Friday, 5 October 2018

ಯಾವುದು ಸಭ್ಯತೆ ? (Yavudannu bayasona?)

ಲೇಖಕರು: ನಾಗರಾಜ ಗುಂಡಪ್ಪ

ಜಾಗತೀಕರಣದ ಪ್ರಭಾವವು ವ್ಯಾಪಕವಾಗಿದ್ದು ಭಾರತೀಯ ಸಂಸ್ಕೃತಿಗೆ ಬುನಾದಿಯಾಗಿರುವ ಅನೇಕ ವಿಚಾರಗಳು ಮಥನಗೊಳ್ಳುತ್ತಿವೆಹಾಗೆಮಥನಕ್ಕೊಳಗಾಗುತ್ತಿರುವ ಚಿಂತನೆಗಳಲ್ಲಿ ಸಭ್ಯತೆ ಬಗೆಗಿನ ಚಿಂತನೆಯೂ ಸಹ ಒಂದುಉದಾಹರಣೆಗೆಉಡುಪುಗಳ ವಿಷಯವು ಟಿ.ವಿ.ಗಳಲ್ಲಿ ಚರ್ಚೆಗೆ ಬಂದಾಗ ಆಧುನಿಕವಿಚಾರವಾದಿಗಳು ಯಾವ ರೀತಿಯ ಉಡುಪು ಸಭ್ಯ ಎಂದು ಹೇಗೆ ನಿಶ್ಚಯಿಸುತ್ತೀರಿಸಭ್ಯತೆಗೆ ಮಾನದಂಡವೇನುನೀವು ಇದು ಸಭ್ಯ ಅಥವಾ ಸಭ್ಯ ಎಂದು ಹೇಳಬೇಕಾದರೆಅದಕ್ಕೆ ಏನಾದರೂ ಆಧಾರವಿದೆಯೇಆಧಾರವಿಲ್ಲದೇ ನಿಮ್ಮ ಮೂಗಿನ ನೇರಕ್ಕೆ ನೀವು ಮಾತನಾಡುವುದಾದರೆಅದನ್ನು ಸರಿ ಎಂದು ನಾವು ಹೇಗೆ ಒಪ್ಪುವುದುಎನ್ನುವಂತಹಪ್ರಶ್ನೆಗಳನ್ನು ಮುಂದಿಡುತ್ತಾರೆ.

ಸಭ್ಯತೆಯ ನಿಶ್ಚಯಕ್ಕೆ ಆಧಾರ ಏನು ಎನ್ನುವ ಬಗ್ಗೆ ಸ್ಪಷ್ಟವಾದ ಉತ್ತರ ಬರದಿದ್ದರೆಸಭ್ಯತೆ-ಅಸಭ್ಯತೆಗಳ ನಿರ್ಧಾ ವೈಯಕ್ತಿಕ ಮತ್ತು ಯಾರೂ ಸಭ್ಯತೆಯನ್ನುಸಾರ್ವತ್ರಿಕವಾಗಿ ಹೇರಬಾರದು ಎಂದು ಹೇಳಿ ಸಂಸ್ಕೃತಿಯ ಬಗ್ಗೆ ಇರುವ ಭಾವನೆಗಳನ್ನು ಸಡಿಲಗೊಳಿಸಿ ಸ್ವಚ್ಚಂದ ಪ್ರವೃತ್ತಿಯನ್ನು ಪ್ರಬಲಗೊಳಿಸುತ್ತಾರೆ.  ಟಿ.ವಿಚರ್ಚೆಗಳಲ್ಲಿ ರೀತಿಯ ಪ್ರಶ್ನೆಗಳು ಉದ್ಭವಿಸಿದಾಗ ಉಳಿದವರು ಸಾಮಾನ್ಯವಾಗಿ ಉತ್ತರ ಕೊಡುವುದಕ್ಕೆ ಹಿಂಜರಿಯುತ್ತಾರೆ ಅಥವಾ ಕೆಲವರ ಬಳಿ ಉತ್ತರ ಇರುವುದಿಲ್ಲ ಪ್ರವೃತ್ತಿಹೀಗೆಯೇ ಮುಂದುವರೆದು ಬರೇ ಪ್ರಶ್ನೆಗಳೇ ಉಳಿದುಕೊಂಡು ಉತ್ತರಗಳು ಬಾರದಿದ್ದರೆಸಂಸ್ಕೃತಿಗೆ ಉಳಿಗಾಲವೇ ಇರುವುದಿಲ್ಲಹೀಗಾಗಿಸಭ್ಯತೆಯ ಮಾನದಂಡವೇನು?ಅದನ್ನು ನಿಶ್ಚಯಿಸುವುದು ಹೇಗೆಎನ್ನುವ ಬಗ್ಗೆ ಸಾರ್ವತ್ರಿಕವಾಗಿ ಒಪ್ಪುವಂತಹ ವಿಚಾವು ಇಂದು ಹಳ ಅವಶ್ಯಕವಾಗಿದೆ

ಭಾರತೀಯ ಸಂಸ್ಕೃತಿಯು ಹೇಗೆ ಬಹಳ ಆಳವಾಗಿದ್ದು ಕಾರ್ಯಕಾರಣಬದ್ಧವಾಗಿ ವಿಸ್ತಾರವಾಗಿದೆಯೋ ಹಾಗೆಯೇ ಸಂಸ್ಕೃತಿಯ  ಮತ್ತೊಂದು ಮುಖವಾದ ಸಂಸ್ಕೃತಭಾಷೆಯೂ ಸಹ ಕಾರ್ಯಕಾರಣಬದ್ಧತೆಯನ್ನು ಹೊಂದಿದ್ದುವಿಶ್ಲೇಷಣೆಗೆ ಚೆನ್ನಾಗಿ ಕೊಟ್ಟುಕೊಳ್ಳುತ್ತದೆಹೀಗಾಗಿ ಸಭ್ಯತೆ ಪದದ ವಿಶ್ಲೇಷಣೆಯೇ  ವಿಷಯದ ಬಗ್ಗೆ ನಿಶ್ಚಯವಾದಅಭಿಪ್ರಾಯವನ್ನು ಕೊಡಬಲ್ಲದು.

ಸಭ್ಯಅಸಭ್ಯ ಪದಗಳು ಸಭೆ ಅಥವಾ ಸಭಾ ಎನ್ನುವ ಪದದಿಂದ ವಿಸ್ತಾರವಾಗಿವೆಯಾವ ನಡವಳಿಕೆ ಸಭೆಗೆ ಹೊಂದುತ್ತದೆಯೋ ಅದು ಸಭ್ಯ ಮತ್ತು ಯಾವುದು ಸಭೆಗೆಹೊಂದುವುದಿಲ್ಲವೋ ಅದು ಅಸಭ್ಯಇನ್ನು ಭಾ ಎಂದರೇನು ಎಂದು ಪರಿಶೀಲಿಸಿದಲ್ಲಿಸಂಸ್ಕೃತದಲ್ಲಿ 'ಭಾಎಂದರೆ ಬೆಳಕು ಅಥವಾ ಪ್ರಕಾಶ ಎಂದರ್ಥ ಮತ್ತು ಭಾ ಎಂದರೆಬೆಳಕಿನಿಂದೊಡಗೂಡಿರುವುದು ಅಥವಾ ಪ್ರಕಾಶವನ್ನು ಉಂಟು ಮಾಡುವುದು ಎಂದರ್ಥವಾಗುತ್ತದೆವಿಶ್ಲೇಷಣೆಯನ್ನು ಇನ್ನೂ ಪರಿಷ್ಕರಿಸಿದರೆವಿಷಯದ ಬಗ್ಗೆ ಬೆಳಕು ಚೆಲ್ಲಲುಅಥವಾ ವಿಷಯವನ್ನು ಪ್ರಕಾಶಕ್ಕೆ ತರುವ ಉದ್ದೇಶದಿಂದ ಕೂಡಿರುವ ಇಬ್ಬರು ಅಥವಾ ಹೆಚ್ಚಿನ ಜನರ ಸ್ತೋಮವನ್ನು ಸಭಾ ಎಂದು ಹೇಳಬಹುದು.

ಹೀಗೆ ಸಭ್ಯತೆ ಎಂದರೆ ಯಾವ ಉದ್ದೇಶದಿಂ ಸಭೆಯು ಸೇರಿದೆಯೋ  ಉದ್ದೇಶಕ್ಕೆ ಪೋಷಕವಾದ ನಡವಳಿಕೆಯನ್ನಿಟ್ಟುಕೊಳ್ಳುವುದು ಎಂದಾಗುತ್ತದೆ ನೇರದಲ್ಲಿವಸ್ತ್ರಧಾರಣೆಯ ಉದಾಹರಣೆಯನ್ನು ಗಮನಿಸಿದರೆ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ.  

ಒಮ್ಮೆ ಶ್ರೀರಂಗಮಹಾಗುರು ಎಂಬ ಮಹಾತ್ಮರನ್ನು ಅವರ ಶಿಷ್ಯರು ಇನ್ನೊಬ್ಬರೆದುರು ವಿವಸ್ತ್ರರಾಗುವುದು ಸಭ್ಯವೇ ಥವಾ ಅಸಭ್ಯವೇ ಎಂದು ಪ್ರಶ್ನಿಸಿದಾಗ ಮಹಾತ್ಮರು ಸಭೆ ಯಾವುದು ಹೇಳೀಪ್ಪಾ ನಂತರ ಸಭ್ಯವೇ ಅಲ್ಲವೇ ಎನ್ನುವುದನ್ನು ನಿಶ್ಚಯಿಸೋಣ ಎಂದರುಮತ್ತು ಮುಂದುವರೆದು ವೈದ್ಯ-ರೋಗಿಯ ಸಭೆಯಲ್ಲಿರೋಗಿಯು ವಸ್ತ್ರವನ್ನು ಕಳಚುವುದು ಅಸಭ್ಯವಲ್ಲಾಪ್ಪಾ ಎಂದು ಉತ್ತರಿಸಿದರುಅಂದರೆ ಶಸ್ತ್ರಚಿಕಿತ್ಸಾಕೊಠಡಿಯಲ್ಲಿ ರೋಗಿವೈದ್ಯರುಸಹಾಯಕರುರೋಗಮೂಲ ಹಾಗೂ ಚಿಕಿತ್ಸಾವಿಧಾನವನ್ನು ಪ್ರಕಾಶಕ್ಕೆ ತರಲು ಸಭೆ ಸೇರಿರುವಾಗ, ರೋಗಿಯು ವಿವಸ್ತ್ರನಾಗಬೇಕಾದಲ್ಲಿ ಅದು ಸಭ್ಯವೇ ಆಗುತ್ತದೆ ತರ್ಕವನ್ನು  ನಾವು ಮುಂದುವರೆಸಿಅಸಭ್ಯತೆಯ ಉದಾಹರಣೆಯನ್ನು ಗಮನಿಸುವುದಾದರೆ – ಶಾಲಾ-ಕಾಲೇಜು-ಆಫೀಸುಗಳಲ್ಲಿ ದೇಹ ಸೌಂದರ್ಯವನ್ನು ಪ್ರದರ್ಶಿಸು ವಸ್ತ್ರಗಳನ್ನು ಧರಿಸುವುದುಅಸಭ್ಯವೆನ್ನಿಸಿಕೊಳ್ಳುತ್ತದೆಏಕೆಂದರೆ, ಶಾಲಾ-ಕಾಲೇಜುಗಳು ಪಾಠದ ವಿಷಯಗಳನ್ನು ಪ್ರಕಾಶಕ್ಕೆ ತರುವ ಉದ್ದೇಶವಿರುವ ಸಭೆಗಳಾದುದರಿಂದ ಅಲ್ಲಿ ವಿದ್ಯಾರ್ಥಿವಿದ್ಯಾರ್ಥಿನಿಯರ ದೇಹ ಸೌಂದರ್ಯ ಮುಖ್ಯವಲ್ಲದೇಹಸೌಂದರ್ಯದ ಪ್ರಕಾಶವು ಪಾಠದಿಂದ ಗಮನವನ್ನು ಬೇರೆಡೆ ಸೆಳೆಯಬಹುದಾದುದರಿಂದಸಭೆಯ ಉದ್ದೇಶಕ್ಕೆಪೋಷಕವಲ್ಲ ಎಂದಾಗುತ್ತದೆಹೀಗಾಗಿ ದೇಹಸೌಂದರ್ಯವನ್ನು ಪ್ರದರ್ಶಿಸುವ ಉಡುಪುಗಳು ಶಾಲಾ-ಕಾಲೇಜುಗಳಲ್ಲಿ ಅಸಭ್ಯವಾಗುತ್ತದೆಇದೇ ತರ್ಕವನ್ನು ಆಫೀಸು ಮುಂತಾದಅನೇಕ ಸ್ಥಳಗಳಿಗೆ ಅನ್ವಯಿಸಬಹುದು ಮತ್ತು ವಸ್ತ್ರಧಾರಣೆಯಲ್ಲದೇಸಭ್ಯತೆಯ ಇತರ ಅಂಶಗಳಿಗೂ ವಿಸ್ತರಿಸಬಹುದು.

ಹೀಗೆಭಾಷಾ ವಿಶ್ಲೇಷಣೆಯ ಮೂಲಕ ಸಭ್ಯತೆಯು ವ್ಯಕ್ತಿಯ ಸ್ವೇಚ್ಛೆಗೆ ಬಿಟ್ ವಿಷಯವಲ್ಲ, ಸಭೆಯ ಉದ್ದೇಶವೇ ಸಭ್ಯತೆಯನ್ನು ನಿಶ್ಚಯಿಸುವ ಮಾನದಂಡ ಎಂದು ಸಿದ್ಧವಾಗುತ್ತದೆಈ ವ್ಯಾಖ್ಯಾನ ಹಾಗೂ ತರ್ಕವನ್ನು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಸಹ ಅನ್ವಯಿಸಿಕೊಂಡು ಸಭ್ಯಾಸಭ್ಯತೆಗಳನ್ನು ನಿಶ್ಚಯಿಸಬಹುದುಆದುದರಿಂದ ಭಾರತೀಯ ಸಂಸ್ಕೃತಿಯ ಸಭ್ಯಾಸಭ್ಯತೆಯ ಚಿಂತನೆಯು ಭದ್ರವಾದ ವಿಚಾರಶೀಲತೆಯ ಅಡಿಪಾಯವುಳ್ಳದ್ದಾಗಿದ್ದು ಉಡಾಫೆಯ ಪ್ರತ್ರಿರೋಧಕ್ಕೆ ಹಾರಿಹೋಗುವಂತಹದ್ದಲ್ಲ.ಆಳವಾಗಿ ರೂಢಿಸಿಕೊಂಡು ಸಮಾಜವನ್ನು ಸುವ್ಯವಸ್ಥಿತವಾಗಿಯೂ ಸುಂದರವಾಗಿಯೂ ಇಡಬಲ್ಲ, ಮಹರ್ಷಿಗಳ ಅಮೂಲ್ಯಕೊಡುಗೆಯಾಗಿದೆ.

ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ


To know more about Astanga Yoga Vijnana Mandiram please visit our Official Website and Facebook page: