Wednesday, January 15, 2020

ಸಂಕ್ರಾಂತಿ ಹಬ್ಬದ ಆರೋಗ್ಯ ಸುಗ್ಗಿ (Sankranthi habbada aarogya suggi)

ಲೇಖಕರು:  ಡಾ||  ಪುನೀತ್ ಕುಮಾರ್ ಪದ್ಮನಾಭನ್
 BAMS, MD ( AYU ) 
(ಪ್ರತಿಕ್ರಿಯಿಸಿರಿ lekhana@ayvm.in)



ಇಗೋ ನೋಡಿ ಸಂಭ್ರಮದ ಸಂಕ್ರಾಂತಿ ಬಂತು. ಭಾರತೀಯ ಹಬ್ಬ-ಹರಿದಿನಗಳಲ್ಲೊಂದು ಮುಖ್ಯವಾದ ಪರ್ವ. ಈ ಹಬ್ಬದ ಆಚರಣೆ ಪ್ರವೃತ್ತಿ-ನಿವೃತ್ತಿಗಳ ಸಮತೋಲನದಲ್ಲಿ ಭಗವಂತನೆಡೆಗೆ ನಮ್ಮನ್ನು ಸಾಗಿಸುವ ಮಹಾಪರ್ವ.

ಜ್ಞಾನ ಮಾರ್ಗ ಸಂಚಾಲಕರಿಗೆ ಬಹುಪ್ರಿಯವಾದ ಕಾಲ. ಜ್ಞಾನ ಪ್ರಕಾಶವು ಸಹಜವಾಗಿಯೇ ಕಾಣಬರುವ ಕಾಲ. ದೇಹದ ಒಳಗೂ, ಹೊರಗೂ ಉತ್ತರಾಯಣವಾಗುವ ಕಾಲ.ಸಂಕ್ರಾಂತಿಯ ಕಾಲಘಟ್ಟವು ದೈಹಿಕವಾಗಿ, ಭೌಗೋಳಿಕವಾಗಿ ಹಲವಾರು ಮುಖ್ಯ ಬದಲಾವಣೆಗಳಾಗುವ ಪ್ರಮುಖ ಋತು ಕಾಲ. ಸೂರ್ಯನ ದಿಕ್ಕು ಆರೋಗ್ಯದ ದಿಕ್ಕು ಬದಲಾಗುವ ಕಾಲ. ಸಂಕ್ರಾಂತಿ ಪರ್ವಕಾಲದ ಆಚರಣೆಗಳನ್ನು ಗಮನಿಸಿದಾಗ ಆರೋಗ್ಯದ ದೃಷ್ಟಿಕೋನದಲ್ಲಿ ಹೆಣದಿರುವಂತೆ ಕಾಣಬರುತ್ತದೆ. ಈ ವಿಜ್ಞಾನಮಯ ಚಟುವಟಿಕೆಗಳು ಭಾರತೀಯ ಎಲ್ಲಾ ಹಬ್ಬಗಳಿಗೂ ಅನ್ವಯವಾಗುವಂತಹ ಪ್ರಬುದ್ಧ ಸಂಸ್ಕøತಿ ನಮ್ಮದು.

ಭಾರತೀಯ ಸಂಸ್ಕøತಿ ಆಚರಣೆಗಳನ್ನು ಒಳಗೊಂಡಿದ್ದು ವಿಶೇಷವಾಗಿ ಹಬ್ಬದ ಕ್ರಮಾಚರಣೆಗಳು ದೇಹ, ಇಂದ್ರೀಯ ಹಾಗೂ ಮನಸ್ಸುಗಳ ಆರೋಗ್ಯ ಕಾಪಾಡಿ ದೇಹದಲ್ಲಿ ಹವಾಮಾನದಿಂದಾಗಬಹುದಾದ  ವೈಪರೀತ್ಯಗಳನ್ನು ತಡೆಗಟ್ಟುವುದಲ್ಲದೇ ದೇಹದಲ್ಲಿನ ಅತೀ ಮುಖ್ಯ ಕ್ರಿಯಾಕಲಾಪಗಳು ಸರಾಗವಾಗಿ ನಡೆದು ಸ್ವಾಸ್ಥ್ಯ ಪಾಲನೆಗೆ ಸಹಾಯ ಮಾಡುತ್ತವೆ. ಆಚರಣೆಗಳೆಲ್ಲವೂ ದೇಹವೆಂಬ ಕಟ್ಟಡದ ಅಡಿಪಾಯವಾಗಿವೆ, ಎಂಬುದರಲ್ಲಿ ಅತಿಶಯೋಕ್ತಿಯಿಲ್ಲ.

ಸಂಕ್ರಾಂತಿಯನ್ನು ಹಲವಾರು ಹೆಸರುಗಳಿಂದ ಕರೆಯುತ್ತೇವೆ. ಪೆÇಂಗಲ್, ಮಕರಸಂಕ್ರಮಣ, ಉತ್ತರಾಯಣ ಪುಣ್ಯಕಾಲ ಇತ್ಯಾದಿ.ಹೇಮಂತ ಋತುವಿನಿಂದ ಶಿಶಿರ ಋತುವಿಗೆ ಬದಲಾಗುವ     ಸಂಧಿಕಾಲ.

ಈ ದಿನ ಗೋವು-ಪೂಜೆ, ಎಳ್ಳು-ಬೆಲ್ಲ ಹಂಚುವುದು, ಸಹಭೋಜನ, ಪಶುಪಕ್ಷಿಗಳಿಗೆ ಆಹಾರ ನೀಡುವುದು, ಒಳ್ಳೆಯ ಮಾತನಾಡುವುದು, ರಾಕ್ಷಸರಿಗೆ ಊಟ ಬಡಿಸುವುದು, ಶಿಶುಗಳಿಗೆ ವಿಶೇಷವಾಗಿ ಎಳ್ಳು-ಎಲಚಿಹಣ್ಣು (ಬೋರೆಹಣ್ಣು) ತಲೆಯಮೇಲೆ ಸುರಿದು ಸ್ನಾನ ಮಾಡಿಸುವುದು, ಮಕ್ಕಳಿಗೆ ಆರತಿ, ಗುರುಸೇವೆಗಳಲೆಲ್ಲವೂ ಆನಂದ ತಂದುಕೊಡುವ ಆಚರೆಣೆ. "ವಸುಧೈವ ಕುಟುಂಬಕಂ" ಎಂಬ ಋಷಿವಾಣಿಯನ್ನು ಎತ್ತಿಹಿಡಿಯುವ ಯುಗಾಂತರ ಸಂಪ್ರದಾಯ.

ಹೇಮಂತಋತುವಿನ ಹಿಮದ ವಾತಾವರಣ ದೇಹದ ಜೀರ್ಣಶಕ್ತಿಯನ್ನು ಅತೀ ಹೆಚ್ಚಿನ ವೇಗದಲ್ಲಿಟ್ಟಿದ್ದು, ನಮ್ಮ ಹಸಿವು ಹಾಗೂ ಜೀರ್ಣಕ್ರಿಯೆಗಳು ಅತಿಕ್ಲಿಷ್ಟವಾದ ಗಟ್ಟಿಯಾದ ಆಹಾರ ಪಧಾರ್ಥಗಳನ್ನು ಸುಲಭವಾಗಿ ಅರಗಿಸುವ ಶಕ್ತಿಹೊಂದಿರುತ್ತದೆ.ಹೇಮಂತ ಋತುವು ದೇಹಕ್ಕೆ ಸಹಜವಾಗಿಯೇ ಒಲವನ್ನು ನೀಡುವ ಋತುಗಳಲ್ಲಿ ಒಂದು. ನಮ್ಮ ದೇಹದ ಜೀರ್ಣ ಶಕ್ತಿಯು ಅತಿ ಹೆಚ್ಚಾಗಿರುವ ಈ ಕಾಲದಲ್ಲಿ ಉತ್ತಮ ಪೌಷ್ಠಿಕಾಂಶಗಳಿರುವ ರಸವತ್ತಾದ ಆಹಾರ ಸೇವಿಸುವುದು ಮುಖ್ಯ. ಎಣ್ಣೆ ಅಂಶಗಳಿರುವ ಖಾದ್ಯಗಳು ಸಿಹಿ, ಹುಳಿ, ಉಪ್ಪು ಪ್ರಧಾನವಾದಂತಹ ಆಹಾರಗಳು ಸೂಕ್ತ. ಈ ಕಾಲದಲ್ಲಿ ಹಾಲು, ಉದ್ದಿನ ಬೇಳೆ, ಕಬ್ಬು, ತೈಲ, ಧಾನ್ಯಗಳು ಪ್ರಧಾನವಾಗಿ ಸೇವಿಸಬೇಕು.

ಶಿಶಿರ ಋತುವಿನಲ್ಲಿ ಹೇಮಂತದ ಶೀತವು ಇನ್ನೂ ಹೆಚ್ಚಾಗಿ ಚಳಿಗಾಳಿಯಿಂದ ಇನ್ನಷ್ಟು ಚೆರ್ಮ ಒಣಗಿ ದೇಹ ಬಲಹೀನವಾಗಲು ಕಾರಣವಾಗುತ್ತದೆ. ಹಾಗಾಗಿ ಎಣ್ಣೆಯ ಅಂಶವಿರುವ ಎಳ್ಳು, ಸಿಹಿಯಾದ ಬೆಲ್ಲ, ಪೌಷ್ಠಿಕವಾದ ಕಡ್ಲೆಕಾಯಿ ಬೀಜ, ಸಕ್ಕರೆ, ಕಬ್ಬು, ಸಿಹಿಗೆಣಸು ಆಹಾರದಲ್ಲಿ ಯತೇಚ್ಛವಾಗಿ ಬಳಸಬೇಕು.

ಈ ಹಿಂದೆ ಶರತ್‍ಕಾಲ, ಹೇಮಂತಕಾಲದಲ್ಲಿ ಉಂಟಾಗಿರಬಹುದಾದ ಚರ್ಮವ್ಯಾದಿಗಳು, ಅಸ್ತಮ, ಕೀಲುನೋವುಗಳು, ಜ್ವರ  (Infectious Fevers),  ತಲೆ ನೋವು (Migraine), ಸರ್ಪಸುತ್ತು (Herpes) , ದದ್ರ (Urticaria), ನಾವು ಸೇವಿಸುವ ಪ್ರಸಾದ ರೂಪವಾದ ಎಳ್ಳು - ಬೆಲ್ಲ, ಸಕ್ಕರೆ ಅಚ್ಚುಗಳಿಂದ ರೋಗ ನಿವಾರಣೆಯಾಗುವುದು. 

ಸಂಕ್ರಾಂತಿಯಂದು ನಾವುತಯಾರಿಸಿ ನೈವೇದ್ಯ ಮಾಡಿ ಸೇವಿಸುವ ಹೆಸರುಬೇಳೆ ಹುಗ್ಗಿಯೂ ಕೂಡಾ ವಾತಾ ಪಿತ್ತಗಳನ್ನು ಹತೋಟಿಯಲ್ಲಿ ತರುವುದು.

ಉತ್ತರ ಎಂದರೆ "ಶ್ರೇಷ್ಠವಾದದ್ದು" ಎಂಬರ್ಥವುಂಟು. ಇದು ಜ್ಞಾನಮಾರ್ಗಕ್ಕೆ, ಜಪ, ತಪ, ಧ್ಯಾನ, ದೀಕ್ಷೆ, ತರ್ಪಣ, ಪೂಜೆ, ಹೋಮ, ಶ್ರಾದ್ಧ ಕೆಲಸಗಳಿಗೆ ಅತ್ರ್ಯತೃಷ್ಟಕಾಲ. ಮಹಾಭಾರತಕಾಲದಲ್ಲಿ ಭೀಷ್ಮಚಾರ್ಯರಿಗೂ ಕೂಡಾ ಇಂತಹ ಪರ್ವಕಾಲಕ್ಕೆ ಕಾದಿದ್ದ ಉದಾಹರಣೆ ನಮಗೆ ತಿಳಿದೇ ಇದೆ.

ಸಂಕ್ರಾಂತಿಯಲ್ಲಿ ಎಳ್ಳೆಣ್ಣ ಅಭ್ಯಂಗಸ್ನಾನ, ಮೂರ್ಧತೈಲ (ನೆತ್ತಿಯ ಮೇಲೆ ಎಣ್ಣೆ ಸುರಿದುಕೊಳ್ಳುವ ಸ್ನಾನ), ಕುಸ್ತಿ ಆಟವಾಡುವುದು, ಪಾದಾಘಾತ (ಪಾದಗಳಿಂದ ತುಳಿದು ಅಂಗ ಮರ್ದನ ವಿಧಾನ) ಇವುಗಳೆಲ್ಲವೂ ದೇಹದ ವಾತದೋಷ ನಿವಾರಿಸಿ, ಬಲನೀಡುತ್ತವೆ.

ಅಭ್ಯಂಜನದ ನಂತರ ಅಂಟ್ವಾಳ, ಬೋರೆಹಣ್ಣು, ಔದುಂಬರ (ಅತ್ತಿಮರ)ದ ತೊಗಟೆಯಿಂದ ತಯಾರಿಸಿದ ಕಷಾಯಸ್ನಾನ ಮಾಡಿ, ನಂತರ ಕುಂಕುಮಕೇಸರ, ಅಗರು (ಧೂಪದಮರ,) ಕಸ್ತೂರಿಗಳ ಅಂಗಲೇಪನ ಮಾಡಿಕೊಳ್ಳಬೇಕು. ಸ್ನಾನಕ್ಕೆ ಬಿಸಿನೀರು ಶ್ರೇಷ್ಠ. ಬಲವಂತರು ತಣ್ಣೀರು ಕೂಡಾ ಉಪಯೋಗಿಸಬಹುದು.

ಸ್ನಾನ ಲೇಪನಗಳ ನಂತರ ಗೋಧಿ, ಉದ್ದು, ಕಬ್ಬು, ಹಾಲು, ಜೋಳ, ಎಣ್ಣೆ ಇತ್ಯಾದಿ ಪದಾರ್ಥಗಳಿಂದ ತಯಾರಿಸಿದ ಆಹಾರ ಇಡೀ ಋತುವಿನಲ್ಲಿ ಸೇವಿಸಬೇಕು.

ಎಳ್ಳು ಹಾಗೂ ಬೆಲ್ಲ, ಉಷ್ಣ ಪಧಾರ್ಥಗಳಾಗಿದ್ದು ಚಳಿಗಾಲದ ಶೈತ್ಯಕ್ಕೆ ಔಷಧಿಗಳಾಗಿವೆ. ಹಾಲು, ಉದ್ದು, ತೈಲ, ಕಬ್ಬು, ಧಾನ್ಯಗಳು,ಸಿಹಿಗೆಣಸು, ಕಡಲೇಕಾಯಿಬೀಜ ಇವುಗಳೆಲ್ಲವೂ ದೇಹಕ್ಕೆ ಹೆಚ್ಚು ಬಲ ಪುಷ್ಟಿ ನೀಡುವ ಹಾಗೂ ಹಸಿವನ್ನು ತಣಿಸುವ ಪಧಾರ್ಥಗಳು, ದೇಹದಲ್ಲಿ ಹೆಚ್ಚಾಗಿರುವ ವಾತ-ಪಿತ್ತಗಳನ್ನು ನಿವಾರಿಸುವುವು. ಎಳ್ಳು ಪೀಡಾ ಪರಿಹಾರಕ, ಅನಿಷ್ಠ ಪರಿಹಾರಿ ಕೂಡಾ.

ಸಂಕ್ರಾಂತಿಯಂದು ನಾವು ತಯಾರಿಸಿ ನೈವೇದ್ಯ ಮಾಡಿ ಸೇವಿಸುವ ಹೆಸರು ಬೇಳೆ ಹುಗ್ಗಿಯೂ ಕೂಡಾ ವಾತಪಿತ್ತಗಳನ್ನು ಹತೋಟಿಯಲ್ಲಿ ತರುವುದು.

ಪ್ರತ್ಯೇಕವಾಗಿ ಎಳ್ಳನ್ನು ಹೆಚ್ಚು ಸೇವಿಸಿದಾಗ ಮನಸ್ಸಿನ ಪ್ರವೃತ್ತಿ ಹೆಚ್ಚಾಗುತ್ತದೆ, ಕಫ ಹಾಗೂ ಪಿತ್ತಗಳು ಕೆರಳುತ್ತವೆ. ಹಾಗಾಗಿ ಎಳ್ಳನ್ನು ಹುರಿದು ಅದಕ್ಕೆ ಬೆಲ್ಲ, ಕೊಬ್ಬರಿಚೂರು, ಹುರಿದ ಕಡಲೇಬೀಜ, ಹುರಿಕಡಲೆ ಇವುಗಳನ್ನು ಸೇರಿಸಿ ಸೇವನೆ ಮಾಡಬೇಕೆಂದು ಋಷಿಗಳು ತಿಳಿಸಿ ಕೊಟ್ಟಿರುವ ವಿಷಯ. ಶಾಸ್ತ್ರ ವಾಕ್ಯಾವಿಲ್ಲದಿದ್ದರು ಶ್ರೀರಂಗ ಮಹಾಗುರುಗಳು ಇದನ್ನು ಪ್ರಯೋಗ ವಿಜ್ಞಾನದಲ್ಲಿ ತಿಳಿಸಿಕೊಟ್ಟಿದ್ದಾರೆ.

ಇಕ್ಷು ದಂಡ (ಕಬ್ಬಿನ ಜೊಲ್ಲೆ) ಇದು ಮನಸ್ಸು ತತ್ವದ ರೂಪ.ಇದನ್ನು ಸಂಕ್ರಾಂತಿಯ ದಿನ ಬಳಸುವುದಕ್ಕೆ ಆಧಿಭೌತಿಕ ಹಾಗೂ ಆಧ್ಯಾತ್ಮಿಕ ಅರ್ಥಗಳಿವೆ. ಕಬ್ಬು ದೇಹದಲ್ಲಿ ಹೆಚ್ಚಾಗಿರುವ ಪಿತ್ತವಾತಗಳನ್ನು ನಿಯಂತ್ರಿಸಿ ತ್ರಿದೋಷಗಳಲ್ಲಿ ಸ್ವಾಸ್ಥ್ಯ ತರುತ್ತದೆ.

ಬದರಿ / ಎಲಚೆಹಣ್ಣಿನ ಉಪಯೋಗದಿಂದ ರಕ್ತ ಶುದ್ಧಿಯಾಗಿ ಚರ್ಮವ್ಯಾದಿಗಳು ನಿವಾರಣೆಯಾಗುತ್ತದೆ. ಜೀರ್ಣಶಕ್ತಿಯನ್ನು ಉದ್ಧೀಪನಗೊಳಿಸುತ್ತದೆ. ವಾಂತಿ ಭೇದಿ ನಿಯಂತ್ರಿಸುತ್ತದೆ. ಜ್ವರ ನಾಶಕ, ಹುಣ್ಣು ಗಾಯಗಳನ್ನು ವಾಸಿಮಾಡುವುದು, ನೋವು ನಿವಾರಕವೂ ಹೌದು.

ಹೀಗೆ ಭಾರತೀಯ ಹಬ್ಬಹರಿದಿನಗಳು, ಜಾತ್ರೆ - ಸಂತೆಗಳು,ನಿತ್ಯನೈಮಿತ್ತಿಕ ಕರ್ಮಗಳು, ದೈನಂದಿನ ಹಾಗೂ ಕಾಲಕ್ಕನುಗುಣ ಆಚರಣೆಗಳೆಲ್ಲವೂ ಒಂದು ವೈಜ್ಞಾನಿಕ ಹಿನ್ನಲೆ ಹೊಂದಿರುವುದರೊಂದಿಗೆ ಅದರಲ್ಲಿ ಆಯಾ ಪ್ರದೇಶಕ್ಕನುಸಾರವಾಗಿ ಋತು ಅನುಸಾರವಾಗಿ ಹೆಣೆಯಾಲಾಗಿದೆ. ಇದರ ಆಚರಣೆಗಳೆಲ್ಲವೂ ದೇಹ ಮನಃಶಾಂತಿಯನ್ನು ತಂದು ಆತ್ಮ ತೃಪ್ತಿಗೆ ಪೂರಕವಾಗಿದೆ. ಇವುಗಳ ಆಚರಣೆಗಳಲ್ಲಿ ಯಾವುದೇ ಬದಲಾವಣೆಗಳ ಅವಶ್ಯಕತೆ ಕಾಣುವುದಿಲ್ಲ, ನ್ಯೂನತೆ ಮೂಡನಂಬಿಕೆಗಳಿಲ್ಲ, ಅವೈಜ್ಞಾನಿಕವೂ ಅಲ್ಲ. ನಮ್ಮಲ್ಲಿ ಕೆಲವರು ಪಾಶ್ಚ್ಯಾತರ ಪ್ರೇರಣೆಯಿಂದ ನಮ್ಮ ಸಂಸ್ಕøತಿಯನ್ನು ಅವೈಜ್ಞಾನಿಕ ಎಂದು ಕರೆಯುವುದು ಬಾಲಿಷ ಎನ್ನಿಸುತ್ತದೆ. ಹಬ್ಬಗಳ ಆಚರಣೆಗಳು ಮಾನವ ಹಾಗೂ ಪರಿಸರವನ್ನು ಜೊತೆಗೆ ಹೆಣೆದು ಅದರ ಐಕ್ಯತೆ ಸಾಮ್ಯತೆಯನ್ನು ಸಾರಿ ಜೀವಿಗಳ ಆರೋಗ್ಯ ಪಾಲನೆ ಮಾಡಿ ಜೀವನದ ಧ್ಯೇಯ-ಉದ್ಧೇಶ್ಯನಾದ ಭಗವಂತನೆಡೆಗೆ ಸಾಗಲು ಹೆಜ್ಜೆ ಹೆಜ್ಜೆಗಳಾಗಿ ನಮ್ಮನ್ನು ಕರೆದೊಯ್ಯುವ ದೀಪಗಳು.

ಹೀಗೆ ಆಯುರ್ವೇದದ ಮೂಲಕ ಆರೋಗ್ಯದಾಯಕ ಹಬ್ಬದ ಆಚರಣೆಗಳನ್ನು ಅಥ್ರ್ಯೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಹಬ್ಬದ ಅರ್ಥ ವಿಜ್ಞಾನಮಯವಾಗುವುದರಲ್ಲಿ ಸಂಶಯವಿಲ್ಲ.

ಸೂಚನೆ:  ಮಕರ ಸಂಕ್ರಾಂತಿಯ ದಿನಾಂಕ 15/01/2020 ರಂದು ಈ ಲೇಖನ  ವಿಜಯವಾಣಿ  ವಾರ್ತಾಪತ್ರಿಕೆಯಲ್ಲಿ ಆಯ್ದ ಭಾಗವು ಪ್ರಕಟವಾಗಿದೆ.