (as per Stree-Purusha classification of stars, a star with Purusha dharma favourable for Unnayana). It should be performed during daytime. Bull’s skin, bunch of fruits from a cluster fig tree (Atthi), porcupine quills with three white dots defining three divisions (Shalali)
should all be kept ready. Porcupine quills should never be kept inside the house.

It is believed to create strife. In a like manner three Darbha grasses should be plaited together. Three such knitted strands should be kept ready. On the Seemantam day, after holy bath and adorning of new clothes sanctification (Punyaaha) and recitation of the purpose (Sankalpa) are done. Kankanabandha (tying yellow thread over the wrist) follows next. The family’s personally preferred deity (Ishtadevata) is worshipped and a Homa (oblation made into fire) is performed with the chant of eight specific Mantras. These propitiate Dhaata, Raaka, Naejamesha, Indra, Agni and Prajaapati. It is very essential to invoke these deities.

Husband and wife sit facing east and west respectively. Keeping a twig with bunch of figs, Shalali and knitted Darbha strands together, the husband combs the hair, beginning with the top of the forehead right up to the end of the line parting. Unnayana is done thrice. This Unnayana points upwards and signifies uplifting.

We notice combinations of three in this ritual. This Karma extends over all three worlds. It should culminate in the root of all creation, viz. Pranava. Hence the Mantra ”Om Bhoohu Bhuvaha Suvaha Om” is chanted. Beginning with Pranava, three Lokas which are its expansion are the middle and the
culminating point is Pranava again. This does not stop in the material world or the domain of the sensory organs.

The combination of three items is such that each removes the blemishes (Doshas) of the other, thus ensuring total accrual of desired fruits.

Note: The Kannada version of this article can be viewed at AYVM blogs 


To know more about Astanga Yoga Vijnana Mandiram please visit our Official Website and Facebook page:

Friday, 14 June 2019

काम :- त्याज्य है या पूज्य ? (Kaam :- thyajya he ya poojy?)

लेखक – डामोहन राघवन
हिन्दी अनुवाद – श्रीमती एम.हेच. इन्दिरा
‘काम’ कहने पर ही मुस्कुराते हुए बात बदलनेवाले कुछ लोग होते हैं | कतिपय मानते हैं कि ’ शालााओं में विद्यार्थियो को जानकारी देनेवाले विषय मे से एक यह भी है’ |  काम को नीचभाव  से देखनेवाले और कुछ लोग होते हैं | अधिकतर  लोग इसे  सिनेमा के ‘रोमान्स’ का पर्याय समझते है| 
       
 ‘काम’ से ही समाजका बचाव या नाश दोनों साध्य है| 

काम सृश्टिसहज एक वेग है | इस वेग के न होने से मनुकुल के इस भूतल पर रहना ही सवाल बनकर रह जाता | जन्म से ही यह वेग हम में गुप्त रूप से छिपकर रहके, तारुण्य में स्त्री-पुरुषों के परस्पर आकर्षण के रूप मे इस की  अभिव्यक्ति  चिरपरिचित  ही है | यह आकर्षण यदि समाज के नियमों और जीवन मौल्यौ के अनुसार हो तो यह उचित कहलाता है | यदि  विपरीत हो तो विपत्ति बन पडती है | यह सभी देशों के - सभी जनाङ्ग्  -पशु -पक्षियों के समाज का सामान्य नियम है  |  लेकिन हर समाज मे औचित्य या निषिद्ध कृत्यों की परिभाषा मात्र अलग अलग ही होती  है  | 

प्राचीन  भारत के महर्षी काम की शक्ती और सच्चे स्वरुप से भलीभांति  परिचित थे | काम का मूल रूप है ‘इन्द्रियों की इच्छाओ को तृप्त करने का तीव्र चापल्य ‘| परिस्थिति के अनुसार चपलता बहु रूपों को धरता है | उन्हे यह भी  ज्ञात था  कि अनियन्त्रित चपलता सारे रेखाओं को लाङ्घ् कर भागने वाली अश्व कि भांति है | इसी लिए घोडे को लगाम देने की व्यवस्था को भी साथ ही साथ जोडे | वह कैसे ? ‘कार ‘वेग से चलने के लिए ‘अक्सलरेटर ‘ जैसे रहता है वैसे ही वेग को रोकने के लिए ‘ब्रेक ‘ भी रहता है | ‘ब्रेक ‘ के बिना ‘आक्सीडेंट ‘ निश्चित है | जीवन की गाडी में,काम के वेग की नियन्त्रण के लिए ‘ब्रेक ‘ को जोडकर उसके उपयोग की शिक्षा भी देते थे | वह ‘ब्रेक ‘ ही  ‘इन्द्रियजय ‘ कहलाता है  | अत्यन्त प्रिय खाद्य यदि आँखों के सामने हो पर सेहत के लिये उचित न हो तो चाहते हुए भी उसे नकारने की दृढता है वह 'इन्द्रियजय' | मनोहर पर अनुचित दृश्यों के आँखों के सामने रहने पर भी दृष्टि हटाने की धृति है वह | ऐसे इन्द्रिय जय के बहुत उदाहरण है | मगर यदि हमेशा  ही सब कुछ नकारते ही रहें तो यह बात ऐसे हो गयी जैसे ‘गाडी पर ब्रेक लगाना आता है; पर गाडी चला नहीं सकते’| भीड भरी वीथियों मे धीरे चलाना भी जानो और हाईवे पर गाडी 120 कि.मी. की तेजी से चलाओ तभी तो 'वाह -वाह' होगी | ठीक उसी प्रकार ही इन्द्रियों के चाहते हुए भी अनुचित को मना करने का सामर्थ्य, और अनुमति हो तो भोग करने कि कुशलता रहनी चाहिये | एसे रहने पर ही जीवन में एक ‘बालेन्स ‘ रहता है | इसी अवस्था को हमारे ऋषियों ने ‘धर्म‘ शब्द से संबोधित किया | 

अर्थ का अर्जन और काम के सेवन के लिए धर्म का ‘लैसेन्स ‘चाहिए :-

भारतीय जीवनव्यवस्था में कामों का भोग और अर्थ का सम्पादन दोनों के लिए अनुमति या लैसेन्स देने के पहले दीर्घ समय तक धर्म की   शिक्षा देते थे | वही ब्रम्हचर्य - गुरुकुलवास कहलाता है| वहाँ आज की तरह केवल पुस्तकों के पाठ ही नहीं बल्कि तपस्या से मस्तक को प्रकाशित करने का पाठ भी था | धर्म को आत्मसात करने का अभ्यास था | यह शिक्षा को जो पूर्ण करेगा वही ‘स्नातक‘ पद प्राप्त करने योग्य रहता था | ऐसे ब्रह्मचर्य और तपस्या से पूत जो धर्मिष्ठ हैं वे कामों के भोग से मर्यादा का उललंघन नहीं करते | ऐसे कर्मों मे उनकी रुचि बनती ही नहि | इसी को श्रीमद् भगवद्गीता में श्री कृष्ण ने कहा है कि ‘’धर्माविरुद्धो  भूतेषु कामोsस्मि भरतर्षभ’’| श्री कृष्ण का कहना है कि धर्म के अनुसार होने पर मैं ही स्वतः काम  हूँ | इस तरह धर्मार्जन के बाद यदि अर्थ -कामों का भोग करें तो ऐसा व्यक्ति गृहस्थ -जीवन में उदारभाव से लोक -कल्याण के लिए अर्थ और कामों का सेवन करता है | न कि अपने स्वार्थ या इन्द्रियों की चपलता के लिए | ऐसा धर्मात्मा समय के बीतते तारुण्य के उपरान्त  वृद्दावस्था के आने पर विचलित न होते हुए वैराग्य से भोग को त्यागकर तपस्या का आश्रय लेता है | पुराने कपडों की भाँति निरातंक होकर शरीर का त्याग करता है | इसका वर्णन करते हुए महाकवि कालिदास कहते  है 

  ‘’शैशवेभ्यस्थ विद्यानां यौव्वने विषयैषिणाम् वार्धक्ये मुनिवृत्तीनां योगेनान्ते तनुत्यजां "

 यह विषय आज भी प्रसक्त है क्या ?

हमारे मन मे यः सवाल  उठ सक्ता है कि 'पुराने जमाने की बात आज हम क्यों दोहरा रहे हैं' ? पर काम के वेग से भरे इस शरीर की  गाड़ी को हम आज भी चलाते आ रहे है | सुखदायक और सुभद्र जीवन की गति को चाहनेवालों  के लिये यह विषय आज भी प्रसक्त है | चाहे हमारे सडकों मे हो या समाज मे; आज भी ‘अशिक्षित चालक‘ ही अपघात का कारण बने घूम रहें हैं | यह बात भूत और वर्तमान काल दोनों मे  सच ही कहलायेगा | ‘धर्म ‘ का लैसेन्स रहे तो काम पूज्य है | नहीं तो अपघात का आह्वान मानकर सर्वथा त्याज्य ही है |   

Note: The Kannada version of this article can be viewed at AYVM blogs 

To know more about Astanga Yoga Vijnana Mandiram (AYVM) please visit our Official Website and Facebook page:

Tuesday, 11 June 2019

ಮೇಲ್ಬೇರು, ಕೆಳಕೊಂಬೆ-ಈ ವೃಕ್ಷವಾದರೂ ಯಾವುದು? (Melberu, kelakombe. I vrukshavadaru yavudu?)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಸಾಮಾನ್ಯವಾಗಿ  ಲೋಕದಲ್ಲಿ ನಾವು ನೋಡುವ ವೃಕ್ಷಗಳ ಬೇರು ಕೆಳಗೆ ಭೂಮಿಯ ಆಳದಲ್ಲಿರುತ್ತವೆ. ಕೊಂಬೆಗಳು ಮೇಲೆಲ್ಲಾ ಹರಡಿರುತ್ತವೆ. ಆದರೆ ಶ್ರೀ ಕೃಷ್ಣನು ಗೀತೆಯಲ್ಲಿ-
“ಊರ್ಧ್ವಮೂಲಮಧಃಶ್ಶಾಖಾ ಅಶ್ವತ್ಥಮ್ ಪ್ರಾಹುರವ್ಯಯಂ| ಛಂದಾಂಸಿ ಯಸ್ಯ ಪರ್ಣಾನಿ, ಯಸ್ತಂ ವೇದ ಸ ವೇದವಿತ್||- ಮೇಲೆ ಬೇರು ಕೆಳಗೆ ಕೊಂಬೆಗಳನ್ನುಳ್ಳ ಅಶ್ವತ್ಥವೃಕ್ಷವಿದೆ. ಅದನ್ನು ಆಮೂಲಾಗ್ರವಾಗಿ ಯಾರು ತಿಳಿಯುತ್ತಾರೋ ಅವನನ್ನೇ “ವೇದವಿತ್”- ವೇದವನ್ನು ತಿಳಿದವನು. ಅಥವಾ ಸತ್ಯವನ್ನು ತಿಳಿದವನು ಎನ್ನಲಾಗುತ್ತದೆ. ಎಂದಿದ್ದಾನೆ.

ಒಮ್ಮೆ ಶ್ರೀರಂಗ ಮಹಾಗುರುಗಳು ಅವರ ಶಿಷ್ಯರ ಸಮ್ಮುಖದಲ್ಲಿ ಇಂತಹ ಒಂದು ವೃಕ್ಷವನ್ನು ನೀವೆಲ್ಲಾದರೂ ನೋಡಿದ್ದೀರಾ? ಎಂದು ಕೇಳಿದರು. ಅಲ್ಲಿದ್ದವರೆಲ್ಲ ಎಷ್ಟು ಪ್ರಯತ್ನಿಸಿದರೂ ನಿಸರ್ಗದಲ್ಲಿ ಅಂತಹ ಒಂದು ವೃಕ್ಷವನ್ನು ನೋಡಿದ ನೆನಪಾಗಲಿಲ್ಲ. ಮುಂದುವರೆದು ಅವರು, ಇಲ್ಲೇ ಇವೆಯಪ್ಪಾ ಎಂದರು. ಆಗಲೂ ಗೊತ್ತಾಗದಿದ್ದಾಗ ಅವರು ಹೇಳಿದರು- ಆ ವೃಕ್ಷವನ್ನು ಹೊತ್ತುಕೊಂಡು ನಾವೆಲ್ಲರೂ ಓಡಾಡುತ್ತಿದ್ದೇವಪ್ಪಾ , ನಮ್ಮ ಶರೀರವೇ ಅಂತಹ ವೃಕ್ಷವಾಗಿದೆ ಎಂದು ವಿವರಿಸಿದರು.

ನಮ್ಮ ಮಸ್ತಿಷ್ಕ ಅಂದರೆ –ತಲೆ, ಮೇಲಿದೆ. ಅದುವೇ ಈ ಜೀವನವೃಕ್ಷದ ಬೇರು. ಅದು ಹೇಳಿದಂತೆ ಶಾಖೆಗಳನ್ತಿರುವ ಕೈ ಕಾಲುಗಳು ಕಾರ್ಯ ನಿರ್ವಹಿಸುತ್ತವೆ. ನಾವು ಯಾವ ಕ್ರಿಯೆಯನ್ನು ಮಾಡಬೇಕಾದರೂ ತಲೆ ಹೇಳಿದಂತೆಯೇ ಮಾಡಬೇಕು. ತಲೆ ಇಲ್ಲದಿದ್ದರೆ ಕೈ ಕಾಲುಗಳು ನಿಶ್ಚೇಷ್ಟಿತ. ನಮ್ಮ ನಮ್ಮ ಮಟ್ಟಿಗೆ ನಮ್ಮ ತಲೆಯೇ ನಮಗೆ ದೇವರು. ಅದರ ನಿರ್ದೇಶನದಲ್ಲೇ ನಾವು ಬದುಕುವುದು. ಎಂದೇ ತಲೆಯನ್ನು ಚೆನ್ನಾಗಿಟ್ಟುಕೊಂಡರೆ ಜೀವನ ಚೆನ್ನಾಗುತ್ತದೆ. ಕೆಲವು ವೇಳೆ ಹೊರಗೆ ನಾವು ನೋಡುವ ಕೆಲವು ಮರಗಳಲ್ಲಿ ಮೂಲ ಮರ ಒಂದಾದರೆ ಅದರ ಕೊಂಬೆಯ ಮೇಲೆ ಇನ್ನೊಂದು ಯಾವುದೋ ಬೀಜವು  ಮೂಲ ಮರದ ಶಕ್ತಿಯನ್ನು ತೆಗೆದುಕೊಂಡು ತಾನೇ ಬೆಳೆಯುತ್ತಿರುತ್ತದೆ. ಕೆಳಗೆ ಮಾವಿನ ಬೇರು, ಕಾಂಡ ಎಲ್ಲವೂ. ಮೇಲೆ ಬೇವು ಬೆಳೆಯುತ್ತಿದೆ.  ಇದನ್ನು ಬದನಿಕೆ ಎನ್ನುತ್ತಾರೆ. ಇದು ಸೃಷ್ಟಿಯ ಆಶಯಕ್ಕೆ ವಿರುದ್ಧವಾದ ಬೆಳವಣಿಗೆ. ವ್ಯವಸಾಯಜ್ಞ ಮರದ ಬೆಳವಣಿಗೆಯನ್ನು ಆಗಾಗ ಗಮನಿಸುತ್ತಾ ಅದಕ್ಕೆ ಸರಿಯಾದ ಕೃಷಿ ಮಾಡುತ್ತಾ ಇದ್ದರೆ ಈ ಬಗೆಯ ಬದನಿಕೆಯನ್ನು ಬೆಳೆಯದಂತೆ ಮರವನ್ನು ರಕ್ಷಿಸಬಹುದು. ವ್ಯವಸಾಯದ ಬಗ್ಗೆ ಪರಿಚಯವಿಲ್ಲದೇ ಇದ್ದರೆ ಬದನಿಕೆಯ ಫಲವನ್ನೇ ಮಾವಿನ ಹಣ್ಣೆಂದು ಭ್ರಮಿಸುವಂತಾಗುತ್ತದೆ. ಹಾಗೆಯೇ ನಮ್ಮ ಜೀವನವೃಕ್ಷಗಳಲ್ಲಿಯೂ  ಸಹಜವಾಗಿ ಭಗವಂತ ಇಟ್ಟ ನಮ್ಮ ತಲೆಯ ರೂಪದ ಬೀಜ, ಬೇರು ಒಂದಾದರೆ ಮುಂದೆ ಸರಿಯಾದ ಕೃಷಿ ಮಾಡದೇ ಬೆಳೆದ ಬದನಿಕೆಯಂತಹ ವೃಕ್ಷವೇ ಬೇರೆಯಾಗಿದೆ. ನಮ್ಮ ಸಹಜವಾದ ಆನಂದ ಶಾಂತಿ ಸಮೃದ್ಧಿಗಳ ಪರಿಚಯವೇ ನಷ್ಟವಾಗಿ ಬದನಿಕೆಯ ಬದುಕಾಗಿಬಿಟ್ಟಿದೆ ನಮ್ಮದು. ಮಾತ್ರವಲ್ಲ ಈ ಬದನಿಕೆಯನ್ನೇ ಸಹಜ ಎಂದು ತಿಳಿಯುವಷ್ಟು ಭ್ರಮೆಗೆ ಒಳಗಾಗಿದ್ದೇವೆ. ಬೇರಿಗೆ ಒಳ್ಳೆಯ ಸಂಸ್ಕಾರಗಳ ಕೃಷಿ ನಡೆದರೆ ಈ ಜೀವನವೃಕ್ಷದಲ್ಲೂ ಪರಮ ಫಲವನ್ನು ಪಡೆಯಬಹುದು ಎಂಬುದು ಈ ದೇಶದ ಮಹರ್ಷಿಗಳ ಮಾತು. 

ಇಲ್ಲಿ ಬೆಳೆದುಬಂದ ಸಂಸ್ಕೃತಿ,ನಾಗರೀಕತೆಗಳೆಲ್ಲವೂ ಮಾನವನ ಮೇಲ್ಬೇರಾದ  ಮಸ್ತಿಷ್ಕವನ್ನು  ಸಹಜವಾಗಿ ಬೆಳೆಸುವ, ಅದಕ್ಕಾಗಿ ಮಾಡುವ ಕೃಷಿಯಾಗಿಯೇ ಬೆಳೆದುಬಂದಿವೆ ಎಂಬುದನ್ನು ಮರೆಯದಿರೋಣ. ಜೀವನ ವ್ಯವಸಾಯವನ್ನು ಚೆನ್ನಾಗಿ ಬಲ್ಲ ಭಾರತೀಯ ಮಹರ್ಷಿಗಳು ಇಲ್ಲಿನ ಸಂಸ್ಕಾರಗಳು,ಪೂಜೆ ಪುರಸ್ಕಾರಗಳು,ಹೋಮ ಹವನಗಳು,ತೀರ್ಥಕ್ಷೇತ್ರಗಳು,ಗುಡಿ-ಗೋಪುರಗಳು ಎಲ್ಲವನ್ನೂ ನಮ್ಮ ಜೀವನ ವೃಕ್ಷದ ಬೇರಿಗೆ ನೀರೆರೆಯುವ, ಅದನ್ನು ಐಹಿಕ ಪಾರಮಾರ್ಥಿಕ ಎರಡನ್ನೂ ಆನಂದವಾಗಿ ಅನುಭವಿಸುವ ಮಹಾ ಜೀವನ ವೃಕ್ಷವಾಗಿ ಬೆಳೆಸುವ ಸಾಧನಗಳನ್ನಾಗಿಯೇ ತಂದಿದ್ದಾರೆ. ಅವರ ಜೀವಲೋಕದ ಮೇಲಿನ ಅಪಾರವಾದ ಕರುಣೆ ಅವಿಸ್ಮರಣೀಯ.

ವೇದಗಳು ನಮ್ಮ ಶರೀರ-ಪಿಂಡಾಂಡ, ಮತ್ತು ಹೊರಗಿನ ಬ್ರಹ್ಮಾಂಡ ಇವುಗಳ ಸ್ವರೂಪವನ್ನು ಅಂತರಂಗದ ಅನುಭವದಿಂದ ತಿಳಿಸುವುವಾಗಿದೆ. ಅಂತಹ ಸ್ವರೂಪವನ್ನು ಕಾಪಿಟ್ಟುಕೊಂಡಾಗಲೇ  ನಮ್ಮ ಒಳ ಹೊರ ಜೀವನಗಳು ಸಮೃದ್ಧ. ಅದುವೇ ಈ ಜೀವನ ವೃಕ್ಷದ ಪರಮಫಲ.ಇಂತಹ ಜೀವನವೃಕ್ಷವಾದ  ನಮ್ಮೀ ಶರೀರವನ್ನು ಸಮಗ್ರವಾಗಿ ಅರ್ಥ ಮಾಡಿಕೊಂಡವನೇ ನಿಜವಾದ ವೇದವಿತ್ ಎಂಬ ಭಗವಂತನ ಮಾತು ಎಷ್ಟು ಉದ್ಬೋಧಕವಾಗಿದೆಯಲ್ಲವೇ?  


ಸೂಚನೆ:  11/06/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.   

To know more about Astanga Yoga Vijnana Mandiram (AYVM) please visit our Official Website and Facebook page:

ವಿವಾಹ-ಸಂಸ್ಕಾರದ ಪರಿಚಯ -1 (Vivaha samskarada parichaya -1)

ಲೇಖಕರು: ತಾರೋಡಿ ಸುರೇಶಷೋಡಶ ಸಂಸ್ಕಾರಗಳಲ್ಲಿ ವಿವಾಹ ಸಂಸ್ಕಾರವು ಎಲ್ಲರಿಗೂ ಸುಪರಿಚಿತ. ಅತ್ಯಂತ ವೈಭವದಿಂದ ನಡೆಯುತ್ತದೆ ಕೂಡ. ಭಾರತದಲ್ಲಿ ಮಾತ್ರವೇ ಇದನ್ನು ಸಂಸ್ಕಾರವೆಂದು ಕರೆಯುವುದು. ಮಹರ್ಷಿಗಳು ಭಾರತದಲ್ಲಿ ವಿವಾಹಪದ್ಧತಿಯನ್ನು ವಿಶೇಷವಾದ ರೀತಿಯಲ್ಲಿ ಅಳವಡಿಸಿಕೊಟ್ಟಿದ್ದಾರೆ. ತನ್ನ ಮೌಲಿಕವಾದ ಸತ್ವದಿಂದ ಇಂದು ಜಾರಿದ್ದರೂ ಅದರ ಅನೇಕ ಅವಶೇಷಗಳನ್ನು ನಮ್ಮ ದೇಶದ ವಿವಾಹದ ಆಚರಣೆಯಲ್ಲಿ ಇಂದಿಗೂ ನೋಡಬಹುದು. ಕೊಳೆಯನ್ನು ತೊಳೆದು ಹೊಳೆಯುವಂತೆ ಮಾಡಿ ಮೌಲಿಕ ರೂಪಕ್ಕೆ ತರುವುದೇ ಸಂಸ್ಕಾರ. ದೇಹವನ್ನು ಸ್ನಾನದಿಂದ ಶುದ್ಧವಾಗಿಟ್ಟುಕೊಳ್ಳುತ್ತೇವೆ. ಹಾಗೆಯೇ ಅಂತಕರಣಗಳಾದ ಮನೋಬುದ್ಧಿಗಳನ್ನು ಶುದ್ಧಗೊಳಿಸುವ ಕರ್ಮಗಳನ್ನು ಸಂಸ್ಕಾರವೆಂದು ಕರೆಯಲಾಗಿದೆ. ಅಂತಹ ಸಂಸ್ಕಾರವನ್ನು ಕೊಟ್ಟು ಶುದ್ಧಿಯನ್ನು ತಂದುಕೊಂಡಾಗ ಅವು ಪರಮಾತ್ಮದರ್ಶನವನ್ನು ಮಾಡಿಸುತ್ತವೆ. ಈ ವಿವಾಹವೂ ಅಂತಹ ಒಂದು ಸಂಸ್ಕಾರವಾಗಿದೆ.

ವಿವಾಹವನ್ನು ಎಂಟು ಬಗೆಯಲ್ಲಿ ವರ್ಗೀಕರಿಸಿದ್ದಾರೆ. ಭಗವಂತನ ಆಶಯವನ್ನು ಅರಿತು ಅದಕ್ಕನುಗುಣವಾಗಿ ನಡೆಸುವ ವಿವಾಹಕ್ಕೆ ಬ್ರಾಹ್ಮವಿವಾಹವೆಂದು ಹೆಸರು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಬ್ರಾಹ್ಮವಿವಾಹವೇ ನಡೆಯುವಂತಹದ್ದು. ದೈವ, ಪ್ರಾಜಾಪತ್ಯಾ ಆರ್ಷ,ಆಸುರ, ಗಾಂಧರ್ವ,ರಾಕ್ಷಸ ಮತ್ತು ಪೈಶಾಚ ಎಂದು ಅನ್ಯ ಏಳು ವಿವಾಹಗಳೂ ಉಂಟು. ಉದ್ವಾಹ, ಪರಿಣಯ, ಉಪಯಮ, ಪಾಣಿಗ್ರಹಣ ಇತ್ಯಾದಿಗಳು ವಿವಾಹಕ್ಕೆ ನಮ್ಮ ದೇಶದಲ್ಲಿ ಬಳಸುವ ಅನ್ಯ ಮಂಗಳ ಹೆಸರುಗಳು. ಅನ್ಯದೇಶಗಳಲ್ಲಿ ಕೇವಲ ಇಂದ್ರಿಯಸುಖಕ್ಕಾಗಿ ವಿವಾಹವೆಂಬ ವ್ಯವಹಾರವಿದೆ. ಆದರೆ ಮಹರ್ಷಿಗಳು ತಮ್ಮ ಭಾವವನ್ನು ವ್ಯಕ್ತಪಡಿಸಲು ಬಹಳ ಯೋಗ್ಯವಾದ ಪದಗಳನ್ನು ಬಳಸಿದ್ದಾರೆ.ಅವು ಇಂದ್ರಿಯಸುಖದ ಜೊತೆಯಲ್ಲಿ ಬದಕನ್ನು ಪರಮಾರ್ಥದಲ್ಲಿ ನಿಲ್ಲಿಸುವ ಅತೀಂದ್ರಿಯ ಸುಖವೆರಡನ್ನೂ ಒಳಗೊಳ್ಳುತ್ತದೆ. ಪರಬ್ರಹ್ಮದ ಸಂಕಲ್ಪಕ್ಕೆ ಅನುಗುಣವಾಗಿ ನಡೆಯುವಂತಹದ್ದಾದ್ದರಿಂದ ಬ್ರಾಹ್ಮವಿವಾಹ ಎನ್ನಿಸಿದೆ. ಎಂಟು ವಿವಾಹಗಳಲ್ಲಿ ಇದು ಅತ್ಯಂತ ಶ್ರೇಷ್ಠವಾದುದು. ಇದು ಬ್ರಹ್ಮಪ್ರಾಪ್ತಿಯನ್ನೇ ಜೀವನದ ಮಹಾಧ್ಯೇಯವಾಗಿ ಹೊಂದಿದೆ. ಉಳಿದ ವಿವಾಹಗಳು ಎಲ್ಲಕ್ಕೂ ಮೂಲನಾಗಿರುವ ಬ್ರಹ್ಮವನ್ನು ಬಿಟ್ಟು ಮಧ್ಯದಲ್ಲಿ ಪ್ರಾರಂಭವಾಗುತ್ತವೆ.

ಒಂದು ಗಿಡವನ್ನು ಬೆಳೆಸಲು ಕೆಲವರು ಎಲೆಗಳಿಗೆ ನೀರೆರದರೆ ಇನ್ನು ಕೆಲವರು ಕಾಂಡಕ್ಕೆ ಹಾಕುತ್ತಾರೆ.ಆದರೆ ಬೇರಿಗೆ ನೀರು ಹಾಕಿದಾಗ ತಾನೇ ವೃಕ್ಷವು ಬೆಳೆಯುತ್ತದೆ. ಹಾಗೆ ಜೀವನದ ಮೂಲದಲ್ಲಿ ಬೆಳಗತ್ತಿರುವ ಪರಬ್ರಹ್ಮರೂಪವಾದ ಬೇರನ್ನು ಸೇರುವಂತೆ ನಡೆಸುವ ವಿಧಾನವನ್ನೊಳಗೊಂಡಿದ್ದರಿಂದ ಬ್ರಾಹ್ಮವಿವಾಹವು ಶ್ರೇಷ್ಠವಾದದ್ದು. ಜೊತೆಗೆ ಧರ್ಮಾರ್ಥಕಾಮಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನೂ ಇದು ಕೂಡಿಸಿಕೊಡುತ್ತದೆ.
ವಿಶೇಷವಾದ ಮನೋಧರ್ಮದಿಂದ ಒಯ್ಯುವಿಕೆ, ವಿಶೇಷವಾದ ಸಂಕಲ್ಪದಿಂದ ಒಯ್ಯುವಿಕೆಗೆ ವಿವಾಹವೆಂಬ ಹೆಸರು. “ನಾವು ಒಟ್ಟಿಗೆ ಸೇರೋಣ, ಸತ್ಸಂಕಲ್ಪ ಮಾಡೋಣ, ಒಳ್ಳೆಯ ಪ್ರೇಮದಿಂದ ಕೂಡಿರೋಣ, ಬೆಳಗೋಣ, ಸುಮನಸ್ಕರಾಗೋಣ ಎಂಬುದು ವಧೂವರರ ನಡುವೆ ಆಗುವ ಒಪ್ಪಂದ. ಅದಕ್ಕೋಸ್ಕರ ವರನು ವಧುವನ್ನು ತನ್ನ ಮನೆಗೆ ಒಯ್ಯುತ್ತಾನೆ. ಭಗವಂತನ ಆಶಯವನ್ನು ವಿಸ್ತಾರಗೊಳಿಸುತ್ತಾ ಪುನಃ ಭಗವಂತನನ್ನೇ ಸೇರುವ ಸಂಕಲ್ಪದಿಂದ ಭಗವಂತನನ್ನು ಪ್ರತಿನಿಧಿಸುವ ಅಗ್ನಿಯನ್ನು ಪ್ರದಕ್ಷಿಣೆ ಬರುವುದು ಪರಿಣಯ ಎನ್ನಿಸಿಕೊಳ್ಳುತ್ತದೆ. ಪಾಣಿಗ್ರಹಣವೆಂದರೆ ಕೈಯಲ್ಲಿ ಹಿಡಿದುಕೊಳ್ಳುವಿಕೆ. ಮೇಲ್ಮುಖವಾಗಿ ಮಾಡಿಕೊಂಡಿರುವ ವಧುವಿನ ಹಸ್ತವನ್ನು ತನ್ನ ಹಸ್ತದಿಂದ, ಇಬ್ಬರ ಅಂಗುಷ್ಟವೂ ಮೇಲೆ ಬರುವಂತೆ ಹಿಡಿದುಕೊಳ್ಳುವುದು. “ಊರ್ಧ್ವಂ ಗಚ್ಛಂತಿ ಸತ್ವಸ್ಥಾಃ”-ಎಂಬಂತೆ ನಮ್ಮ ಜೀವನವೆಲ್ಲ ಊರ್ಧ್ವಮುಖವಾಗಿರಲಿ ಎಂಬ ಸಂಕಲ್ಪವಿರುತ್ತದೆ. ಪಾಣಿಗ್ರಹಣ ಪ್ರಕ್ರಿಯೆಯಲ್ಲಿ ಪಂಚಭೂತಗಳನ್ನು ಪ್ರತಿನಿಧಿಸುವ ಐದು ಬೆರಳುಗಳ ಸೇರುವೆಯುಂಟಾಗಿ ಜೀವನದಲ್ಲಿ ಒಂದು ಐಕ್ಯವನ್ನು ಸಾಧಿಸಿಕೊಳ್ಳುವ ಭಾವವಿರುತ್ತದೆ. (ಮುಂದುವರೆಯುತ್ತದೆ)   


ಸೂಚನೆ: 11/06/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

To know more about Astanga Yoga Vijnana Mandiram please visit our Official Website and Facebook page: